ನಟಿ ಶ್ರೀಲೀಲಾ ವಿಡಿಯೋ ವೈರಲ್;ಅಶ್ಲೀಲ ನೃತ್ಯದ ವಿರುದ್ದ ಮಹಿಳಾ ಆಯೋಗ ಗರಂ
ಕೇತಿಕಾ ಹುಕ್ ಸ್ಟೆಪ್..ಪಡ್ಡೆ ಹೈಕಳು ಕ್ಲೀನ್ ಬೌಲ್ಡ್.ಕೇತಿಕಾ ಅಶ್ಲೀಲ ಡ್ಯಾನ್ಸ್ ಟಾಲಿವುಡ್ ನಟ್ ಬೋಲ್ಟ್ ಟೈಟ್.
ರಾಬಿನ್ಹುಡ್ ಸಿನಿಮಾದ ಹಾಡು ಸೃಷ್ಟಿಸಿದ ವಿವಾದ.
ಇತ್ತೀಚಿಗೆ ಸೌತ್ ಸಿನಿರಂಗದಲ್ಲಿ ನಂ.1 ಟ್ರೆಂಡಿಂಗ್ನಲ್ಲಿರೋದು ರಾಬಿನ್ ಹುಡ್ ಸಿನಿಮಾದ ಅದಿದಾ ಸರ್ಪ್ರೈಸು ಸಾಂಗು. ನಿತಿನ್ - ಶ್ರೀಲೀಲಾ ನಟನೆಯ ಈ ಸಿನಿಮಾದಲ್ಲಿ ಕೇತಿಕಾ ಶರ್ಮಾ ಹೆಜ್ಜೆ ಹಾಕಿರೋ ಹಸಿ ಬಿಸಿ ಐಟಂ ನಂಬರ್ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಆದ್ರೆ ಈ ಹಾಡಿನಲ್ಲಿರೋ ಹುಕ್ ಸ್ಟೆಪ್ ನಲ್ಲಿರೋ ಅಶ್ಲೀಲತೆ ಮಹಿಳಾ ಆಯೋಗದ ಕಣ್ಣು ಕೆಂಪಾಗಿಸಿದೆ. ವಿವಾದ ಎಬ್ಬಿಸಿರೋ ಹಾಡಿನಿಂದ ಮತ್ತೆ ಟಾಲಿವುಡ್ ನಟ್ ಬೋಲ್ಟ್ ಟೈಟ್ ಆಗುತ್ತಾ..? ಹಾಡಲ್ಲಿರೋ ಅಸಲಿ ಗಮ್ಮತ್ತೇ ಇದರ ಹುಕ್ ಸ್ಟೆಪ್. ಮೈಗೆಲ್ಲ ಎಣ್ಣೆ ಬಳಿದುಕೊಂಡು ಕೊರಳಿನ ಸುತ್ತ ಹಲವು ಸುತ್ತು ಮಲ್ಲಿಗೆ ಸುತ್ತಿಕೊಂಡು ಲಂಗ ಧರಿಸಿ ಡ್ಯಾನ್ಸ್ ಮಾಡೋ ಕೇತಿಕಾ ‘ಅದಿ ದಾ ಸರ್ಪ್ರೈಜು’ ಎಂಬ ಸಾಲು ಬಂದಾಗ ಹಾಕಿರುವ ಹುಕ್ ಸ್ಟೆಪ್ಪು ಪಡ್ಡೆ ಹೈಕಳ ನಿದ್ದೆ ಕೆಡಿಸಿದೆ.ಹಾಡನ್ನ ಚಿತ್ರಿಸಿರೋ ರೀತಿಗೆ ಗರಂ ಆಗಿರೋ ಮಹಿಳಾ ಆಯೋಗ ಚಿತ್ರತಂಡಕ್ಕೆ ನೋಟೀಸ್ ನಿಡೋದಕ್ಕೆ ಮುಂದಾಗಿದೆ. ಅನೇಕ ಮಹಿಳಾ ವಾದಿಗಳು ಕೂಡ ಈ ಹಾಡಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಈ ಹಾಡನ್ನ ಚಿತ್ರದಿಂದ ತೆಗೆದು ಹಾಕಬೇಕು , ಇದರ ಕೋರಿಯೋಗ್ರಾಫರ್ ಶೇಖರ್ ಮಾಸ್ಟರ್ನ ಬಂಧಿಸಬೇಕು ಅನ್ನೋ ಕೂಗು ಕೇಳಿ ಬಂದಿವೆ.