ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್ ಆಫ್ ದಿ ನೇಷನ್: ದರ್ಶನ್ ಬಗ್ಗೆ ತುಟಿ ಬಿಚ್ಚದ ಪ್ರಕಾಶ್ ರಾಜ್!
ಡೈರೆಕ್ಟರ್ ಆರ್ ಚಂದ್ರು ಕಬ್ಜ ಸಿನಿಮಾ ಮಾಡಿ ಗೆದ್ದಿದ್ದು ಗೊತ್ತೇ ಇದೆ. ಈಗ ಚಂದ್ರು ಗುರಿ ಇಟ್ಟಿರೋದು ಒಟ್ಟಿಗೆ ಐದು ಸಿನಿಮಾಗಳನ್ನ ನಿರ್ಮಾಣ ಮಾಡೋದು. ಈಗ ಚಂದ್ರು ಮೊದಲ ಹೆಜ್ಜೆಯಾಗಿ ಫಾದರ್ ಸಿನಿಮಾ ಶುರುವಾಗಿದೆ. ಅಪ್ಪ, ಮಗನ ಬಾಂಧವ್ಯದ ಕಥೆ ಹೇಳೋ ಫಾದರ್ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ.
ಡೈರೆಕ್ಟರ್ ಆರ್ ಚಂದ್ರು ಕಬ್ಜ ಸಿನಿಮಾ ಮಾಡಿ ಗೆದ್ದಿದ್ದು ಗೊತ್ತೇ ಇದೆ. ಈಗ ಚಂದ್ರು ಗುರಿ ಇಟ್ಟಿರೋದು ಒಟ್ಟಿಗೆ ಐದು ಸಿನಿಮಾಗಳನ್ನ ನಿರ್ಮಾಣ ಮಾಡೋದು. ಈಗ ಚಂದ್ರು ಮೊದಲ ಹೆಜ್ಜೆಯಾಗಿ ಫಾದರ್ ಸಿನಿಮಾ ಶುರುವಾಗಿದೆ. ಅಪ್ಪ, ಮಗನ ಬಾಂಧವ್ಯದ ಕಥೆ ಹೇಳೋ ಫಾದರ್ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ನಟ ಡಾರ್ಲಿಂಗ್ ಕೃಷ್ಣ, ಅಮೃತಾ ಅಯ್ಯಂಗರ್ ಭಾಗವಹಿಸಿದ್ದಾರೆ. ಫಾದರ್ ಟೈಟಲ್ಲೇ ಹೇಳುವಂತೆ ಇದು ತಂದೆ ಮಗನ ರಿಲೇಷನ್ಶಿಪ್ ಜೊತೆ ಮನ ಮುಟ್ಟುವ ಕಥೆ ಇದೆಯಂತೆ. ಈ ಸಿನಿಮಾದಲ್ಲಿ ಪ್ರಕಾಶ್ ರಾಜ್ ತಂದೆಯಾದ್ರೆ ಮಗನ ರೋಲ್ನಲ್ಲಿ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ.
ಮಿಡಲ್ ಕ್ಲಾಸ್ ಕುಟುಂಬದ ಸಿನಿಮಾ ಫಾದರ್ ಬಗ್ಗೆ ಮಾತನಾಡುತ್ತಾ ಪ್ರಕಾಶ್ ರಾಜ್, ಮಹತ್ಮಾ ಗಾಂಧಿ ಬಿಟ್ಟರೇ ನಾನೇ ಫಾದರ್ ಆಫ್ ದಿ ನೇಷನ್ ಅಂದ್ರು. ಯಾಕಂದ್ರೆ ಪ್ರಕಾಶ್ ರಾಜ್ ಬಹುಭಾಷಾ ನಟ. ಎಲ್ಲಾ ಚಿತ್ರರಂಗದ ಸಿನಿಮಾಗಳಲ್ಲೂ ಪ್ರಕಾಶ್ ರಾಜ್ ತಂದೆಯ ರೋಲ್ ಮಾಡಿದ್ದಾರೆ. ಆ ಎಲ್ಲಾ ತಂದೆಯ ಪಾತ್ರಗಳಿಗಿಂತ ಈ ಫಾದರ್ ಡಿಫ್ರೆಂಟ್ ಅಂದ್ರು. ನಟ ದರ್ಶನ್ ಕೊಲೆ ಕೇಸ್ನಲ್ಲಿ ಅಂದರ್ ಆಗಿ ತಿಂಗಳಾಗಿದೆ. ದರ್ಶನ್ ಬಗ್ಗೆ ಕೆಲ ಕಲಾವಿಧರು ಅವರಿಗನ್ನಿಸಿದ್ದನ್ನ ಹೇಳುತ್ತಿದ್ದಾರೆ. ಆದ್ರೆ ಫಾದರ್ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಸಿಕ್ಕ ಪ್ರಕಾಶ್ ರಾಜ್ ಮಾತ್ರ ದರ್ಶನ್ ಬಗ್ಗೆ ಮಾತನಾಡೋ ಮನಸ್ಸು ಮಾಡಲಿಲ್ಲ.
ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ, ಸೋಷಿಯಲ್ ಮೀಡಿಯಾವನ್ನು ಕೆಲವರು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ, ತಂದೆ-ಮಗನ ಸಂಬಂಧದ ಬಗ್ಗೆ, ಸ್ಟಾರ್ ಡಮ್ ಸಂಭಾಳಿಸುವ ಬಗ್ಗೆ ಹೀಗೆ ಹಲವು ವಿಷಯಗಳನ್ನು ಹಂಚಿಕೊಂಡ್ರು. ಆರ್ ಸಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಿರ್ಮಾಣ ಆಗುತ್ತಿರೋ ಫಾದರ್ ಸಿನಿಮಾವನ್ನ ರಾಜ್ ಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಎರಡನೇ ಭಾರಿಗೆ ನಟ ಡಾರ್ಲಿಂಗ್ ಕೃಷ್ಣ ಹಾಗು ಅಮೃತಾ ಅಯ್ಯಂಗರ್ ಜೊತೆಯಾಗಿದ್ದಾರೆ. ಈ ಹಿಂದೆ ಲವ್ ಮಾಕ್ಟೆಲ್ ಮಾಡಿ ಎಲ್ಲರ ಮನ ಗೆದ್ದಿದ್ರು ಈ ಜೋಡಿ. ಲವ್ ಮಾಕ್ಟೆಲ್ನಲ್ಲಿ ಲವರ್ಸ್ ಆಗಿದ್ದ ಕೃಷ್ಣ ಅಮೃತಾ ಫಾದರ್ನಲ್ಲಿ ಗಂಡ ಹೆಂಡತಿಯಾಗಿದ್ದಾರೆ.