ಭೀಮ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ಕರ್ನಾಟಕ ರಿಲೀಸ್: ದುನಿಯಾದಲ್ಲಿ ವಿಜಯ್ ದರ್ಬಾರ್!

ಬೆಂಗಳೂರು ಅಂತ ಊರಲ್ಲಿಯೇ ತೆಲುಗು, ತಮಿಳು, ಮಲೆಯಾಳಂ ಭಾಷೆ ಮಾತನಾಡೋ ಜನ ಸಿಗುತ್ತಾರೆ. ಹೀಗಿದ್ದ ಮೇಲೆ ಎಲ್ಲಾ ಭಾಷಿಗರನ್ನೂ ಭೀಮ ನೋಡೋಕೆ ಸೆಳೆಯೋ ಕೆಲಸವನ್ನ ನಟ ಕಮ್ ನಿರ್ದೇಶಕ ದುನಿಯಾ ವಿಜಯ್ ಮಾಡಿದ್ದಾರೆ.

First Published Aug 9, 2024, 7:06 PM IST | Last Updated Aug 9, 2024, 7:06 PM IST

ಸ್ಯಾಂಡಲ್‌ವುಡ್‌ನಲ್ಲಿ ಸದಾ ಚಾಲ್ತಿಯಲ್ಲಿರೋ ಒಂದು ಮಾತ್ ಇದೆ. ಇದನ್ನ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರವೇ ಹುಟ್ಟುಹಾಕಿದ್ದು. ಅದು ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಮಾತು. ಎಲ್ಲರೂ ಪ್ಯಾನ್ ಇಂಡಿಯಾ ಅಂದ್ರೆ ಈಗಾಗಲೇ ರಾಜ್ಯಾದ್ಯಂತ ರಿಲೀಸ್ ಆಗಿರೋ ಭೀಮ ಸಿನಿಮಾ ಮಾತ್ರ ಪ್ಯಾನ್ ಕರ್ನಾಟಕ. ಅದ್ಹೇಗೆ ಸಾಧ್ಯ..? ಪ್ಯಾನ್ ಇಂಡಿಯಾ ಸರಿಯಾಗಿದೆ. ಪ್ಯಾನ್ ವರ್ಲ್ಡ್ ಓಕೆ ಬಿಡಿ. ಆದರೆ, ಪ್ಯಾನ್ ಕರ್ನಾಟಕ ಹೇಗೆ ಸಾಧ್ಯ..? ಈ ಪ್ರಶ್ನೆಗೆ ದುನಿಯಾ ವಿಜಯ್ ಉತ್ತರ ಕೊಟ್ಟಿದ್ದಾರೆ. ಸಲಗ ವಿಜಯ್​​ ಭೀಮನಾಗಿ ಅಬ್ಬರಿಸೋಕೆ ಕೌಂಟ್​ ಡೌನ್ ಸ್ಟಾರ್ಟ್ ಆಗಿದೆ. ಇಂದಿನಿಂದ ಭೀಮ ಸಿನಿಮಾ ವಿಶಾಲ ಕರ್ನಾಟಕಕ್ಕೆ ಹಂಚಿಕೆಯಾಗಿದೆ. ಈ ಭೀಮ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ಕರ್ನಾಟಕ ಅಂತ ಸಲಗ ವಿಜಯ್ ಸಾರಿದ್ದಾರೆ. 

ಕರ್ನಾಟಕ ಎಲ್ಲಾ ಭಾಷಿಗರ ಗೂಡು. ತುಳು, ಕೊಡವ, ಲಂಬಾಣಿ, ಆದಿ ಕನ್ನಡ ಭಾಷೆಯ ಜನರೂ ಇದ್ದಾರೆ. ಬೆಂಗಳೂರು ಅಂತ ಊರಲ್ಲಿಯೇ ತೆಲುಗು, ತಮಿಳು, ಮಲೆಯಾಳಂ ಭಾಷೆ ಮಾತನಾಡೋ ಜನ ಸಿಗುತ್ತಾರೆ. ಹೀಗಿದ್ದ ಮೇಲೆ ಎಲ್ಲಾ ಭಾಷಿಗರನ್ನೂ ಭೀಮ ನೋಡೋಕೆ ಸೆಳೆಯೋ ಕೆಲಸವನ್ನ ನಟ ಕಮ್ ನಿರ್ದೇಶಕ ದುನಿಯಾ ವಿಜಯ್ ಮಾಡಿದ್ದಾರೆ. ಎಲ್ಲಾ ಭಾಷಿಗರಿಂದ ಭೀಮನ ಬಗ್ಗೆ ವೀಡಿಯೋ ಮಾಡಿ ಹರಿ ಬಿಟ್ಟಿದ್ದಾರೆ ವಿಜಯ್ ಟೀಂ. ಕಳೆದ ಆರು ತಿಂಗಳಿಂದ ಸ್ಯಾಂಡಲ್​ವುಡ್ ಚಿತ್ರಮಂದಿರಗಳು ಬಾಗಿಲು ಹಾಕಿದ್ವು. ಆದ್ರೆ ಭೀಮ ಬಂದಿದ್ದೇ ತಡ ಡೋರ್​ ಕ್ಲೋಸ್ ಆಗಿದ್ದ ಚಿತ್ರಮಂದಿರಗಳೆಲ್ಲಾ ಮತ್ತೆ ತೆರೆದಿವೆ. ಕರ್ನಾಟಕದಾದ್ಯಂತ ಭೀಮ ಸಿನಿಮಾ 350 ಕ್ಕು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕೃಷ್ಣ ಸಾರ್ಥಕ್ ನಿರ್ಮಾಣದ ಭೀಮ ಬೆಂಗಳೂರು ಡ್ರಗ್ ಮಾಫಿಯಾ ಸುತ್ತ ಕತೆಯಿದೆ.

Video Top Stories