ಕೋಟಿ ಕೋಟಿ ಒಡೆಯ 37 ಲಕ್ಷಕ್ಕಾಗಿ ಪರದಾಟ; ಕೋರ್ಟ್​​​​ ಮೆಟ್ಟಿಲೇರಿದ ನಟ ದರ್ಶನ್

ಕೊಲೆ ಪ್ರಕರಣದ ನಂತರ ದರ್ಶನ್​ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ವಶಪಡಿಸಿಕೊಂಡ ಹಣವನ್ನು ಮರಳಿ ಪಡೆಯಲು ದರ್ಶನ್​ ಪ್ರಯತ್ನಿಸುತ್ತಿದ್ದಾರೆ. ಈ ಘಟನೆಯು ಅವರ ಐಷಾರಾಮಿ ಜೀವನಶೈಲಿಗೆ ತಡೆ ಒಡ್ಡಿದೆ.

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್​ ಸಂಕ್ರಾಂತಿ ಹಬ್ಬದ ಹೆಸರಲ್ಲಿ ಮೈಸೂರು ಬೆಂಗಳೂರು ಅಂತ ಓಡಾಡಿಕೊಂಡಿದ್ದಾರೆ. ಬಂದ ಸಂಕಷ್ಟದ ಪರಿಹಾರಕ್ಕೆ ದೇವಸ್ಥಾನ ಸುತ್ತಿ ಹರಕೆ ತೀರಿಸುತ್ತಿರೋ ದರ್ಶನ್​ ಬಳಿ ಖರ್ಚಿಗೆ ಕಾಸಿಲ್ವಾ..? ಹೀಗೊಂದು ಡೌಟ್ ಶುರುವಾಗಿದೆ. ಯಾಕಂದ್ರೆ ಕೋಟಿ ಕೋಟಿ ಸಂಭಾವನೆ ಪಡೆದು ಬೇಕಾದಷ್ಟು ಪ್ರಾಪರ್ಟಿ ಮಾಡಿಕೊಂಡಿರೋ ದಾಸ ಕೊಲೆ ಪ್ರಕರಣದ ತನಿಖೆ ವೇಳೆ ಪೊಲೀಸರು ವಶಪಡಿಸಿಕೊಂಡಿದ್ದ ಹಣಕ್ಕಾಗಿ ಪದೇ ಪದೇ ಬೇಡಿಕೊಳ್ಳುತ್ತಿದ್ದಾರೆ.ಬೇಕಾಗಿದ್ದನ್ನ ತಿಂದು ಕುಡಿದು ಸಂಭ್ರದಲ್ಲೇ ಇರುತ್ತಿದ್ದ ಕನ್ನಡದ ಸ್ಟಾರ್ ನಟ ದರ್ಶನ್. ಆದ್ರೆ ಒಂದೇ ಒಂದು ಕೊಲೆ ದರ್ಶನ್ ದರ್ಪ, ಸೊಕ್ಕು, ಅಹಂಕಾರ, ಸ್ಟಾರಿಸಂ ಐಶಾರಾಮಿ ಬದುಕು. ವಿಲಾಸಿ ಜೀವನ ಎಲ್ಲದಕ್ಕೂ ಕೊಳ್ಳಿ ಇಟ್ಟಿತ್ತು. ಆರು ತಿಂಗಳು ಸೆರೆಮನೆ ವಾಸ ದಾಸನ ವೈಭೋಕಕ್ಕೆ ಬ್ರೇಕ್ ಹಾಕಿತ್ತು.ದರ್ಶನ್ ಬಳಿ ಖರ್ಚಿಗೂ ಕಾಸಿಲ್ವಾ.? ಹೀಗೊಂದು ಡೌಟ್ ಶುರುವಾಗಿದೆ. ಯಾಕಂದ್ರೆ ಜೆಸ್ಟ್ 37 ಲಕ್ಷಕ್ಕಾಗಿ ನಟ ದರ್ಶನ್ ಪದೇ ಪದೇ ಕೋರ್ಟ್​ ಕದಾ ತಟ್ಟುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನ ವಿಚಾರಣೆ ವೇಳೆ ಪೊಲೀಸರು ವಶಪಡಿಸಿಕೊಂಡಿದ್ದ 37 ಲಕ್ಷ ರೂಪಾಯಿ ಹಣವನ್ನ ವಾಪಸ್ ಕೊಡಿಸುವಂತೆ ನಟ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದಾರೆ. 

ಕೇಸ್ ಮರೆತ ದರ್ಶನ್ ಪತ್ನಿ ಜೊತೆ ಸಿಟಿ ರೌಂಡ್ಸ್; ಚಾಮುಂಡೇಶ್ವರಿ, ಉಕ್ಕಡ ಮಾರಮ್ಮ ಎದುರು ದರ್ಶನ್ ಶಪಥ ಮಾಡಿದ್ದೇನು?

Related Video