ಯುವ ದಸರಾದಲ್ಲಿ ಯುವ ಮನಸ್ಸುಗಳ ಸಾಮ್ರಾಟ್: ದಸರಾ ಹಬ್ಬದ ಮೆರುಗು ಹೆಚ್ಚಿಸಿದ ಪವರ್ ಸ್ಟಾರ್!

ಕಳೆದ 11 ತಿಂಗಳಿನಿಂದ ರಾಜ್ಯದಲ್ಲಿ ಯಾವ ಹಬ್ಬ ಆದ್ರೂ ಅಲ್ಲಿ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಇರಲೇ ಬೇಕು. ಅದೇ ರೀತಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬಕ್ಕೆ ಈ ಭಾರಿ ದೊಡ್ಡ ಶಕ್ತಿ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. 

First Published Sep 30, 2022, 12:24 PM IST | Last Updated Sep 30, 2022, 12:24 PM IST

ಕಳೆದ 11 ತಿಂಗಳಿನಿಂದ ರಾಜ್ಯದಲ್ಲಿ ಯಾವ ಹಬ್ಬ ಆದ್ರೂ ಅಲ್ಲಿ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಇರಲೇ ಬೇಕು. ಅದೇ ರೀತಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬಕ್ಕೆ ಈ ಭಾರಿ ದೊಡ್ಡ ಶಕ್ತಿ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಈ ರಾಜಕುಮಾರ ಯುವ ಮನಸ್ಸುಗಳಿಗೆ ಮಾರ್ಗದರ್ಶಿ, ಶಕ್ತಿ, ಸ್ಪೂರ್ತಿ ಎಲ್ಲವೂ ಆಗಿದ್ದಾರೆ. ಹೀಗಾಗಿ ಈ ಭಾರಿ ಮೈಸೂರು ದಸರದಲ್ಲಿ ನಡೆಯೋ ಬಹು ದೊಡ್ಡ ಕಾರ್ಯಕ್ರಮ ಯುವ ದಸರಾ ಮೆರಗನ್ನ  ವಪರ್ ಸ್ಟಾರ್ ಪುನೀತ್ ಹೆಚ್ಚಿದ್ದಾರೆ. ಯುವ ದಸರಾವನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಿದ್ರು, ಪುನೀತ್‌ನ್ನ ನೆನೆದು ಕಣ್ಣೀರಾಗಿದ್ರು. ಈ ಭಾರಿ ಈ ಯುವ ದಸರಾದಲ್ಲಿ ಮನೊರಂಜನೆ ಹೆಚ್ಚಿಸಿದ್ದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾಗಳ ಹಾಡು. ಹಲವು ಕಲಾವಿಧರ ಅಪ್ಪು ಹಾಡಿಗೆ ಡಾನ್ಸ್ ಮಾಡಿದ್ರು. ಇನ್ನು ಗುರು ಕಿರಣ್, ವಿಜಯ್ ಪ್ರಸಾದ್ ತಮ್ಮ ಕಂಠದಿಂದ ಅಪ್ಪು ಸಿನಿಮಾಗಳ ಹಾಡು ಹಾಡಿ ಯುವ ದಸರದಲ್ಲಿ ಅಪ್ಪು ಅಭಿಮಾನದಲ್ಲಿ ಮಿಂದೆದ್ದಿದ್ರು ಮೈಸೂರು ಮಂದೇಳುವಂತೆ ಮಾಡಿದ್ರು. ಯುವ ದಸರಾದಲ್ಲಿ ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಧೀರೆನ್ ರಾಮ್ ಕುಮಾರ್, ವಸಿಷ್ಠ ಸಿಂಹ ಭಾಗಿ ಆಗಿದ್ರು. ಕಂಚಿನ ಕಂಠದ ವಸಿಷ್ಠ ಸಿಂಹ ಗೊಂಬೇ ಹೇಳುತೈತೆ ಹಾಡು ಹಾಡಿದ್ರು.  ಇಡೀ ಕಾರ್ಯಕ್ರಮ ಹೇಗಿತ್ತು ಅಂತ ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಯುವ ದಸರಾ ಯುವರತ್ನನ ಆರಾಧನೆಯಂತಿತ್ತು.. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment