ಮನಸ್ತಾಪ ಇದ್ದಿದ್ದು ನಿಜ, ಮತ್ತೆ ದರ್ಶನ್ ಜೊತೆ ಸಿನಿಮಾ ಪಕ್ಕಾ: ಮುನಿಸು ಮರೆತ ದಿನಕರ್ ತೂಗುದೀಪ

ದರ್ಶನ್ ಸಕ್ಸಸ್​ ಅಲೆಯಲ್ಲಿ ತೇಲ್ತಾ ಇದ್ದ ಹೊತ್ತಲ್ಲಿ ಸಹೋದರ ದಿನಕರ್​ನ ಮರೆತೇ ಬಿಟ್ಟಿದ್ರು. ತೂಗುದೀಪ ಬ್ರದರ್ಸ್ ಪರಸ್ಪರ ಮಾತು ಬಿಟ್ಟು ದೂರ ದೂರವೇ ಉಳಿದಿದ್ರು. ಆದ್ರೆ ದಾಸ ಜೈಲು ಸೇರಿದ ಮೇಲೆ ಆತನ ಬೆಂಬಲಕ್ಕೆ ನಿಂತಿದ್ದೇ ಸೋದರ ದಿನಕರ್. 

Share this Video
  • FB
  • Linkdin
  • Whatsapp

ದರ್ಶನ್ ಸಕ್ಸಸ್​ ಅಲೆಯಲ್ಲಿ ತೇಲ್ತಾ ಇದ್ದ ಹೊತ್ತಲ್ಲಿ ಸಹೋದರ ದಿನಕರ್​ನ ಮರೆತೇ ಬಿಟ್ಟಿದ್ರು. ತೂಗುದೀಪ ಬ್ರದರ್ಸ್ ಪರಸ್ಪರ ಮಾತು ಬಿಟ್ಟು ದೂರ ದೂರವೇ ಉಳಿದಿದ್ರು. ಆದ್ರೆ ದಾಸ ಜೈಲು ಸೇರಿದ ಮೇಲೆ ಆತನ ಬೆಂಬಲಕ್ಕೆ ನಿಂತಿದ್ದೇ ಸೋದರ ದಿನಕರ್. ಸದ್ಯ ದರ್ಶನ್​ ಬೇಲ್​ ಶ್ಯೂರಿಟಿಗೆ ಸಹಿ ಹಾಕಿ ಜಾಮೀನು ಕೊಡಿಸಿರೋದು ಇದೇ ದಿನಕರ್. ಮುನಿಸು ಮರೆತು, ದಾಸನ ಪರ ನಿಂತಿರೋ ದಿನಕರ್ ಇದೇ ಮೊದಲ ಬಾರಿಗೆ ತಮ್ಮ ಮತ್ತು ದರ್ಶನ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಜೈಲು ಪಾಲಾದ ಅವರಿಗೆ ಒಂದು ವಿಷ್ಯ ಅರ್ಥವಾಯ್ತು. ಕಷ್ಟದಲ್ಲಿದ್ದಾಗ ಕೈ ಹಿಡಿಯೋದು ನಮ್ಮ ಮನೆಯವರೇ ಹೊರತು ಬೇರೆಯವರಲ್ಲ ಅನ್ನೋದು. ಅಸಲಿಗೆ ದರ್ಶನ್ 2011ರಲ್ಲಿ ಜೈಲು ಸೇರಿದ ಹೊತ್ತಲ್ಲಿ ಸೋದರ ದಿನಕರ್ ನಿರ್ದೇಶಿಸಿದ ಸಾರಥಿ ಸಿನಿಮಾ ತೆರೆಗೆ ಬಂದು ದರ್ಶನ್ ಲೈಫ್ ಬದಲಾಗಿತ್ತು. 

ಆದ್ರೆ ತನ್ನ ಬದುಕಿಗೆ ತಿರುವುಕೊಟ್ಟ ಸೋದರನನ್ನ ದರ್ಶನ್ ಮರೆತುಬಿಟ್ಟಿದ್ರು. ಇಬ್ಬರ ನಡುವೆ ಕೆಲ ಮನಸ್ತಾಪ ಬಂದು ಮಾತು ನಿಂತುಹೋಗಿದ್ವು. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಅಂದರ್ ಆದಾಗ ಮತ್ತೆ ಅಣ್ಣನ ಪರ ನಿಂತಿದ್ದು ಇದೇ ದಿನಕರ್. ಸದ್ಯ ದರ್ಶನ್ ಬೇಲ್ ಮೇಲೆ ಆಚೆ ಬಂದಿದ್ದು ದರ್ಶನ್ ಜಾಮೀನಿಗೆ ಶ್ಯೂರಿಟಿ ಹಾಕಿರೋದೇ ದಿನಕರ್ ತೂಗುದೀಪ. ಹಳೆಯ ಮುನಿಸು ಮರೆತು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ ದಿನಕರ್. ಇಂಥಾ ದಿನಕರ್ ಇದೇ ಮೊದಲ ಬಾರಿ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಅಣ್ಣ ಮಾಡಿದ ಅವಮಾನ ಮರೆತು ಆತನ ಜೊತೆಗೆ ನಿಂತಿರೋ ದಿನಕರ್, ಮುಂದಿನ ದಿನಗಳಲ್ಲಿ ದರ್ಶನ್ ಜೊತೆಗೆ ಸಿನಿಮಾ ಕೂಡ ಮಾಡ್ತಿನಿ ಅಂದಿದ್ದಾರೆ. ಅಲ್ಲಿಗೆ ದಾಸನಿಗೆ ಇನ್ನಾದ್ರೂ ಸಂಬಂಧಗಳ ಬಗ್ಗೆ ಅರಿವು ಮೂಡುತ್ತಾ..? ತೂಗುದೀಪ ಫ್ಯಾಮಿಲಿಯಲ್ಲಿ ಎಲ್ಲವೂ ಸರಿಹೋಗುತ್ತಾ ಕಾದುನೋಡಬೇಕು.

Related Video