ಸ್ಯಾಂಡಲ್​ವುಡ್​​ಗೆ ಹೊಸ ಟೆನ್ಷನ್ ಕೊಟ್ಟ ಹೇಮಾ ವರದಿ: ಮಂಚಕ್ಕೆ ಕರೆದವರಿಗೆ ಶುರುವಾಗುತ್ತಿದೆ ಕೈ ಕಾಲು ನಡುಕ!

ಹೇಮಾ ವರದಿ ಮಾಲಿವುಡ್ ನಲ್ಲಿ ಸುನಾಮಿ ಎಬ್ಬಿಸಿದೆ. ಕೇರಳದಲ್ಲಿ ಎದ್ದಿರೋ ಈ ಸುನಾಮಿ ಈಗ ಸ್ಯಾಂಡಲ್​ವುಡ್​​​ಗೂ ಬಂದಪ್ಪಳಿಸಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತಕ್ಷಣ ಸಭೆ ಮಾಡಲು ಕರ್ನಾಟಕ ಮಹಿಳಾ ಆಯೋಗ ಹೇಳಿದೆ. 

Share this Video
  • FB
  • Linkdin
  • Whatsapp

ಹೇಮಾ ವರದಿ ಮಾಲಿವುಡ್ ನಲ್ಲಿ ಸುನಾಮಿ ಎಬ್ಬಿಸಿದೆ. ಕೇರಳದಲ್ಲಿ ಎದ್ದಿರೋ ಈ ಸುನಾಮಿ ಈಗ ಸ್ಯಾಂಡಲ್​ವುಡ್​​​ಗೂ ಬಂದಪ್ಪಳಿಸಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತಕ್ಷಣ ಸಭೆ ಮಾಡಲು ಕರ್ನಾಟಕ ಮಹಿಳಾ ಆಯೋಗ ಹೇಳಿದೆ. ಹಾಗಾದ್ರೆ ಸ್ಯಾಂಡಲ್​ವುಡ್​​ನಲ್ಲಿ ಈ ಮೀಟು ಘಾಟು ಹೇಗೆ ಹಬ್ಬುತ್ತಿದೆ..? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ನಟ ಚೇತನ್, ಶೃತಿ ಹರಿಹರನ್, ನಟಿ ನೀತು ಸೇರಿದಂತೆ 153 ಜನ ಸಹಿ ಹಾಕಿ ಸ್ಯಾಂಡಲ್​ವುಡ್​​ನಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಸರ್ಕಾರ ಸಮೀತಿ ರಚಿಸುವಂತೆ ಫೈರ್​ ಸಂಸ್ಥೆ ಸರ್ಕಾರಕ್ಕೆ ಮನವಿ ಮಾಡಿದ್ದೇ ತಡ ಈಗ ಕನ್ನಡ ಚಿತ್ರರಂಗದಲ್ಲಿ ಮೀಟು ಘಾಟು ಧಗ ಧಗಿಸುತ್ತಿದೆ. ಕನ್ನಡದ ನಟ ನಟಿಯರೆಲ್ಲಾ ಈ ವರಧಿ ಜಾರಿ ಆಗ್ಲಿ ಪಲ್ಲಂಗಕ್ಕೆ ಕರೆದವರು. ಕರೆಯೋರಿಗೂ ಶಿಕ್ಷೆ ಆಗ್ಲಿ ಅಂತ ಹೇಳುತ್ತಿದ್ದಾರೆ. 

ಹೇಮಾ ವರಧಿ ಬಂದ ಮೇಲೆ ಮಲೆಯಾಳಂ ಸಿನಿಮಾ ಜಗತ್ತಿನ ಕಾಮುಖ ಕಣ್ಣುಗಳ ಕರಾಳ ಕತೆಗಳು ಬಯಲಾಗ್ತಿವೆ. ಹಾಗೆ ನಮ್ಮ ಸ್ಯಾಂಡಲ್​ವುಡ್​ಅನ್ನ ಕಾಮುಕ ಕಣ್ಣುಗಳನ್ನ ಕ್ಲೀನ್ ಮಾಡೋಕೆ ಸರ್ಕಾರ ಹೊಸ ಹೆಜ್ಜೆ ಇಟ್ರು ಆಶ್ಚರ್ಯವೇನಿಲ್ಲ. ಅಷ್ಟರೊಗಳಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಾಗು ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್​ಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಚಿತ್ರರಂಗದ ನಟಿಯರನ್ನು ಕರೆದು ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಸಮಿತಿ ರಚಿಸಲು ಒತ್ತಾಯಿಸಿ ತೀರ್ಮಾನ ತೆಗೆದುಕೊಳ್ಳಿ ಈ ಸಭೆ ಸೆಪ್ಟೆಂಬರ್ 13ರ ಒಳಗೆ ನಡೆಸುವಂತೆ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಯಿಂದ ಪತ್ರ ಬರೆದಿದ್ದಾರೆ. 

ಬಣ್ಣದ ಜಗತ್ತು ನೋಡೋಕೆ ಕಲರ್​ ಫುಲ್. ಆದ್ರೆ ಅದರೊಳಗೆ ಇಳಿದವರಿಗೆ ಗೊತ್ತು ಅದು ಎಷ್ಟು ಕೊಳಕು ಅಂತ ಸಿನಿಮಾ ರಂಗದವರೇ ಹೇಳುತ್ತಾರೆ. ಯಾಕಂದ್ರೆ ಇಲ್ಲಿ ಕಾಂಪ್ರಮೈಸ್ ಅನ್ನೋದು ಕಾಮನ್. ಕಾಂಪ್ರಮೈಸ್ ಆದ್ರೇನೆ ನಟಿಯರಿಗೆ ಅಭಿನಯಿಸೋಕೆ ಚಾನ್ಸ್. ಇದರ ವಿರುದ್ಧ ಧ್ವನಿ ಎತ್ತಿದವರು ಎಷ್ಟೋ ಜನ. ಹಾಗೇ ಅಷ್ಟು ಬೇಗ ಅವರ ಧ್ವನಿ ಕೂಡ ಅಡಗಿದ್ದು ಅಷ್ಟೇ ಸತ್ಯ. ಆದ್ರೆ ಇನ್ಮುಂದೆ ಹಾಗಾಗಬಾರದು. ಪಾತ್ರಕ್ಕಾಗಿ ಪಲ್ಲಂಗಕ್ಕೆ ಕರೆದರಿಗೆ ಶಿಕ್ಷೆ ಆಗ್ಲೇ ಬೇಕು ಅಂತ ಕೂಗು ಜೋರಾಗಿದೆ. ಇದರಿಂದ ಸ್ಯಾಂಡಲ್​ವುಡ್​ನಲ್ಲಿರೋ ಕೆಲ ಕಾಮ ಕ್ರಿಮಿಗಳಿಗೆ ಚಳಿ ಜ್ವರ ಶುರುವಾಗಿರೋದಂತು ಸತ್ಯ.

Related Video