ಜನವರಿಯಿಂದ ಡೆವಿಲ್ ಚಿತ್ರೀಕರಣ ಮರು ಪ್ರಾರಂಭ! ಬರ್ತ್​ಡೇ ಮುಗಿಸಿ ಹೊಸ ಇನ್ನಿಂಗ್ಸ್ ಆರಂಭಕ್ಕೆ ದಾಸ ಸಜ್ಜು

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಶೂಟಿಂಗ್ ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಮೂಡಿದೆ. ಜನವರಿ ಎರಡನೇ ವಾರದಿಂದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜನೆ ರೂಪಿಸಿದೆ. ಆದರೆ, ದರ್ಶನ್‌ಗೆ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ಶೂಟಿಂಗ್ ನಡೆಯಲಿದೆ.

Vaishnavi Chandrashekar  | Published: Dec 25, 2024, 3:05 PM IST

ಮೈಸೂರು ಫಾರ್ಮ್ ಹೌಸ್​ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ದರ್ಶನ್ ಮತ್ತೆ ಬಣ್ಣ ಹಚ್ಚೋದ್ಯಾವಾಗ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅದರಲ್ಲೂ ಡೆವಿಲ್ ಟೀಮ್ ಸಿನಿಮಾ ಶೂಟಿಂಗ್ ರಿಸ್ಟಾರ್ಟ್ ಮಾಡೋದಕ್ಕೆ ತಯಾರಿ ಆರಂಭಿಸಿದೆ. ಹಾಗಾದ್ರೆ ಡೆವಿಲ್ ಶೂಟಿಂಗ್ ಯಾವಾಗ ಶುರುವಾಗಲಿದೆ? ದರ್ಶನ್‌ಗೆ ಬೇಲ್ ಸಮಯದಲ್ಲಿ ವಿಧಿಸಿರೋ ಕೆಲ ಷರತ್ತುಗಳನ್ನು ಗಮನದಲ್ಲಿ ಇಟ್ಟುಕೊಂಡು ಶೂಟಿಂಗ್​ಗೆ ಮರಳಬೇಕಿದೆ. ದರ್ಶನ್ ಸೆಷೆನ್ಸ್ ಕೋರ್ಟ್ ವ್ಯಾಪ್ತಿಯಿಂದ ಹೊರ ಹೋಗೋದಕ್ಕೆ ವಿಶೇಷ ಅನುಮತಿ ಪಡೆಯಬೇಕಿದೆ. ನಿರ್ದೇಶಕ ಕಂ ನಿರ್ಮಾಪಕ ಮಿಲನ ಪ್ರಕಾಶ್ ಆದಷ್ಟು ಬೇಗ ಶೂಟಿಂಗ್ ಆರಂಭಿಸೋದಕ್ಕೆ ಪ್ಲ್ಯಾನ್ ಮಾಡ್ತಾ ಇದ್ದಾರೆ.  ಜನವರಿ ಎರಡನೇ ವಾರದಿಂದ ಶೂಟಿಂಗ್ ಆರಂಭಿಸೋಣ ಅಂತ ಚಿತ್ರದ ತಂತ್ರಜ್ಞರಿಗೆ ಸಂದೇಶ ಕಳಿಸಿದ್ದಾರೆ ನಿರ್ದೇಶಕರು.

ಸಿಂಪಲ್ ಸೀರೆ, ಹಣೆಯಲ್ಲಿ ಕುಂಕುಮ; ಚೈತ್ರಾ ಕುಂದಾಪುರ ನಿಜಕ್ಕೂ ಮೇಕಪ್ ಹಾಕಲ್ವಾ?