ಚಿತ್ರರಂಗದ ಉಳಿವಿಗಾಗಿ, ಏಳಿಗೆಗಾಗಿ ಹೋಮದ ಮೊರೆ: ಹಿರಿಯ ಪತ್ರಕರ್ತ ಜೋಗಿ ಕೊಟ್ಟಿದ್ದಾರೆ ಉತ್ತಮ ಸಲಹೆ!
ಹೋಮದ ನಂತರ ಬಿಡುಗಡೆಗೊಂಡ ಕನ್ನಡ ಚಿತ್ರಗಳು ನೂರು ದಿನಗಳ ಸಕ್ಷಸ್ ಕಾಣುತ್ತವಾ? ಈ ಕುರಿತು ಇನ್ನು ಕೆಲ ಹಿರಿಯರು ಏನ್ ಹೇಳಿದ್ದಾರೆ. ಕನ್ನಡ ಚಿತ್ರರಂಗ ಕಷ್ಟದಲ್ಲಿದೆ, ನೋವಿನಲ್ಲಿದೆ ಎಂಬ ಕಾರಣಕ್ಕೆ ಹಿರಿಯರೆಲ್ಲ ಸೇರಿಕೊಂಡು ಹೋಮ ಮಾಡಿಸಲು ಮುಂದಾಗಿದ್ದಾರೆ.
ಕನ್ನಡ ಚಿತ್ರರಂಗದ ವತಿಯಿಂದ ಡಾ. ರಾಜ್ ಭವನದಲ್ಲಿ ಹೋಮ ನಡೆದಿದೆ. ಚಿತ್ರರಂಗದ ಏಳಿಗೆಗಾಗಿ ಈ ಹೋಮವನ್ನು ಮಾಡಲಾಗುತ್ತಿದೆಯಂತೆ. ಕೆಲ ತಿಂಗಳುಗಳಿಂದ ಚಿತ್ರರಂಗದಲ್ಲಿ ಬರೀ ಅಹಿತಕರ ಘಟನೆಗಳೇ ನಡೆದಿವೆ. ಹೀಗಾಗಿ ಚಿತ್ರರಂಗದ ಒಳಿತಿಗಾಗಿ, ಚಿತ್ರರಂಗದ ಅಭಿವೃದ್ಧಿಗಾಗಿ ಈ ಹೋಮ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದ್ರೆ ನಾಳೆಯ ಈ ಹೋಮಕ್ಕೆ ಚಿತ್ರರಂಗದಲ್ಲಿಯೇ ಅಪಸ್ವರವಿದೆ. ಆ ಕುರಿತು ತಿಳಿಯೋದೇ ಈ ಕ್ಷಣದ ವಿಶೇಷ ಸ್ಯಾಂಡಲ್ವುಡ್ಗೆ ಸರ್ಪಶಾಂತಿ..! ಹಾಗಿದ್ರೆ, ಇವರೆಲ್ಲ ಒಟ್ಟಾಗಿ ಹೋಮ-ಹವನ ಮಾಡಿಸಿದ ಮೇಲೆ ಕನ್ನಡ ಚಿತ್ರರಂಗ ಎದುರಿಸುತ್ತಿರು ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕು ಬಿಡುತ್ತಾ? ಹೋಮದ ನಂತರ ಬಿಡುಗಡೆಗೊಂಡ ಕನ್ನಡ ಚಿತ್ರಗಳು ನೂರು ದಿನಗಳ ಸಕ್ಷಸ್ ಕಾಣುತ್ತವಾ? ಈ ಕುರಿತು ಇನ್ನು ಕೆಲ ಹಿರಿಯರು ಏನ್ ಹೇಳಿದ್ದಾರೆ. ಕನ್ನಡ ಚಿತ್ರರಂಗ ಕಷ್ಟದಲ್ಲಿದೆ, ನೋವಿನಲ್ಲಿದೆ ಎಂಬ ಕಾರಣಕ್ಕೆ ಹಿರಿಯರೆಲ್ಲ ಸೇರಿಕೊಂಡು ಹೋಮ ಮಾಡಿಸಲು ಮುಂದಾಗಿದ್ದಾರೆ.
ದೇವರನ್ನು ನಂಬುವುದುಮ ಪೂಜೆ, ಹೋಮ ಮಾಡಿಸುವುದು ತಪ್ಪಲ್ಲ. ಆದ್ರೆ, ಇದನ್ನು ಮಾಡಿಸಿ ಬಿಟ್ರೆ ಕನ್ನಡ ಚಿತ್ರರಂಗ ಏಳಿಗೆಯಾಗಿ ಬಿಡುತ್ತಾ? ಇದು ಹಿರಿಯ ಪತ್ರಕರ್ತ ಜೋಗಿಯವರ ಅಭಿಪ್ರಾಯ. ಇನ್ನು ಇದೇ ವಿಚಾರವಾಗಿ ಇನ್ನೊಬ್ಬ ಪ್ರಮುಖ ವ್ಯಕ್ತಿ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗ ಕಷ್ಟಗಳ ನಿವಾರಣೆಗಾಗಿ ನಾಳೆ ಹೋಮ ಮಾಡಿಸುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಚಕ್ರವರ್ತಿ ಚಂದ್ರಚೂಡ ಅವರನ್ನು ಕೇಳಿದಾಗ. ಹೇಳಿದ್ದೇನು ಇಲ್ಲಿ ಕೇಳಿ. ಹೋಮ ಮಾಡಿಸುವುದು ತಪ್ಪಲ್ಲ. ಆದ್ರೆ ತನ್ನ ಸಮಸ್ಯೆಗಳಿಗೆ ತಾನೇ ಹೊಣೆಯಾಗಿರುವ ಚಿತ್ರರಂಗ ನಿಜಕ್ಕೂ ಬದಲಾಗಬೇಕಿದೆ. ತನ್ನನ್ನು ತಾನು ಬದಲಿಸಿಕೊಂಡು ಮೈಕೊಡವಿಕೊಂಡು ಏಳಬೇಕಿದೆ. ಅಂದಾಗ ಮಾತ್ರ ಚಿತ್ರರಂಗ ಉಳಿಲು ಸಾಧ್ಯ ಎಂದು ತಿಳಿದವರು ಹೇಳಿದ್ದಾರೆ. ಇದನ್ನು ತಿಳಿದುಕೊಳ್ಳಬೇಕಾದವರು ತಿಳಿದುಕೊಂಡರೆ ಒಳ್ಳೆಯದು.