ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಕುಣಿದ ಬಿಎಂಟಿಸಿ ಮಹಿಳಾ ಸಿಬ್ಬಂದಿ; ವಿಡಿಯೋ ವೈರಲ್

ಈ ಬಾರಿ ಗಣೇಶ ಚತುರ್ಥಿ ಪೂರ್ತಿ ವಿಕ್ರಾಂತ್ ರೋಣನ ರಾ.. ರಾ. ರಕ್ಕಮ್ಮನ ಮಯವಾಗಿತ್ತು.  ಬಿಎಂಟಿಸಿ ಲೇಡಿ ಸ್ಟ್ಯಾಪ್ ಇಬ್ಬರು ಗಣೇಶ ಹಬ್ಬದಲ್ಲಿ ಡಿಜೆ ಮುಂದೆ ರಾ ರಾ ರಕ್ಕಮ್ಮ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

 

First Published Sep 16, 2022, 4:27 PM IST | Last Updated Sep 16, 2022, 4:27 PM IST

ಈ ಬಾರಿ ಗಣೇಶ ಚತುರ್ಥಿ ಪೂರ್ತಿ ವಿಕ್ರಾಂತ್ ರೋಣನ ರಾ.. ರಾ. ರಕ್ಕಮ್ಮನ ಮಯವಾಗಿತ್ತು. ಗಣೇಶನ  ವಿಸರ್ಜನೆ ಆಗ್ಬೇಕು ಅಂದ್ರೆ ಮೊದ್ಲು ಜಾಕ್ವಲೀನ್ ಹಾಗೂ ಕಿಚ್ಚ ಕುಣಿದಿದ್ದ ರಾ ರಾ ರಕ್ಕಮ್ಮನ ಹಾಡಿಗೆ ಡಾನ್ಸ್ ಆಗಬೇಕಿತ್ತು. ಇದೀಗ ಬಿಎಂಟಿಸಿ ಲೇಡಿ ಸ್ಟ್ಯಾಪ್ ಇಬ್ಬರು ಗಣೇಶ ಹಬ್ಬದಲ್ಲಿ ಡಿಜೆ ಮುಂದೆ ರಾ ರಾ ರಕ್ಕಮ್ಮ ಡಾನ್ಸ್ ಮಾಡಿದ್ದಾರೆ. ಬಿಎಂಟಿಸಿಯಲ್ಲಿ ಮೆಕನಿಕ್ ಆಗಿರೋ ಇಬ್ಬರು ಮಹಿಳಾ ಸಿಬ್ಬಂಧಿಗಳು ಗಣೇಶ ವಿಸರ್ಜನೆ ವೇಳೆ ರಸ್ತೆ ಮಧ್ಯದಲ್ಲಿ ರಕ್ಕಮ್ಮ ಡಾನ್ಸ್ ಮಾಡಿದ್ದಾರೆ. ಇವರಿಬ್ಬರು ಜೋಶ್ನಲ್ಲಿ ಕುಣಿದಿರೋ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.