ಗಂಧದಗುಡಿ ನೆನಪಿನ ಬುತ್ತಿ ಬಿಚ್ಚಿಟ್ಟ ಅಶ್ವಿನಿ: ಹೇಗಿತ್ತು ಅಪ್ಪು ಜರ್ನಿ?
ಗಂಧದಗುಡಿ ಸಿನಿಮಾವಾಗಿ ಬೆಳ್ಳಿತೆರೆ ಮೇಲೆ ಬಂದು ಜನರ ಮನ ಗೆದ್ದಿದೆ. ಕರ್ನಾಟಕದ ಸಂಪತ್ತನ್ನು ನಮ್ಮ ಮುಂದೆ ತೆರೆದಿಟ್ಟಿರೋ ಪುನೀತ್ ಜರ್ನಿ ಹೇಗಿತ್ತು ಎಂದು ಅಪ್ಪು ಪತ್ನಿ ಅಶ್ವಿನಿ ತೆರೆದಿಟ್ಟಿದ್ದಾರೆ.
ಗಂಧದ ಗುಡಿ ಸಿನಿಮಾದಲ್ಲಿ ಅಪ್ಪು ನನಗೆ ಹಾವು ಅಂದ್ರೆ ತುಂಬಾ ಭಯ ಆಗುತ್ತೆ ಅಂತಾರೆ. ದೊಡ್ಡ ಕಾಳಿಂಗ ಸರ್ಪ ಒಂದರ ರೆಸ್ಕ್ಯೂ ಮಾಡೋ ದೃಶ್ಯದಲ್ಲಿ ಅಪ್ಪು ಭಯಪಟ್ಟಿದ್ದನ್ನು ನೀವೆಲ್ಲಾ ನೋಡಿರ್ತಿರಾ. ಅಷ್ಟೆ ಅಲ್ಲ ನಿಮ್ಮ ಮನೆಗೆ ಹಾವೇನಾದ್ರು ಬಂದ್ರೆ ರೆಸ್ಕ್ಯೂ ಮಾಡೋಕೆ ನನ್ನನ್ನ ಕರೆಯಿರಿ ಅಂತ ಹೇಳ್ತಾರೆ ಪುನೀತ್. ಇದನ್ನೆಲ್ಲಾ ನೋಡುತ್ತಿದ್ರೆ ಕಣ್ಣು ತುಂಬಿ ಬರುತ್ತೆ. ಭಯನೂ ಆಗುತ್ತೆ. ಅದೇ ತರ ಹಾವಿನ ಚಿತ್ರೀಕರಣ ಮಾಡೋ ವಿಚಾರವನ್ನು ಪುನೀತ್ ತಮ್ಮ ಪತ್ನಿ ಅಶ್ವಿನಿಗೆ ಹೇಳಿದಾಗ ಅವರು ಕೂಡ ಭಯ ಪಟ್ಟಿದ್ರಂತೆ. ಹೀಗೆ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.