Asianet Suvarna News Asianet Suvarna News

ನಟ ಚಿಕ್ಕಣ್ಣ ಸೆಕ್ಷನ್ 164 ಹೇಳಿಕೆಯಲ್ಲಿ ಏನಿದೆ?: ದರ್ಶನ್‌ಗೆ ಮುಳುವಾಗುತ್ತಾ ಹಾಸ್ಯ ನಟನ ಹೇಳಿಕೆ?

ವಿಚಿತ್ರ ಅಂದ್ರೆ ಅಪರಾಧಿಗಳು ದೊಡ್ಡ ದೊಡ್ಡ ಪ್ಲಾನ್ ಮಾಡಿ, ಚಿಲ್ರೆ ವಿಷಯದಲ್ಲಿ ಯಾಮಾರಿರ್ತಾರೆ. ಇಲ್ಲೂ ಅದೇ ಆಗಿದೆ. ಕೋಟಿಗಟ್ಲೆ ಖರ್ಚು ಮಾಡೋಕೆ ರೆಡಿ ಇದ್ದವನು, ಆಫ್ಟರಾಲ್ ಒಂದು ಲಕ್ಷದ ಜೀನ್ಸ್ ಅನ್ನ ಉಳಿಸ್ಕೊಂಡು. ಸಿಕ್ ಬಿದ್ದಿದ್ದಾನೆ.

First Published Aug 11, 2024, 4:53 PM IST | Last Updated Aug 11, 2024, 4:53 PM IST

ದರ್ಶನ್ ಕೇಸ್‌ನಲ್ಲಿ ಪೊಲೀಸರು ವಶಪಡಿಸಿಕೊಂಡ ಹಣವೇ ಹತ್ತತ್ರ 1 ಕೋಟಿ ಇದೆ.  ಕೇಸಿನಿಂದ ಹೊರಬರೋದಕ್ಕೆ ಹೆಚ್ಚೂ ಕಡಿಮೆ 1 ಕೋಟಿಗೂ ಜಾಸ್ತಿ ದುಡ್ಡು ಖರ್ಚು ಮಾಡ್ತಾ ಇದ್ರು ಅನ್ನೋದು ಪೊಲೀಸರ ಆರೋಪ. ಆದರೆ.. ಕೋಟಿಗಳನ್ನ ಸುರಿಯೋಕೆ ರೆಡಿ ಇದ್ದವರು, 1 ಲಕ್ಷದ ಜೀನ್ಸ್ ಪ್ಯಾಂಟ್ಗಾಗಿ ಆಸೆ ಬಿದ್ದು, ಕೇಸನ್ನ ಟೈಟ್ ಮಾಡ್ಕೊಂಡ್ರಾ.. ದಟ್ ಈಸ್ ಇಂಟ್ರೆಸ್ಟಿಂಗ್. ವೆಲ್ಕಂ ಟು ಡಿ ಗ್ಯಾಂಗ್.. ಚಿಕ್ಕಣ್ಣ & 1 ಲಕ್ಷದ ಜೀನ್ಸ್ ಪ್ಯಾಂಟ್ ಸೀಕ್ರೆಟ್. ಒಂದು ಲಕ್ಷದ ಜೀನ್ಸ್ ಪ್ಯಾಂಟ್ ಕಥೆ ಮತ್ತು ಆಕ್ಟರ್ ಚಿಕ್ಕಣ್ಣ ಕೊಟ್ಟಿರೋ ಸೆಕ್ಷನ್ 164 ಹೇಳಿಕೆ. ಈ ಎರಡೂ ಒಂದಕ್ಕೊಂದು ಮ್ಯಾಚ್ ಆಗ್ಬಿಟ್ರೆ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ 17 ಆರೋಪಿಗಳಿಗೂ ಕುಣಿಕೆ ಬಿಗಿ ಆಯ್ತು ಅಂತಾನೇ ಅರ್ಥ. 

