
ಚಿನ್ನದಂಥ ಹುಡುಗಿಯಲ್ಲ, ಈಕೆ ಚಿನ್ನದ ಕಳ್ಳಿ, 14.8 KG ಚಿನ್ನ ಬಚ್ಚಿಟ್ಟುಕೊಂಡು ತಂದಿದ್ದೆಲ್ಲಿ ?
ಸ್ಯಾಂಡಲ್ವುಡ್ ಬೆಡಗಿ ರನ್ಯಾ ಅದೆಲ್ಲಿ ಮಾಯವಾದರು ಅಂತ ಫ್ಯಾನ್ಸ್ ತಲೆ ಕೆಡಿಕೊಂಡಿದ್ರು. ಆದ್ರೆ ರಾನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಅರೆಸ್ಟ್ ಆಗಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಮಾಣಿಕ್ಯ ಬ್ಯೂಟಿಯ ಚಿನ್ನದ ಬೇಟೆಯ ಕಥೆಯಾದ್ರೂ ಏನು..?
ಸ್ಯಾಂಡಲ್ವುಡ್ ಬೆಡಗಿ, ಚೆಂದುಳ್ಳಿ ಚೆಲುವೆ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾಳೆ. ದುಬೈನಿಂದ ಅಕ್ರಮವಾಗಿ ಚಿನ್ನ ತರ್ತಾ ಇದ್ದ ರನ್ಯಾಳನ್ನ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ರನ್ಯಾ ಬಳಿ ಸಿಕ್ಕಿರೋದು ಭರ್ತಿ 14.8 ಕೆಜಿ ಚಿನ್ನ. ಇದರ ವ್ಯಾಲ್ಯೂ ಬರೊಬ್ಬರ 12 ಕೋಟಿ ರೂಪಾಯಿ.ರನ್ಯಾ ರಾವ್ ಅಂದ ಕೂಡಲೇ ಯಾರೀಕೆ ಅಂತ ಫ್ಯಾನ್ಸ್ ಒಂದ್ ಸಾರಿ ತಲೆ ಕರೆದುಕೊಂಡ್ರೆ ಅದು ಅವರ ತಪ್ಪೇನಲ್ಲ. ಯಾಕಂದ್ರೆ ಈಕೆ ಬಣ್ಣ ಹಚ್ಚಿ ತುಂಬಾನೇ ದಿನಗಳಾಯ್ತು. ಅಸಲಿಗೆ ರಾನ್ಯಾ ಮೊದಲು ನಟನೆ ಮಾಡಿದ್ದು ಕಿಚ್ಚ ಸುದೀಪ್ ನಟನೆ ನಿರ್ದೇಶನದ ಮಾಣಿಕ್ಯ ಸಿನಿಮಾದಲ್ಲಿ.ಮೊದಲ ಸಿನಿಮಾದಲ್ಲೇ ಅಭಿನಯ ಚಕ್ರವರ್ತಿ ಸುದೀಪ್ ಜೊತೆಗೆ ನಟಿಸೋ ಅವಕಾಶ ಪಡೆದ ಈ ಬ್ಯೂಟಿ ಆ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಪಟಾಕಿ ಸಿನಿಮಾದಲ್ಲಿ ನಟನೆ ಮಾಡಿದ್ಳು.