ಹೆಡ್‌ ಬುಷ್ ನೈಜ ಘಟನೆಯೇ?: ಡಾಲಿ ಧನಂಜಯ್‌ಗೆ ಬಂದಿತ್ತಾ ಜೀವ ಬೆದರಿಕೆ?

ಸಿನಿಮಾ ಹಂಗಾಮದಲ್ಲಿ ಡಾಲಿ ಧನಂಜಯ್ ಜತೆ ರ್ಯಾಪಿಡ್ ಫೈರ್ ಮಾಡಲಾಗಿದ್ದು, ಕುತೂಹಲ ಅಂಶಗಳನ್ನು ಡಾಲಿ ತೆರೆದಿಟ್ಟಿದ್ದಾರೆ.
 

First Published Oct 24, 2022, 5:00 PM IST | Last Updated Oct 24, 2022, 5:00 PM IST

ಹೆಡ್ ಬುಷ್ ಸಿನಿಮಾ ವಿಚಾರವಾಗಿ ಡಾಲಿ ಧನಂಜಯ್‌ಗೆ ಒಂದಿಷ್ಟು ಜನ ಪ್ರಾಣ ಬೆದರಿಕೆಯನ್ನು ಹಾಕಿದರು ಅಂತಾರೆ ಎಂಬ ಪ್ರಶ್ನೆಗೆ, ನಾನು ಉತ್ತರ ಕೊಡಲ್ಲ ಎಂದು ಧನಂಜಯ್ ತಿಳಿಸಿದ್ದಾರೆ. ಅಗ್ನಿ ಶ್ರೀಧರ್ ಸೇಡು ಇನ್ನು ಆರಿಲ್ಲವಾ ಎಂದು ಕೇಳಿರುವವರು ಇದಾರೆ, ಅವರ ಸೇಡು ಒಂದನ್ನು ಸಿನಿಮಾ ಕಥೆಯನ್ನಾಗಿ ಮಾಡುತ್ತಿದ್ದಾರಾ ಎಂದು ಕೇಳಿದ್ದಕ್ಕೆ, ಅವರು ಸಿನಿಮಾ ಸ್ಟೂಡೆಂಟ್, ಅವರು ಸಿನಿಮಾ ಮಾಡುವಾಗ ಬೇರೆ ಯಾವುದೇ ರೀತಿಯಲ್ಲಿ ಯೋಚನೆಯನ್ನು ಮಾಡಲ್ಲ. ರೈಟರ್ ಆಗಿ ಯೋಚನೆಯನ್ನು ಮಾಡುತ್ತಾರೆ. ಒಬ್ಬ ಕಥೆಗಾರನಾಗಿ ಯೋಚನೆಯನ್ನು ಮಾಡುತ್ತಾರೆ ಎಂದರು. ಇನ್ನು ನಡೆದಿರುವ ಘಟನೆಯನ್ನು ಇಟ್ಟಿಕೊಂಡೇ ಸಿನಿಮಾ ಮಾಡಿರೋದು ಎಂದು ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿದ್ದಾರೆ.

ಟೀ ಇಂಡಿಯಾ ಭರ್ಜರಿ ಜಯದ ಬೆನ್ನಲ್ಲೇ ಪಾಕಿಸ್ತಾನಿ ಫುಡ್‌ ಡೆಲಿವರಿ App ಟ್ರೋಲ್‌ ಮಾಡಿದ ಜೊಮ್ಯಾಟೊ