
ಪ್ರೇಮ್ ಡೈರೆಕ್ಷನ್ ಫ್ರೇಮ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ !
ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬರುತ್ತಿದ್ದು,ಕೆವಿಎನ್ ಪ್ರೊಡಕ್ಷನ್ ಲಾಂಚನದಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ನಟನಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಣಿಸಿಕೊಳ್ಳಲಿದ್ದು,ಚಿತ್ರ ಹಲವು ಕಾರಣಗಳಿಂದ ಕುತೂಹಲವನ್ನು ಸೃಷ್ಟಿಸಿದೆ.
ಕೆವಿಎನ್ ಪ್ರೊಡಕ್ಷನ್ ನಲ್ಲಿ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬರುತ್ತಿದ್ದು, ಚಿತ್ರದಲ್ಲಿ ಧ್ರುವ ಸರ್ಜಾ ನಟನಾಗಿ ಕಾಣಿಸಿಕೊಂಡರೆ, ವಿಲನ್ ಆಗಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಂಜಯ್ ದತ್ ಗೆ ಪ್ರೇಮ್ ಸಿನಿಮಾದ ಕತೆ ಹೇಳಿದ್ದು,ಕೆಜಿಎಫ್ ನ ಅಧೀರ ಸ್ವಲ್ಪ ದಿನ ಟೈಂ ಕೊಡುವಂತೆ ಕೇಳಿದ್ದಾರೆ ಎಂದು ಮೂಲಗಳು ಹೇಳಿವೆ. ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಚಿತ್ರದ ಟೈಟಲ್ ಟೀಸರ್ ಕಾರ್ಯಕ್ರಮ ಅಕ್ಟೋಬರ್ 20ರಂದು ನಡೆಯಲಿದೆ. ಹಾಗೆ ಅದ್ದೂರಿ ಹುಡುಗನ ಈ ಸಿನಿಮಾ ಟೈಟಲ್ ಟೀಸರ್ ಅನ್ನು ಮಲೆಯಾಳಂ ಸ್ಟಾರ್ ಮೋಹನ್ ಲಾಲ್ ಬಿಡುಗಡೆ ಮಾಡುತ್ತಾರೆ ಎಂದು ಹೇಳಲಾಗಿದೆ.
Add Asianetnews Kannada as a Preferred Source
