ಪ್ರಿಯಾಂಕಾ ಎಲ್ಲಿ ಉಗ್ರಾವತಾರ ತಾಳ್ತಾರೋ ಅಂತ ಭಯ: ಉಪೇಂದ್ರ
ಉಗ್ರಾವತಾರ ಹಾಡುಗಳ ಬಿಡುಗಡೆ. ಪತ್ನ ಅಕ್ಷನ್ ನೋಡಿ ಥ್ರಿಲ್ ಆದ ರಿಯಲ್ ಸ್ಟಾರ್ ಉಪೇಂದ್ರ...
‘ಪ್ರಿಯಾಂಕಾ ಕರೆದಾಗ ಬರದಿದ್ದರೆ ಎಲ್ಲಿ ಉಗ್ರಾವತಾರ ತಾಳ್ತಾರೋ ಅಂತ ಭಯ. ಅದಕ್ಕೆ ಈ ಕಾರ್ಯಕ್ರಮಕ್ಕೆ ಕರೆದ ಕೂಡಲೇ ಬಂದೆ. ಮಂಜುಳಾ, ಮಾಲಾಶ್ರೀ ಮೊದಲಾದವರು ಆ್ಯಕ್ಷನ್ ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದರು.'
'ಆಮೇಲೆ ಆ ಪರಂಪರೆ ಬೆಳೆಯಲೇ ಇಲ್ಲ. ಉಗ್ರಾವತಾರದಲ್ಲಿ ಪ್ರಿಯಾಂಕಾ ಆಕ್ಷನ್ ನೋಡಿ ಆ ಪರಂಪರೆ ಮುಂದುವರಿಯುವ ಲಕ್ಷಣ ಕಾಣುತ್ತಿದೆ. ಈಗ ಬಿಡುಗಡೆ ಆಗಿರುವ ಸಿದ್ದಿ ಹಾಡು ಕೇಳಿ ಥ್ರಿಲ್ಲಾದೆ’.
ಇಷ್ಟುಹೇಳಿ ಪತ್ನಿ ಪ್ರಿಯಾಂಕ ಮುಖ ನೋಡಿ ಮುಗುಳ್ನಕ್ಕರು ಉಪೇಂದ್ರ. ಪ್ರಿಯಾಂಕಾ ಉಪೇಂದ್ರ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿರುವ ಆಕ್ಷನ್ ಥ್ರಿಲ್ಲರ್ ಪ್ಯಾನ್ ಇಂಡಿಯನ್ ಸಿನಿಮಾ ‘ಉಗ್ರಾವತಾರ’ದ ಹಾಡುಗಳು ಎ2 ಮ್ಯೂಸಿಕ್ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.
ಗಿರಿಜಾ ಸಿದ್ದಿ ತಮ್ಮ ಸಮುದಾಯದವರೊಂದಿಗೆ ಹಾಡಿ ಕುಣಿದಿರುವ ಈ ಸಿದ್ದಿ ಹಾಡಿನಲ್ಲಿ ಪ್ರಿಯಾಂಕಾ ಅವರೂ ಹೆಜ್ಜೆ ಹಾಕಿದ್ದಾರೆ. ನಿರ್ದೇಶಕ ಗುರುಮೂರ್ತಿ, ನಿರ್ಮಾಪಕ ಸತೀಶ್, ಸಂಭಾಷಣೆಕಾರ ಕಿನ್ನಾಳ್ ರಾಜ್, ಛಾಯಾಗ್ರಾಹಕ ನಂದಕುಮಾರ್ ಇದ್ದರು.
ಗಿರಿಜಾ ಸಿದ್ದಿ, ‘ನಮ್ಮ ಸಿದ್ದಿ ಹಾಡುಗಳಲ್ಲಿ ಕಡಿಮೆ ಸಾಲುಗಳಿರುತ್ತವೆ. ಅವವೇ ಸಾಲುಗಳು ರಿಪೀಟ್ ಆಗುತ್ತಿರುತ್ತವೆ. ಹೀಗಾಗಿ ಈ ಸಿನಿಮಾಕ್ಕೆ ಮೂರ್ನಾಲ್ಕು ಹಾಡುಗಳ ಸಾಲುಗಳನ್ನು ಕೊಲಾಜ್ ಮಾಡಲಾಗಿದೆ’ ಎಂದು ಈ ಹಾಡು ಕಟ್ಟಿದ ಬಗೆಯನ್ನು ವಿವರಿಸಿದರು.
ನಾಯಕಿ ಪ್ರಿಯಾಂಕಾ, ‘ಉಗ್ರಾವತಾರದ ಪಾತ್ರ ಒಪ್ಪಿಕೊಂಡಾಗ ಕೆಲವರು ನೀನಿದಕ್ಕೆ ಸೂಟ್ ಆಗಲ್ಲ ಅಂದ್ರು. ನಾನು ಚಾಲೆಂಜಿಂಗ್ ಆಗಿ ತಗೊಂಡೆ.
ಸಾಕಷ್ಟುಆಕ್ಷನ್ ಸೀಕ್ವೆನ್ಸ್ಗಳಿವೆ. ಅದರಲ್ಲೆಲ್ಲ ಡೂಪ್ ಇಲ್ಲದೇ ಸಾಹಸ ಕಲಿತು ನಟಿಸಿದ್ದೇನೆ. ಇದಕ್ಕೂ ಮುನ್ನ ಉಪ್ಪಿ ಸಿನಿಮಾಗಳ ಆಕ್ಷನ್ ಸೀನ್ಗಳನ್ನು ನೋಡಿ ಪ್ರಾಕ್ಟೀಸ್ ಮಾಡಿದ್ದೆ’ ಎಂದರು.