Asianet Suvarna News Asianet Suvarna News

ನಿರೂಪಕಿ ಅನುಶ್ರೀಗೆ ಮತ್ತೆ ಸಂಕಷ್ಟ: ಡ್ರಗ್ಸ್ ತಗೊಂಡಿದ್ದು ಕನ್ಫರ್ಮ್?

Sep 8, 2021, 11:46 AM IST

ಕರಾವಳಿ ಡ್ರಗ್ಸ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಕೊರಿಯೋಗ್ರಫರ್ ನಿರೂಪಕಿ ಅನುಶ್ರೀ ಡ್ರಗ್ಸ್ ತೆಗೆದುಕೊಂಡಿದ್ದರು ಎಂದಿದ್ದಾರೆ. ಸೆಲೆಬ್ರಿಟಿ ಜಗತ್ತಿನಲ್ಲಿ ಆಗಷ್ಟೇ ಗುರುತಿಸಿಕೊಳ್ಳುತ್ತಿದ್ದ ಕಿಶೋರ್ ಶೆಟ್ಟಿ ಡ್ರಗ್ಸ್ ವಿಚಾರದಲ್ಲಿ ಅರೆಸ್ಟ್ ಆಗಿದ್ದರು. ಅವರು  ಡ್ಯಾನ್ಸ್ ಇಂಡಿಯಾ ಡ್ಯಾನ್ಸ್‌ನಲ್ಲಿ ಸ್ಪರ್ಧಿಯಾಗಿದ್ದ ಕಿಶೋರ್ ಅರೆಸ್ಟ್ ಆದಾಗ ಆತ ಮತ್ತಷ್ಟು ಜನ ಸೆಲೆಬ್ರಿಟಿಗಳ ಹೆಸರು ಬಾಯ್ಬಿಟ್ಟಿದ್ದ.

ಚಾರ್ಜ್‌ಶೀಟ್‌ನಲ್ಲಿ ಹೆಸರು; ಡ್ರಗ್ಸ್ ಸುಳಿಯಲ್ಲಿ ಮತ್ತೆ ತಗಲ್ಲಾಕ್ಕೊತಾರಾ ಆ್ಯಂಕರ್ ಅನುಶ್ರೀ.?

ತರುಣ್ ರಾಜ್ ವಿಚಾರಣೆಯೂ ನಡೆದಿತ್ತು. ಅಂದು ತನಿಖೆಯಲ್ಲಿ ಹೊರಬಿದ್ದ ಹೆಸರು ಕರ್ನಾಟಕದ ಪಾಪ್ಯುಲರ್ ನಿರೂಪಕಿ ಅನುಶ್ರೀ ಹೆಸರು. ಇದೀಗ ಮೂವರು ಬಂಧಿತರಿಂದ ಅವರ ಮೊಬೈಲ್‌ಗಳಿಂದ ಅನುಶ್ರೀ ವಿರುದ್ಧ ಸಾಕ್ಷಿಯೂ ಸಿಕ್ಕಿದೆ ಎನ್ನಲಾಗಿದೆ. ಇಲ್ಲಿದೆ ಡಿಟೇಲ್ಸ್

Video Top Stories