)
ದೇವರ ನಾಡಿನಲ್ಲಿ ದರ್ಶನ್ ಭಕ್ತಿಭಾವ: ದಾಸನ ದಿಢೀರ್ ಭಕ್ತಿಗೆ ಇದೇ ಕಾರಣ?
ಅಷ್ಟಕ್ಕೂ ದರ್ಶನ್ ಭೇಟಿ ಕೊಟ್ಟಿದ್ದು ಸಾಮಾನ್ಯ ದೇಗುಲಗಳಿಗೆ ಅಲ್ಲವೇ ಅಲ್ಲ. ಈ ಹಿಂದೆ ದರ್ಶನ್ ಹೋಗಿದ್ದ ಮಾಡಾಯಿಕಾವು ಭಗವತಿ ದೇಗುಲ ಶತ್ರಸಂಹಾರ ಪೂಜೆಗೆ ಫೇಮಸ್.
ದರ್ಶನ್ ಜಾಮೀನು ಸಿಕ್ಕು ಹೊರಬಂದ ನಂತರ ಸಿಕ್ಕಾಪಟ್ಟೆ ದೈವಭಕ್ತನಾಗಿ ಬದಲಾಗಿದ್ದಾರೆ. ಅದ್ರಲ್ಲೂ ದೇವರ ನಾಡು ಕೇರಳದ ಪ್ರಸಿದ್ದ ದೇಗುಲಗಳಿಗೆ ಪದೇ ಪದೇ ಭೇಟಿ ಕೊಡ್ತಾ ಇದ್ದಾರೆ. ಹಿಂದೆ ಭದ್ರಕಾಳಿ ಸನ್ನಿಧಿಗೆ ಹೋದವರು ಈಗ ಮಹಾದೇವನ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ದಾಸನ ಈ ದಿಢೀರ್ ಭಕ್ತಿಭಾವದ ಹಿಂದಿನ ರಹಸ್ಯ ಏನು..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. ದರ್ಶನ್ ಕಳೆದ ಮಾರ್ಚ್ ತಿಂಗಳಲ್ಲಿ ಕೇರಳದ ಮಾಡಾಯಿಕಾವು ಭಗವತಿ ಸನ್ನಿಧಾನಕ್ಕೆ ಹೋಗಿದ್ರು. ಇದೀಗ ಕೇರಳದ ಮತ್ತೊಂದು ಪ್ರಸಿದ್ದ ದೇಗುಲ ಕೊಟ್ಟಿಯೂರು ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಸುರಿಯುವ ಮಳೆಯ ನಡೆವೆ ದಟ್ಟ ಕಾಡಿನಲ್ಲಿರೋ ದೇಗುಲಕ್ಕೆ ಕುಟುಂಬ ಸಮೇತ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಅಸಲಿಗೆ ಹೀಗೆ ದೇವರ ನಾಡಿನ ಪ್ರಸಿದ್ದ ದೇಗುಲಗಳಿಗೆ ದರ್ಶನ್ ಅಲೆಯುತ್ತಾ ಇರೋದ್ರ ಹಿಂದೆ ಖ್ಯಾತ ಜ್ಯೋತಿಷಿಯೊಬ್ಬರ ಸಲಹೆ ಇದೆಯಂತೆ.
ಅಷ್ಟಕ್ಕೂ ದರ್ಶನ್ ಭೇಟಿ ಕೊಟ್ಟಿದ್ದು ಸಾಮಾನ್ಯ ದೇಗುಲಗಳಿಗೆ ಅಲ್ಲವೇ ಅಲ್ಲ. ಈ ಹಿಂದೆ ದರ್ಶನ್ ಹೋಗಿದ್ದ ಮಾಡಾಯಿಕಾವು ಭಗವತಿ ದೇಗುಲ ಶತ್ರಸಂಹಾರ ಪೂಜೆಗೆ ಫೇಮಸ್. ಮಾಡಾಯಿಕಾವು ದೇವಸ್ಥಾನ ಅಥವಾ ತಿರುವರ್ಕಾಡು ಭಗವತಿ ದೇವಸ್ಥಾನ ಅಂತ ಕರೆಯಲ್ಪಡುವ ಇದು ಕೇರಳದ ಒಂದು ಪ್ರಾಚೀನ ಶಕ್ತಿ ದೇವಾಲಯವಾಗಿದ್ದು, ಕಣ್ಣೂರಿನ ಪಳಯಂಗಡಿ ಬಳಿ ಇದೆ. ಮಡಾಯಿಕ್ಕಾವು ದೇವಸ್ಥಾನ ಭದ್ರಕಾಳಿಯ ಉಗ್ರ ರೂಪವನ್ನು ಹೊಂದಿದೆ. ಉತ್ತರ ಕೇರಳದ ಭದ್ರಕಾಳಿ ದೇವಾಲಯಗಳ 'ತಾಯಿ ದೇವಾಲಯ' ಅಂತ ಇದನ್ನ ಪರಿಗಣಿಸಲಾಗಿದೆ. ದೇವಾಲಯ ಸಂಕೀರ್ಣದಲ್ಲಿ ಶಿವ, ಸಪ್ತ ಮಾತೃಕ, ಗಣಪತಿ, ವೀರಭದ್ರ, ಕ್ಷೇತ್ರಪಾಲ ಮತ್ತು ಶಾಸ್ತವು ದೇವತೆಗಳು ಇದ್ದಾರೆ. ಸ್ಥಳೀಯ ಜಾನಪದ ಕಥೆಗಳ ಪ್ರಕಾರ, ಈ ದೇವಾಲಯವು ಮಾಟಮಂತ್ರ ಮತ್ತು ಅತೀಂದ್ರಿಯ ಕ್ರಮ ತೆಗೆದುಹಾಕಲು ಆಶ್ರಯ ನೀಡುವ ತಾಣವಾಗಿದೆ.
