'ಗಂಧದ ಗುಡಿ'ಯಲ್ಲಿ ಅಪ್ಪು ಸರ್ ಜೀವಿಸಿದ್ದಾರೆ: ಅನುಶ್ರೀ
ನಮ್ಮ ಒಳಗಿನ ಕಲ್ಮಶವನ್ನು ನಾವು ತೆಗೆದು ಹಾಕಬೇಕು ಅಂದ್ರೆ ಎಲ್ಲರೂ ಗಂಧದ ಗುಡಿ ಸಿನಿಮಾ ನೋಡಬೇಕು ಎಂದು ನಿರೂಪಕಿ ಅನುಶ್ರೀ ಹೇಳಿದರು.
ದೇವರು ನಮಗೆ ಈ ನಿಸರ್ಗವನ್ನು ತುಂಬಾ ಫ್ರೀ ಆಗಿ ಕೊಟ್ಟಿದ್ದಾನೆ, ಆದರೆ ನಾವು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೇವೆ. ಅದನ್ನು ಹೇಗೆ ಕಾಪಾಡಿಕೊಳ್ಳಬಹುದು, ಇನ್ನು ಹೇಗೆ ನಿಸರ್ಗಕ್ಕೆ ಹತ್ತಿರವಾಗಿ ಇರಬಹುದು ಎಂದು ಅಪ್ಪು ಸರ್ ತೋರಿಸಿ ಕೊಟ್ಟಿದ್ದಾರೆ ಎಂದರು. ಅಪ್ಪು ಸರ್ ತುಂಬಾ ಸಿಂಪ್ಲಿಸಿಟಿಯಿಂದ ಅಲ್ಲಿ ಬದುಕಿ ನಮಗೆ ಹೇಳಿದ್ದಾರೆ. ಪ್ಲ್ಯಾಸ್ಟಿಕ್ ಬಳಕೆ ಬಗ್ಗೆ ಹೇಳಿದ್ದಾರೆ, ಇದರಿಂದ ಪ್ರಾಣಿಗಳಿಗೆ ಎಷ್ಟು ಹಾನಿಯಾಗುತ್ತದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಪ್ರತಿಯೊಂದು ಕ್ಷಣದಲ್ಲಿಯೂ ಅಪ್ಪು ಸರ್ ಜೀವಿಸಿದ್ದಾರೆ ಎಂದರು.