Asianet Suvarna News Asianet Suvarna News

ಗನ್‌ ಪಾಯಿಂಟ್‌ನಲ್ಲಿ ಹಾಸ್ಯ ನಟ: ಕ್ಯಾಮೆರಾ ಮುಂದೆ ಕಣ್ಣೀರು

Sep 15, 2021, 10:02 AM IST

ವಿಜಯಪುರ(ಸೆ.15): ಭೀಮಾತೀರದ ಹಂತಕರ ಕುಖ್ಯಾತಿಯ ವಿಜಯಪುರದಲ್ಲಿ ಮತ್ತೆ ಬಂದೂಕಿನ ಹಾವಳಿ ಶುರುವಾಗಿದೆ. ಇಲ್ಲಿನ ಗನ್ ಸಂಸ್ಕೃತಿ ಹಾಸ್ಯ ಕಲಾವಿದನ್ನು ಸುಮ್ಮನೆ ಬಿಟ್ಟಿಲ್ಲ. ಹಣೆಗೆ, ಬಾಯಲ್ಲಿ ಪಿಸ್ತೂಲಿನ ನಳಿಕೆ ಇಟ್ಟಿದ್ದು ನಟ ರಾಜು ತಾಳಿಕೋಟೆ ಬೆಚ್ಚಿಬಿದ್ದಿದ್ದಾರೆ. ಭಯಬಿದ್ದು ಏಷ್ಯಾನೆಟ್ ಸುವರ್ಣ ನ್ಯೂಜ್ ಕ್ಯಾಮರಾ ಎದುರು ನಟ ಕಣ್ಣೀರಿಟ್ಟಿದ್ದಾರೆ.

ಕಣ್ಣೀರಿಡುತ್ತಲೇ ಇಡೀ ಪ್ರಕರಣ ಸ್ಪೋಟಕ ಸತ್ಯ ಹೇಳಿದ್ದಾರೆ ನಟ. ಅಳಿಯನ ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯನ್ನ ಪ್ರಶ್ನಿಸಿದ್ದಕ್ಕೆ ರಾಜು ತಾಳಿಕೋಟೆ  ಹಣೆಗೆ ಪಿಸ್ತೂಲ್ ಇಟ್ಟಿದ್ದಾರೆ ಎನ್ನಲಾಗಿದೆ. ಸಂಬಂಧಿಕ ಶೇಖ್ ಮೋದಿ ಎಂಬವರೇ ಹಣೆಗೆ ಪಿಸ್ತೂಲು ಇಟ್ಟಿದ್ದಾರೆ.

ಬೆಂಗ್ಳೂರಲ್ಲಿ ಮತ್ತೊಂದು ಭೀಕರ ಅಪಘಾತ: ಫ್ಲೈವ್‌ ಓವರ್‌ನಿಂದ ಬಿದ್ದು ಇಬ್ಬರ ದುರ್ಮರಣ

ಸಿಎಂ ಬೊಮ್ಮಾಯಿ ಅವರಿಗೆ ವಿಷಯ ಮುಟ್ಟಿಸಿ. ಶಿವರಾಜ್ ಕುಮಾರ್ ಅವರ ಜೊತೆಗು ಮಾತನಾಡುವೆ. ಕಲಾವಿದ ಒಕ್ಕೂಟ ಕೂಡ ಈ ವಿಚಾರದಲ್ಲಿ ಧ್ವನಿ ಎತ್ತಬೇಕು ಎಂದು ಅಂಗಲಾಚಿದ್ದಾರೆ. ನಾನೇ ತಪ್ಪು ಮಾಡಿದ್ರು ನನಗೆ ಶಿಕ್ಷೆಯಾಗಲಿ. ಈ ಪ್ರಕರಣದ ಹಿಂದೆ ಕೆಲ‌ ಅಧಿಕಾರಿಗಳಿದ್ದಾರೆ. ಆ ಅಧಿಕಾರಿಗಳಿಗೆ ಗನ್ ಇಟ್ಟ ಶೇಖ್ ಮೋದಿ ಹೆಂಗಸರನ್ನ ಸ್ಪಪ್ಲೈ ಮಾಡ್ತಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ ನಟ.