ಆದರೆ.. ಕೇಸ್ ಅಷ್ಟು ಈಸಿ ಇಲ್ಲ ಅನ್ನೋದೂ.. ಅಷ್ಟೇ ಸತ್ಯ. ಕ್ರೈಂ ಮಾಡ್ದೋರೆಲ್ಲ ಕ್ಲೂ ಬಿಟ್ಟೇ ಬಿಟ್ಟಿರ್ತಾರೆ ಅನ್ನೋದು ಪೊಲೀಸರು ನಂಬೋ ಸತ್ಯ. ವಿಚಿತ್ರ ಅಂದ್ರೆ ಅಪರಾಧಿಗಳು ದೊಡ್ಡ ದೊಡ್ಡ ಪ್ಲಾನ್ ಮಾಡಿ, ಚಿಲ್ರೆ ವಿಷಯದಲ್ಲಿ ಯಾಮಾರಿರ್ತಾರೆ. ಇಲ್ಲೂ ಅದೇ ಆಗಿದೆ. ಕೋಟಿಗಟ್ಲೆ ಖರ್ಚು ಮಾಡೋಕೆ ರೆಡಿ ಇದ್ದವನು, ಆಫ್ಟರಾಲ್ ಒಂದು ಲಕ್ಷದ ಜೀನ್ಸ್ ಅನ್ನ ಉಳಿಸ್ಕೊಂಡು. ಸಿಕ್ ಬಿದ್ದಿದ್ದಾನೆ. ಇಷ್ಟೆಲ್ಲ ಆಗಿ, ದರ್ಶನ್ & ಗ್ಯಾಂಗ್ನ ಮರ್ಡರ್ ಕೇಸಿನಲ್ಲಿ ಫಿಟ್ ಮಾಡೋಕೆ ಸಾಧ್ಯನಾ..? ಅದು ನಿಂತಿರೋದು ಸಾಕ್ಷಿಗಳ ಮೇಲೆ. ಸಾಕ್ಷ್ಯಗಳ ಮೇಲೆ. ಸಾಕ್ಷಿ ಮತ್ತು ಸಾಕ್ಷ್ಯ ಈ ಎರಡೂ ಸೇರಿದ್ರೇನೆ, ಆರೋಪಿಯಾದವನು ಕೋರ್ಟಿನಲ್ಲಿ  ಅಪರಾಧಿಯಾಗೋದು. 

ತೀರಾ ತೀರಾ ಬೇಸರ ಆಗೋದು, ದರ್ಶನ್ ರಿಲೀಸ್ ಮಾಡೋಕೆ ಡಾ.ರಾಜ್ ಕುಮಾರ್ ಭವನದಲ್ಲಿ ಹೋಮ ನಡೆಯುತ್ತೆ ಅನ್ನೋ ವಿಷ್ಯ. ಕನ್ನಡ ಕಲಾವಿದರ ಸಂಘದ ಕಟ್ಟಡ ಇದ್ಯಲ್ಲ, ಆ ಕಟ್ಟಡಕ್ಕೆ ಡಾ.ರಾಜ್ ಕುಮಾರ್ ಭವನ ಅಂತಾ ಹೆಸರಿಟ್ಟಿದ್ದಾರೆ. ಅಂಬರೀಷ್ ಹೆಸರೂ ಇದೆ. ಆ ಕಟ್ಟಡದಲ್ಲಿ ಸ್ಪೆಷಲ್ ಪೂಜೆ ನಡೆಯುತ್ತಂತೆ. ಒಬ್ಬ ಕೊಲೆ ಆರೋಪಿ ನಟನ ಬಿಡುಗಡೆಗೆ ಹೋಮ ನಡೆಯೋದು.. ಕಲಾವಿದರ ಸಂಘದ ಕಟ್ಟಡ ಇರೋ ಡಾ.ರಾಜ್ ಕುಮಾರ್ ಭವನದಲ್ಲಿ ನಡೆಯೋದು.. ಅರಗಿಸಿಕೊಳ್ಳೋಕೆ ಕಷ್ಟ.  ನೋಡೋಣ. ಇನ್ನೂ ಏನೇನಾಗುತ್ತೆ ಅಂತಾ. ಇದು ಈ ಹೊತ್ತಿನ ವಿಶೇಷ. 

Video Top Stories