Ram Gopal Varma Controversy: ಅಮಿತಾಭ್ ಬಚ್ಚನ್ ಸಿನಿಮಾಗಳನ್ನು ಡಾ ರಾಜ್‌ಕುಮಾರ್ ರಿಮೇಕ್ ಮಾಡಿದ್ರಾ? RGV ಹೊಸ ವಿವಾದಕ್ಕೆ ಏನಂತೀರಾ?
ಹೌದು ಸೌತ್ನ ಅನೇಕ ಸೂಪರ್ ಸ್ಟಾರ್ ಗಳ ಸಕ್ಸಸ್ ಹಿಂದೆ ಅಮಿತಾಬ್ ಚಿತ್ರಗಳ ಪಾತ್ರ ಇತ್ತು ಅಂದಿದ್ದಾರೆ ಅರ್,ಜಿವಿ. ಇದ್ರಲ್ಲಿ ರಜನಿಕಾಂತ್, ಚಿರಂಜೀವಿ ಹೆಸರು ಓಕೆ ಆದ್ರೆ ರಾಜ್‌ಕುಮಾರ್ ಹೆಸರು ಯಾಕೆ ತಂದರೋ ಗೊತ್ತಿಲ್ಲ. ಅಥವಾ ರಾಮುಗೆ ರಾಜ್‌ಕುಮಾರ್ ಬಗ್ಗೆಯೇ ಗೊತ್ತಿಲ್ಲ ಅನ್ನಿಸುತ್ತೆ.
ಅಮಿತಾಬ್ ಬಚ್ಚನ್ ಸಿನಿಮಾ ರಂಗಕ್ಕೆ ಕಾಲಿಡುವದಕ್ಕೂ ದಶಕಗಳಷ್ಟು ಮೊದಲೇ ರಾಜ್‌ಕುಮಾರ್ ಸೂಪರ್ ಸ್ಟಾರ್ ಆಗಿದ್ದವರು. ಅಮಿತಾಬ್ ಮೊದಲ ಬಾರಿ ಬಣ್ಣ ಹಚ್ಚಿದ್ದು 1969ರಲ್ಲಿ. ಅಷ್ಟೊತ್ತಿಗಾಗಲೇ ರಾಜ್‌ಕುಮಾರ್ 100ಕ್ಕೂ ಅಧಿಕ ಸಿನಿಮಾಗಳನ್ನ ನಟಿಸಿ ಕನ್ನಡದ ನಟಸಾರ್ವಭೌಮ ಅನ್ನಿಸಿಕೊಂಡಿದ್ರು. ಅಣ್ಣಾವ್ರು ತಮ್ಮ ಕರೀಯರ್ನುದ್ದಕ್ಕೂ ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದೇ ಕಡಿಮೆ. ಆದ್ರೆ ಅಣ್ಣಾವ್ರ ನಟನೆಯ ದಾಖಲೆಯ ಚಿತ್ರಗಳು ಅನ್ಯಭಾಷೆಯಲ್ಲಿ ರಿಮೇಕ್ ಆಗಿವೆ.