'ಘೋಸ್ಟ್' ಫಸ್ಟ್ ಡೇ ಕಲೆಕ್ಷನ್ 8 ಕೋಟಿ: ಶಿವಣ್ಣ ಜೂಟಾಟ ಫ್ಯಾನ್ಸ್‌ಗೆ ಹಬ್ಬದೂಟ..!
'ಘೋಸ್ಟ್' ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ..?
ದಸರಾ ಧಮಾಕ ಘೋಸ್ಟ್ ನೋಡಿ ಪ್ರೇಕ್ಷಕ ಏನಂದ್ರು?
ಜೈಲು ಹೈಜಾಕ್ ಕಥೆಗೆ ಡೈರೆಕ್ಟರ್ ಶ್ರೀನಿ ಶ್ರಮ..!
ಕಣ್ಣಿಗೆ ಎಣ್ಣೆ ಬಿಡ್ಕೊಂಡ್ ಸಿನಿಮಾ ನೋಡೋದು ಅಂತಾರಲ್ಲಾ ಅದು ಇದೆ ನೋಡಿ. ಘೋಸ್ಟ್(Ghost) ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್(Shivaraj kumar) ಅಭಿಮಾನಿಗಳ ಎಮೋಷನ್. ಈ ಸಿನಿಮಾದ ಮೇಲೆ ಕರುನಾಡ ಚಕ್ರವರ್ತಿ ಫ್ಯಾನ್ಸ್‌ಗೆ ಭಾರಿ ನಿರೀಕ್ಷೆ ಇತ್ತು. ಹೀಗಾಗಿ ಅಕ್ಟೋಬರ್ 18ರ ಮಿಡ್‌ನೈಟ್ 12 ಗಂಟೆಯಿಂದಲೇ ಘೋಸ್ಟ್ ಪ್ರದರ್ಶನ ಶುರುವಾಗಿತ್ತು. ಹೀಗಾಗಿ ಸೂಪರ್ ಡೂಪರ್ ಓಪನಿಂಗ್ ಪಡೆದ ಘೋಸ್ಟ್ ಹಳೇ ರೆಕಾರ್ಡ್‌ಗಳನ್ನೆಲ್ಲಾ ಬ್ರೇಕ್ ಮಾಡಿದೆ. ಘೋಸ್ಟ್ ಈಗಿನ ಟ್ರೆಂಡಿ ಸಿನಿಮಾ. ಅದ್ಧೂರಿ ಮೇಕಿಂಗ್, ಥ್ರಿಲ್ ಕೊಡೋ ಬಿಜಿಎಂ, ಕ್ರೈಂ ಸ್ಟೋರಿ, ಹಬ್ಬದಂತೆ ಆಣೋ ವಿಶ್ಯುವಲ್ ಟ್ರೀಟ್. ಅದಕ್ಕೆ ತಕ್ಕಂತೆ ಶಿವಣ್ಣ, ಅನುಪಮ್ ಖೇರ್, ಜಯರಾಂಯ ಸೂಪರ್ ಆಕ್ಟಿಂಗ್. ಇಷ್ಟಿದ್ಮೇಲೆ ಘೋಸ್ಟ್ ಸಿನಿಮಾ ಹಿಟ್ ಆಗ್ದೆ ಇರುತ್ತೆ. ಈ ಘೋಸ್ಟ್ ಫಸ್ಟ್ ಡೇನೆ ಭರ್ತಿ 8 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಕೇವಲ 48 ಗಂಟೆಗಳಲ್ಲಿ ನಡೆಯೋ ಸಸ್ಪೆನ್ಸ್ ಥ್ರಿಲ್ಲರ್ ಘೋಸ್ಟ್.. ಇಲ್ಲಿ ಸಾಂಗ್ಸ್ಗೆ ಜಾಗ ಇಲ್ಲ. ಆದ್ರೆ ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಥ್ರಿಲ್ ಕೊಡುತ್ತೆ. ಮಹೇಂದ್ರ ಸಿಂಹ ಛಾಯಾಗ್ರಹಣ ಹಾಲಿವುಡ್ ಮೂವಿ ನೋಡಿದ ಫೀಲ್ ಕೊಡುತ್ತೆ. ಶಿವಣ್ಣನ ತ್ರಿಬಲ್ ಶೇಡ್ ಲುಕ್ಫ್ಯಾನ್ಸ್‌ಗೆ ಹಬ್ಬ.
ಇದನ್ನೂ ವೀಕ್ಷಿಸಿ: ಅಣ್ಣನ ಸಿನಿಮಾಗೆ ಶುಭ ಕೋರಲು ಬರಲೇ ಇಲ್ಲ ರಾಧಿಕಾ ಕುಮಾರಸ್ವಾಮಿ: ಯಾಕೆ ಬಂದಿಲ್ಲ ಗೊತ್ತಾ?