Asianet Suvarna News Asianet Suvarna News

ತೋತಾಪುರಿಯ ಮತ್ತೊಂದು ವೀಡಿಯೋ ರಿವೀಲ್: ಏನಿದು ಅಸಲಿ ಕತೆ?

ಜಗ್ಗೇಶ್-ಅದಿತಿ ಪ್ರಭುದೇವ ನಟನೆಯ ತೋತಾಪುರಿ ಸಿನಿಮಾ ಅಲ್ಲ ಇದೊಂದು ಬದುಕಿನ ತಾತ್ಪರ್ಯ ಅಂತ ಸಿನಿಮಾ ನೋಡಿದ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ಈ ಮಾತು ಅಕ್ಷರಶಃ ಸತ್ಯ ಅಂತ ತಿಳಿಸೋಕೆ ಈಗ ತೋತಾಪುರಿ ಸಿನಿಮಾದ ವೀಡಿಯೋ ಒಂದು ರಿಲೀಸ್ ಆಗಿದೆ. 

Oct 5, 2022, 1:49 PM IST

ಜಗ್ಗೇಶ್-ಅದಿತಿ ಪ್ರಭುದೇವ ನಟನೆಯ ತೋತಾಪುರಿ ಸಿನಿಮಾ ಅಲ್ಲ ಇದೊಂದು ಬದುಕಿನ ತಾತ್ಪರ್ಯ ಅಂತ ಸಿನಿಮಾ ನೋಡಿದ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ಈ ಮಾತು ಅಕ್ಷರಶಃ ಸತ್ಯ ಅಂತ ತಿಳಿಸೋಕೆ ಈಗ ತೋತಾಪುರಿ ಸಿನಿಮಾದ ವೀಡಿಯೋ ಒಂದು ರಿಲೀಸ್ ಆಗಿದೆ. ಅದು ಚಿತ್ರದ ಅಸಲಿ ಕಂಟೆಂಟ್ ಕೂಡ ಹೌದು. ರಾಯರ ಮಠದಲ್ಲಿ ವೀಣೆ ನುಡಿಸೋ ಶಕೀಲಾಭಾನುಗೆ ಒಂದಷ್ಟು ಭಕ್ತರು ಹಾಗೂ ಆಡಳಿತ ಮಂಡಳಿ ಇನ್ನು ವೀಣೆ ನುಡಿಸುವಂತಿಲ್ಲ ಅಂದಾಗ ಆಕೆ ತುಂಬಾ ನೋಂದುಕೊಳ್ತಾಳೆ. ಕೊನೆಗೆ ರಾಯರ ಮಠದ ಸ್ವಾಮಿಗಳೇ ಬೃಂದಾವನವೊಂದನ್ನ ಆ ಶಕೀಲಾಭಾನು ಮನೆಗೆ ತಂದು ಕೊಡ್ತಾರೆ. ಇದು ನಿಜಕ್ಕೂ ರೋಮಾಂಚನಕಾರಿ ಹಾಗೂ ಭಾವೈಕ್ಯತೆಯ ಬಂಧಗಳ ಗಮ್ಮತ್ತನ್ನ ಸಾರುತ್ತಿದೆ. ಬೃಂದಾವನದಲ್ಲಿ ನಾನು ರಾಯರನ್ನ ಕಾಣ್ತೇನೆ. 

ನೀನು ಅಲ್ಲಾನ ಕಾಣ್ತೀಯ. ಮತ್ತೊಬ್ರು ಜೀಸಸ್‌ನ ಕಾಣ್ತಾರೆ. ಈ ಬೃಂದಾವನ ತಿಳಿ ಮನಸ್ಸು ಇದ್ದಂತೆ. ಇಲ್ಲಿ ಯಾರು ಯಾರನ್ನ ಬೇಕಾದ್ರೂ ಕಾಣಬಹುದು. ನೀನು ಜೀವ ಇರೋವರೆಗೂ ವೀಣೆ ನುಡಿಸಬಹುದು. ಅದು ಗುಡಿ, ಚರ್ಚ್, ಮಸೀದಿ ಎಲ್ಲಾದ್ರೂ ಸರಿ ಅನ್ನೋ ಮಾತನ್ನ ಮಠದ ಸ್ವಾಮಿಗಳು ಹೇಳ್ತಾರೆ. ಇಂತಹ ಕಂಟೆಂಟ್ ಪ್ರಸ್ತುತ ಸಮಾಜಕ್ಕೆ ಬೇಕಿದೆ. ಅದನ್ನ ನೀಡುವಂತೆಹ ಕೆಲಸವನ್ನ ತೋತಾಪುರಿ ಟೀಂ ಮಾಡಿದೆ. ಹೀಗಾಗಿ ತೋತಾಪುರಿ ಟ್ರೈಲರ್ ನೋಡಿ ಇದು ಬರೀ ಪೋಲಿ ಜೋಕ್ಸ್ ಇರೋ ಯೂತ್‌ಫುಲ್ ಸಿನಿಮಾ ಅಂತ ನೀವಂದುಕೊಂಡ್ರೆ ಅದು ತಪ್ಪು. ತೋತಾಪುರಿ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್. ನಿರ್ದೇಶಕ ವಿಜಯ್ ಪ್ರಸಾದ್, ನಿರ್ಮಾಪಕ ಕೆಎ ಸುರೇಶ್ ಸಾಮಾಜಿಕ ಕಳಕಳಿಯಲ್ಲಿ ಮಾಡಿರೋ ಚಿತ್ರ ಇದು. ಸದ್ಯ ತೋತಾಪುರಿ ನೋಡಿದವರೆಲ್ಲಾ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment