Duniya Vijay: ಭೀಮನ ಎದುರು ತೊಡೆ ತಟ್ಟಲು ರೆಡಿಯಾದ ಬ್ಲ್ಯಾಕ್ ಡ್ರ್ಯಾಗನ್!

ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ತಮ್ಮ ಎರಡನೇ ಚಿತ್ರ ‘ಭೀಮ’ನಿಗೆ ಕೈವಾರ ತಾತಯ್ಯ ಸನ್ನಿಧಿಯಲ್ಲಿ ಸರಳವಾಗಿ ಸ್ಕ್ರಿಪ್ಟ್‌ ಪೂಜೆ ಮಾಡಿಕೊಂಡಿದ್ದಾರೆ. ಚಿತ್ರೀಕರಣಕ್ಕೆ ಬೇಕಾದ ಲೋಕೇಶನ್‌ಗಳ ಹುಡುಕಾಟವನ್ನು ಮುಗಿಸಿರುವ ವಿಜಯಕುಮಾರ್‌, ಈಗ ತಮ್ಮ ಚಿತ್ರದಲ್ಲಿ ಬರುವ ವಿಲನ್‌ ಪಾತ್ರವನ್ನು ಪರಿಚಯಿಸಿದ್ದಾರೆ.

Share this Video
  • FB
  • Linkdin
  • Whatsapp

ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ (Duniya Vijay) ತಮ್ಮ ಎರಡನೇ ಚಿತ್ರ ‘ಭೀಮ’ನಿಗೆ (Bheema) ಕೈವಾರ ತಾತಯ್ಯ ಸನ್ನಿಧಿಯಲ್ಲಿ ಸರಳವಾಗಿ ಸ್ಕ್ರಿಪ್ಟ್‌ ಪೂಜೆ ಮಾಡಿಕೊಂಡಿದ್ದಾರೆ. ಚಿತ್ರೀಕರಣಕ್ಕೆ ಬೇಕಾದ ಲೋಕೇಶನ್‌ಗಳ ಹುಡುಕಾಟವನ್ನು ಮುಗಿಸಿರುವ ವಿಜಯಕುಮಾರ್‌, ಈಗ ತಮ್ಮ ಚಿತ್ರದಲ್ಲಿ ಬರುವ ವಿಲನ್‌ ಪಾತ್ರವನ್ನು ಪರಿಚಯಿಸಿದ್ದಾರೆ. ಚಿತ್ರೀಕರಣಕ್ಕೆ ಹೋಗುವ ಮುನ್ನವೇ ಖಡಕ್‌ ವಿಲನ್‌ (Villain) ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ‘ಭೀಮ’ ಚಿತ್ರಕ್ಕೆ ವಿಲನ್‌ ಆಗುತ್ತಿರುವುದು ಮಂಜು (Manju) ಎಂಬುವವರು. 

Duniya Vijay: ಮುಸಲಿ ಮಡುಗು ಪ್ರತಾಪ್ ರೆಡ್ಡಿಯಾದ ಸ್ಯಾಂಡಲ್‌ವುಡ್‌ನ ದುನಿಯಾ ವಿಜಯ್!

ಬ್ಲಾಕ್‌ ಡ್ರ್ಯಾಗನ್‌ (Black Dragon) ಹೆಸರಿನ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟಿದ್ದಾರೆ. ಇದು ಇವರಿಗೆ ಮೊದಲ ಚಿತ್ರವಾಗಿದ್ದು, ಚಿತ್ರದ ಪ್ರಮುಖ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಇವರ ಪಾತ್ರದ ಫೋಟೋ ಶೂಟ್‌ ಕೂಡ ಮಾಡಲಾಗಿದೆ. ಏಪ್ರಿಲ್‌ 18ರಂದು ಗವಿಪುರದ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆಯಲಿದೆ. ಕೃಷ್ಣ ಸಾರ್ಥಕ್‌ ಹಾಗೂ ಜಗದೀಶ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಗಣ ಆಯ್ಕೆ ಮಾಡಬೇಕಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video