ಹೊಸ ವರ್ಷಕ್ಕೆ ದಿನಕರ್ ‘ರಾಯಲ್’ ಚಾಲೆಂಜ್!ವಿರಾಟ್-ಸಂಜನಾ ಕೆಮೆಸ್ಟ್ರಿಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್!
ದಿನಕರ್ ತೂಗುದೀಪ ನಿರ್ದೇಶನದ, ವಿರಾಟ್ ಮತ್ತು ಸಂಜನಾ ನಟಿಸಿರುವ 'ರಾಯಲ್' ಸಿನಿಮಾ ಜನವರಿ 24 ರಂದು ಬಿಡುಗಡೆಯಾಗಲಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯತೆ ಗಳಿಸಿವೆ.
ದಿನಕರ್ ತೂಗುದೀಪ ನಿರ್ದೇಶನದ ವಿರಾಟ್- ಸಂಜನಾ ನಟಿಸಿರೋ ರಾಯಲ್ ಸಿನಿಮಾ ಈಗಾಗ್ಲೇ ತನ್ನ ಸೂಪರ್ ಡೂಪರ್ ಹಾಡುಗಳಿಂದ ಸೌಂಡ್ ಮಾಡಿದೆ. ಇನ್ನೇನು ಹೊಸ ವರ್ಷಕ್ಕೆ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿರೋ ರಾಯಲ್ ಟೀಂ ಒಂದು ಮೆಗಾ ಅಪ್ಡೇಟ್ ಕೊಟ್ಟಿದೆ. ಟಂಗ್ ಟಂಗ್ ಮತ್ತು ಆಟಂ ಬಾಂಬ್ ಸಾಂಗ್ಗಳು ಅಕ್ಷರಶಃ ಕಿಚ್ಚು ಹಚ್ಚಿವೆ. ರಾಯಲ್ ಮೂವಿಗೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು ರಾಯಲ್ ಆಲ್ಬಂನಲ್ಲಿ ಒಂದಕ್ಕಿಂತ ಒಂದು ಮಸ್ತ್ ಸಾಂಗ್ಸ್ ಇವೆ. ಈಗ ರಿಲೀಸ್ ಆಗಿರೋ ವಿಡಿಯೋ ಸಾಂಗ್ಸ್ ಸಖತ್ ರಾಯಲ್ ಆಗಿ ಮೂಡಿಬಂದಿದ್ದು ವಿರಾಟ್ ಌಂಡ್ ಸಂಜು ಕೆಮೆಸ್ಟ್ರಿ ಅಂತೂ ಸಖತ್ ಕ್ಯೂಟ್ ಆಗಿ ಮೂಡಿಬಂದಿದೆ.
ಸೋ ಸಾಂಗ್ಸ್ ನೋಡಿ ಥ್ರಿಲ್ ಆದ ಫ್ಯಾನ್ಸ್ ರಾಯಲ್ ಥಿಯೇಟರ್ ಗೆ ಎಂಟ್ರಿ ಕೊಡೋದು ಯಾವಾಗ ಅಂತ ಕೇಳ್ತಾನೇ ಇದ್ರು. ಅದಕ್ಕೀಗ ರಾಯಲ್ ಟೀಂ ಉತ್ತರ ಕೊಟ್ಟಿದೆ. ಜನವರಿ 24ಕ್ಕೆ ಸಿನಿಮಾ ರಾಯಲ್ ಆಗಿ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದೆ. ಜೊತೆಜೊತೆಯಲಿ ನಂತರ ದಿನಕರ್ ಡೈರೆಕ್ಟ್ ಮಾಡಿರೋ ಪ್ರೇಮ್ ಕಹಾನಿ ಇದು. ಸೋ ಸಹಜವಾಗೇ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಜಯಣ್ಣ ಆಂಡ್ ಭೋಗೇಂದ್ರ ಈ ಸಿನಿಮಾಗೆ ಬಂಡವಾಳ ಹೂಡಿದ್ದು ರಾಯಲ್ ಆಗೇ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ವಿರಾಟ್&ಸಂಜನಾ ಜೋಡಿ ಮೋಡಿ ಮಾಡೋ ಲಕ್ಷಣಗಳು ಕಾಣ್ತಿವೆ. ಸೋ ಹೊಸ ವರ್ಷಕ್ಕೆ ಈ ಹೊಸತನದ ಸಿನಿಮಾ ನೋಡೋದಕ್ಕೆ ನೀವು ಕೂಡ ಸಜ್ಜಾಗಿ.