ಸ್ಪಂದನಾ ಗೆ RIP ಎನ್ನಲು ತುಂಬಾ ಕಷ್ಟವಾಗುತ್ತಿದೆ: ಶರಣ್‌

ಆಕೆಗೆ ಆರ್‌ಐಪಿ ಎಂದು ಹೇಳಲಾಗುತ್ತಿಲ್ಲ. ಭಗವಂತ ಅವರ ಕುಟುಂಬಕ್ಕೆ ಸ್ಪಂದನಾ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಸ್ಯಾಂಡಲ್‌ವುಡ್ ನಟ ಶರಣ್‌ ಸ್ಪಂದನಾ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ. 

First Published Aug 9, 2023, 12:13 PM IST | Last Updated Aug 9, 2023, 12:13 PM IST

ಇನ್ನೆಷ್ಟೋ ವರ್ಷಗಳು ಬಾಳಿ ಬದುಕಬೇಕಾದ ಜೀವ ಸ್ಪಂದನಾ, ನಮಗೇ ಇದು ನಂಬಲು ಸಾಧ್ಯವಾಗದ ಅರಗಿಸಿಕೊಳ್ಳಲಾಗದ ಆಘಾತ ಹೀಗಿರುವಾಗ ಅವರ ಕುಟುಂಬದವರಿಗೆ ಇದೊಂದು ಎಷ್ಟು ದೊಡ್ಡ ಆಘಾತ ಎಂದು ಹೇಳಲಾಗದು, ಮಾತುಗಳೇ ಬರುತ್ತಿಲ್ಲ,  ಮನೆಯಲ್ಲಿರುವ ಹಿರಿ ಜೀವಗಳೆಲ್ಲಾ ನಮ್ಮದೇನಿದೆ ಇನ್ನು ಎನ್ನುವ ಸಮಯದಲ್ಲಿ ಎಳೆ ಪ್ರಾಯದ ಸ್ಪಂದನಾ ಹೊರಟು ಹೋಗಿರುವುದು ಅರಗಿಸಿಕೊಳ್ಳಲಾಗದು. ಆಕೆಗೆ ಆರ್‌ಐಪಿ ಎಂದು ಹೇಳಲಾಗುತ್ತಿಲ್ಲ. ಭಗವಂತ ಅವರ ಕುಟುಂಬಕ್ಕೆ ಸ್ಪಂದನಾ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಸ್ಯಾಂಡಲ್‌ವುಡ್ ನಟ ಶರಣ್‌ ಶೋಕ ವ್ಯಕ್ತಪಡಿಸಿದ್ದಾರೆ. 

Video Top Stories