
ಕಾಂತಾರ ಸಕ್ಸಸ್‌ನಿಂದ ಸಪ್ತಮಿಗೆ ಗೌಡಗೆ ಹೆಚ್ಚಿದ ಬೇಡಿಕೆ: 'ಸಿಂಗಾರ ಸಿರಿ'ಗೆ ಬಂದ ಆಫರ್ಸ್ ಎಷ್ಟು?
ಕಾಂತಾರ ಸಿನಿಮಾ ಭರ್ಜರಿ ಯಶಸ್ಸು ಕಂಡ ಬಳಿಕ ನಟಿ ಸಪ್ತಮಿ ಗೌಡ ಹಲವು ಕಥೆಗಳನ್ನು ಕೇಳಿದ್ದು, ಅವುಗಳ ಕುರಿತು ಮಾತನಾಡಿದ್ದಾರೆ.
ಕಾಂತಾರ ಸಿನಿಮಾದ ನಂತರ ಜನರು ತುಂಬಾ ಪ್ರೀತಿಯನ್ನು ಕೊಡುತ್ತಿದ್ದಾರೆ ಎಂದು ನಟಿ ಸಪ್ತಮಿ ಗೌಡ ಹೇಳಿದರು. ಕಾಂತಾರದ ಲೀಲಾ ಎನ್ನುವ ಪಾತ್ರದಿಂದ ಸಪ್ತಮಿಯನ್ನು ಇಂದು ಇಷ್ಟು ಪ್ರೀತಿ ಮಾಡುತ್ತಿದ್ದಾರೆ. ಅದಕ್ಕೆ ನಾನು ಚಿರಋಣಿ ಎಂದು ಹೇಳಿದರು. ಕಾಂತಾರ ನಂತ್ರ ತುಂಬಾ ಆಫರ್ಸ್ ಬಂದಿದೆ. ಇಪ್ಪತ್ತರಿಂದ ಮೂವತ್ತು ಆಫರ್ಸ್ ಬಂದಿವೆ. ಅದರಲ್ಲಿ ಒಂದಿಷ್ಟು ನರೇಷನ್ ಹೇಳಿದಿನಿ, ಕಥೆಯನ್ನು ಕೇಳಿದಿನಿ ಎಂದರು. ಯಾವದಕ್ಕೂ ಆತರ ಪಡದೆ ಮನ್ಸಿಗೆ ಸರಿ ಎನಿಸಿದ್ದು ಎಕ್ಸೈಟ್‌ಮೆಂಟ್ ಆಗಿರುವಂತ ಪಾತ್ರವನ್ನು ಮಾಡುತ್ತೇನೆ. ಪ್ರತಿಯೊಂದು ಪಾತ್ರಕ್ಕೂ ಶ್ರಮ ಹಾಕಬೇಕು, ಅಂತ ಶ್ರಮ ಹಾಕಿದರೆ ಪಾತ್ರಕ್ಕೆ ನ್ಯಾಯ ಸಿಗುತ್ತೆ ಎಂದು ಹೇಳಿದರು.