'ಯಶ್ ಬಾಸ್ 19ನೇ ಚಿತ್ರದ ಘೋಷಣೆ ಯಾವಾಗ'?: ರಾಕಿಂಗ್ ಸ್ಟಾರ್‌ಗೆ ಪತ್ರ ಬರೆದ ಅಭಿಮಾನಿಗಳು
ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರ ಯಾವುದೆಂದು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಇದೀಗ ಅಭಿಮಾನಿಗಳು ನೆರವಾಗಿ ಅವರಿಗೆ ಪತ್ರವನ್ನು ಬರೆದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್'ಗೆ ಅಭಿಮಾನಿಗಳು ಮುಂದಿನ ಸಿನಿಮಾ ಅಪ್ ಡೇಟ್ ಕುರಿತು ಬೇಸರದಿಂದ ಪತ್ರವನ್ನು ಬರೆದಿದ್ದಾರೆ. ಕೆ.ಜಿ.ಎಫ್- 2 ತೆರೆಕಂಡು ಸುಮಾರು 282 ದಿನಗಳು ಕಳೆದಿದ್ದು, ಮುಂದಿನ ಚಿತ್ರದ ಬಗ್ಗೆ ಸುಳಿವು ಕೂಡ ಸಿಗದೇ ಇರುವುದು ಬೇಸರದ ಸಂಗತಿಯಾಗಿದೆ. ಈಗಾಗಲೇ ತಿಳಿದಿರುವ ಹಾಗೆ ನಿಮ್ಮ ಯೋಜನೆ, ಆಲೋಚನೆ ಹಾಗೂ ತಯಾರಿಯು ನಮ್ಮ ಊಹೆಗೂ ದೊಡ್ಡದಾಗಿಯೇ ಇರುತ್ತದೆ. ಆದರೂ ಅಭಿಮಾನಿಗಳ ತವಕ ಹಾಗೂ ಉತ್ಸಾಹವನ್ನು ಮನದಲ್ಲಿಟ್ಟುಕೊಂಡು ಯಶ್19 ಚಿತ್ರದ ಘೋಷಣೆ ಹಾಗೂ ಶೀರ್ಷಿಕೆಯನ್ನು ಆದಷ್ಟು ಬೇಗ ಜಗತ್ತಿನ ಮುಂದೆ ತರಬೇಕೆಂದು ಈ ಪತ್ರದ ಮೂಲಕ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಬರೆದಿದ್ದಾರೆ.