Asianet Suvarna News Asianet Suvarna News

ರಚಿತಾ ರಾಮ್ ಜೊತೆ ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ

ಡಿಂಪಲ್ ಕ್ವೀನ್ ಸದ್ಯ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ ಈ ಸಿನಿಮಾ ಮೂಲಕ ಹೊಸ ಜೋಡಿಯೊಂದಿಗೆ ರಚಿತಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಅನ್ನೋದೆ ಸಖತ್ ಸ್ಪೆಷಲ್

ಸ್ಯಾಂಡಲ್‌ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ಲವ್ ಮಾಕ್ ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣಾ ಹಾಗೂ  ರಚಿತಾ ರಾಮ್ ಈ ಚಿತ್ರದ ಮೂಲಕ ಒಟ್ಟಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಮಾಸ್ಟರ್‌ಗೆ ಸಿಕ್ತಿದೆ ಸಖತ್ ರೆಸ್ಪಾನ್ಸ್: ಎಲ್ಲಾ ಟಿಕೆಟ್ ಸೋಲ್ಡ್‌ಔಟ್

ರಚಿತಾ ಹಾಗೂ  ಕಷ್ಣ  ಅಭಿನಯ ಮಾಡುತ್ತಿರೋ ಚಿತ್ರಕ್ಕೆ ನಿರ್ದೇಶಕ ದೀಪಕ್ ಗಂಗಾಧರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ...ಇದೊಂದು ಪಕ್ಕಾ ಲವ್ ಸ್ಟೋರಿ ಚಿತ್ರ ಆಗಿದೆ. ಇನ್ನು ಹೆಸರಿಡದ ಈ ಸಿನಿಮಾದ ಚಿತ್ರೀಕರಣ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿದೆ. 

Video Top Stories