ಇಲ್ಲಿ ಅನೇಕ ರಾಜಕಾರಣಿಗಳು ಬಂದು ಶತ್ರಸಂಹಾರ ಪೂಜೆ ಮಾಡಿಸಿದ್ದಾರೆ. ಇಂಥಾ ಶಕ್ತಿಸ್ಥಳದಲ್ಲಿ ದರ್ಶನ್ ಕೂಡ ಸಂಕಷ್ಟ ಪರಿಹಾರಕ್ಕಾಗಿ ಪೂಜೆ ಸಲ್ಲಿಸಿದ್ದಾರೆ. ಇನ್ನೂ ನಿನ್ನೆ ದರ್ಶನ್ ಹೋಗಿರುವ ಕಣ್ಣೂರಿನ ಕೊಟ್ಟಿಯೂರು ಮಹಾದೇವ ದೇಗುಲ ಕೂಡ ಬಹಳಾನೇ ವಿಶೇಷವಾದದ್ದು. ದಕ್ಷರಾಜ ಯಾಗವನ್ನ ಮಾಡಿದ ಜಾಗ ಇದುವೇ ಅಂತ ಹೇಳಲಾಗುತ್ತೆ. ಈ 'ಕೊಟ್ಟಿಯೂರು' ಹೆಸರು 'ಕತ್ತಿ-ಯೂರ್' ಅನ್ನೋ ಪದದಿಂದ ಬಂದಿದೆ., ಈ ದೇವಾಲಯದ ಶಿವಲಿಂಗವು ಸ್ವಯಂಭು ಲಿಂಗವಾಗಿದ್ದು ಇಲ್ಲಿ ಪೂಜೆ ಮಾಡಿದ್ರೆ ಇಷ್ಟಾರ್ಥ ಸಿದ್ದಿಯಾಗುತ್ತೆ ಅನ್ನೋ ನಂಬಿಕೆ ಇದೆ. ಸದ್ಯ ಕೊಟ್ಟಿಯೂರು ದೇಗುಲದಲ್ಲಿ ವೈಶಾಖ ಮಹೋತ್ಸವ ನಡೀತಾ ಇದ್ದು, ಜೂನ್ 8 ರಿಂದ ಜುಲೈ 4 ರವರೆಗೆ ಈ ದೇವಸ್ಥಾನ ಭಕ್ತರಿಗಾಗಿ ತೆರೆದಿದೆ. ಈ ಇಪ್ಪತ್ತೆಂಟು ದಿನಗಳ ಅವಧಿಯಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ಕೊಡ್ತಾರೆ.
ದರ್ಶನ್ ಕೂಡ ಇದೇ ಸಮಯದಲ್ಲಿ ಕೊಟ್ಟಿಯೂರಿಗೆ ಭೇಟಿ ಕೊಟ್ಟು ಶಿವನ ದರ್ಶನ ಪಡೆದಿದ್ದಾರೆ. ಸಂಕಟ ಬಂದಾಗ ವೆಂಕಟ ರಮಣನ ಜಪ ಮಾಡೋದು ಸಹಜ, ಸದ್ಯ ದರ್ಶನ್ರ ಭಕ್ತಿಯ ಹಿಂದಿರೋದು ಕೂಡ ಅದೇ ಕಾರಣ. ದರ್ಶನ್ ಗೆ ಮಂಗಳೂರು ಮೂಲದ ಜ್ಯೋತಿಷಿಯೊಬ್ಬರು ನಿಮ್ಮ ಕಷ್ಟಗಳ ಪರಿಹಾರ ಆಗಬೇಕು ಅಂದ್ರೆ ಇಂತಿಂಥಾ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಅಂತ ಸಲಹೆ ಕೊಟ್ಟಿದ್ದಾರಂತೆ. ಸದ್ಯ ತನ್ನ ಮೇಲೆ ಬಂದಿರೋ ಆರೋಪಗಳು, ಬೆನ್ನು ಬಿದ್ದಿರೋ ಕಾನೂನು ಕಂಟಕಗಳಿಂದ ಹೊರಬರಬೇಕು ಅಂತ ದರ್ಶನ್ ಈ ಸೂಚನೆಗಳನ್ನೆಲ್ಲಾ ಪಾಲಿಸ್ತಾ ಇದ್ದಾರೆ. ದರ್ಶನ್ ಏನೂ ನಾಸ್ತಿಕನಲ್ಲ. ಹಾಗಂತ ತೀರಾ ಪದೇ ಪದೇ ದೇಗುಲಗಳಿಗೆ ಹೋಗ್ತಾ ಅತಿಯಾದ ಭಕ್ತಿಯನ್ನೂ ಪ್ರದರ್ಶನ ಮಾಡ್ತಾ ಇರಲಿಲ್ಲ. ಆದರೆ ಸದ್ಯ ದರ್ಶನ್ ಇರೋ ಸ್ಥಿತಿ ಹೇಗಿದೆ ಅಂದ್ರೆ ಯಾರೇನೇ ಸಲಹೆ ಕೊಟ್ರೂ ಭಕ್ತಭಾವದಿಮದ ಪಾಲಿಸ್ತಾರೆ. ಸೋ ಮತ್ತೆ ಮತ್ತೆ ದರ್ಶನ್ ದೇವರ ನಾಡಿನ ದೈವ ಸ್ಥಾನಗಳಿಗೆ ಹೋಗ್ತಾ ಇರೋದ್ರ ಹಿಂದಿರೋದು ಇದೇ ಕಾರಣ.