ಗುರು ಶಿಷ್ಯರು; ಶರಣ್ ಸರ್ ನನಗೆ ಎಂಎಸ್ ಧೋನಿ ಅಂತ ಕರಿತ್ತಿದ್ರು- ನಟ ಮಣಿಕಂಠ

ಗುರು ಶಿಷ್ಯರು ಸಿನಿಮಾ ಬಗ್ಗೆ ಮಾತನಾಡಿದ ನಟ ಮಣಿಕಂಠ  ಶರಣ್ ಸರ್ ನನ್ನನ್ನು ಎಂಎಸ್ ಧೋನಿ ಅಂತ ಕರಿತಾ ಇದ್ರು ಎಂದು ಹೇಳಿದ್ದಾರೆ. ಧೋನಿ ಹಾಗೆ ನಾನು ಕೂಡ ಪರೀಕ್ಷೆ ಬರೆದು ಶೂಟಿಂಗ್‌ಗೆ ಬರ್ತಾ ಇದ್ದೆ. ಹಾಗಾಗಿ ಶರಣ್ ಸರ್ ಹಾಗೆ ಕರಿಯುತ್ತಿದ್ದರು ಎಂದು ಹೇಳಿದ್ದಾರೆ.   

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಗುರುಶಿಷ್ಯರು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹೌದು, ಈ ಬಾರಿ ಗುರು ಶಿಷ್ಯರಾಗಿ ತೆರೆಮೇಲೆ ಬರ್ತಿದ್ದಾರೆ ಕಾಮಿಡಿ ಅಧ್ಯಕ್ಷ ಶರಣ್. ಸದ್ಯ ಗುರು ಶಿಷ್ಯರು ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಬಿಡಗಡೆಯಾದ ಗುರುಶಿಷ್ಯರು ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ಗುರುಶಿಷ್ಯರು ತಂಡ ಹಾಜರಿತ್ತು. ವಿಶೇಷ ಎಂದರೆ ಈ ಸಿನಿಮಾದಲ್ಲಿ ಸ್ಟಾರ್ ಕಿಡ್ಸ್ ಕೂಡ ನಟಿಸಿದ್ದಾರೆ. ಶರಣ್ ಜೊತೆ ಪುತ್ರ, ನೆನಪಿರಲಿ ಪ್ರೇಮ್ ಪುತ್ರ, ರವಿಶಂಕರ್ ಪುತ್ರ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖೋ ಖೋ ಆಟದ ಬಗ್ಗೆ ಇರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿದ ನಟ ಮಣಿಕಂಠ, ಶರಣ್ ಸರ್ ನನ್ನನ್ನು ಎಂಎಸ್ ಧೋನಿ ಅಂತ ಕರಿತಾ ಇದ್ರು ಎಂದು ಹೇಳಿದ್ದಾರೆ. ಧೋನಿ ಹಾಗೆ ನಾನು ಕೂಡ ಪರೀಕ್ಷೆ ಬರೆದು ಶೂಟಿಂಗ್‌ಗೆ ಬರ್ತಾ ಇದ್ದೆ. ಹಾಗಾಗಿ ಶರಣ್ ಸರ್ ಹಾಗೆ ಕರಿಯುತ್ತಿದ್ದರು ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video