Yash: ಮುಂಬೈನಲ್ಲಿ ರಾಕಿಭಾಯ್ ಹವಾ: ಯಶ್ ನೋಡಲು ಮುಗಿಬಿದ್ದ ಫ್ಯಾನ್ಸ್
ರಾಕಿಂಗ್ ಸ್ಟಾರ್ ಯಶ್ ಮೊನ್ನೆ ಮುಂಬೈಗೆ ಹೋಗಿದ್ದರು. ಆ ವೇಳೆ ಅವರನ್ನು ನೋಡಲು ಸಾಕಷ್ಟು ಜನರು ಮುಗಿಬಿದ್ದಿದ್ದರು. ಈ ಕುರಿತು ಇಲ್ಲಿದೆ ಡಿಟೇಲ್ಸ್.
ರಾಕಿಂಗ್ ಸ್ಟಾರ್ ಯಶ್ ಕ್ರೇಜ್ ಕಾ ಬಾಪ್. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಮೊನ್ನೆ ನಡೆದ ಘಟನೆ. ಯಶ್ ಮೊನ್ನೆ ತಾನೆ ತನ್ನ 200 ಜನ ಫ್ಯಾನ್ಸ್'ಗೆ ಭೇಟಿ ಮಾಡೋದಕ್ಕೆ ಅವಕಾಶ ಕೊಟ್ಟಿದ್ರು. ಆದ್ರೆ ಅಂದು ಬೆಂಗಳೂರಿನಲ್ಲಿರೋ ಯಶ್ ಮನೆ ಮುಂದೆ ಬಂದಿದ್ದು ಸಾವಿರಾರು ಅಭಿಮಾನಿಗಳು. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕರ್ನಾಟಕ ಹೊರತುಪಡಿಸಿ ಅತಿ ಹೆಚ್ಚು ಫ್ಯಾನ್ಸ್ ಇರೋ ಊರು ಮುಂಬೈ. ಯಶ್ ಮುಂಬೈಗೆ ಯಾವಾಗ್ಲೆ ಎಂಟ್ರಿ ಕೊಡ್ಲಿ ಅಲ್ಲಿದ್ದ ಫ್ಯಾನ್ಸ್, ರಾಕಿ ಇದ್ದ ಜಾಗಕ್ಕೆ ಬಂದು ಬಿಡ್ತಾರೆ. ಶಾರುಖ್, ಸಲ್ಮಾನ್ ಖಾನ್ ಅವರ ಮನೆ ಮುಂದೆ ಸೇರೋ ಜನ ಜಾತ್ರೆ, ಯಶ್ ಹೋದಲ್ಲೆಲ್ಲಾ ಇರುತ್ತೆ. ಸೋ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಅನ್ನೋದಕ್ಕೆ ಇದಕ್ಕಿಂತ ನಿದರ್ಶನ ಬೇಕಾ? ಖಂಡಿತ ಇಲ್ಲ.