Asianet Suvarna News Asianet Suvarna News

ಮಾನ್ಸೂನ್ ರಾಗದಲ್ಲಿ ಮಿಂದ್ದೆದ್ದ ಡಾಲಿ-ರಚ್ಚು: ಡಿಂಪಲ್ ಕ್ವೀನ್ ಜೊತೆ ಧನಂಜಯ್ ಡಾನ್ಸ್

ಡಾಲಿ ಬೀಯರ್ ಬಾಟೆಲ್ ಬಿಟ್ಟು ಸ್ಯಾಂಡಲ್ವುಡ್ ಕಲರ್ಫುಲ್ ಪದ್ಮಾವತಿ ಜೊತೆ ಡ್ಯೂಯೆಟ್ ಹಾಡುತ್ತಿದ್ದಾರೆ. ಮಾನ್ಸೂನ್ ಮಳೆಯ ಮಧ್ಯೆ ಡಿಂಪಲ್ ಕ್ವೀನ್ ಜೊತೆ ಸೇರಿ ಧನಂಜಯ್ ಕುಣಿಯುತ್ತಾ ಕಳೆದುಹೋಗಿದ್ದಾರೆ. ಮಾನ್ಸೂನ್ ರಾಗ. ಈ ಹೆಸ್ರೇ ಹೇಳುತ್ತೆ ಇದು ಮಳೆಯ ಜೊತೆ ಸೇರಿ ಸಿದ್ಧವಾಗಿರೋ ಮ್ಯೂಸಿಕಲ್ ಸಿನಿಮಾ ಅಂತ. ರಾಜ್ಯಾದ್ಯಂತ ಮಳೆ ಸಿಕ್ಕಾಪಟ್ಟೆ ಜೋರಾಗಿದೆ. ಇದರ ಜೊತೆ ಸ್ಯಾಂಡಲ್ವುಡ್ ಸಿನಿ ಅಂಗಳದಲ್ಲಿ ಮಾನ್ಸೂನ್ ರಾಗದ ಸದ್ದು ಕೂಡ ಹೈ ಲೆವೆಲ್ನಲ್ಲೇ ಇದೆ. 

Aug 11, 2022, 3:42 PM IST

ಸ್ಯಾಂಡಲ್ವುಡ್ನ ಸ್ಪೆಷಲ್ ಆ್ಯಕ್ಟರ್ ಡಾಲಿ ಧನಂಜಯ್ ಅಂದ್ರೆ ಗಂಡ್ ಹೈಕ್ಳಿಗೆ ನೆನಪಾಗೋದು ಟಗರು ಸಿನಿಮಾದಲ್ಲಿ ಬೀಯರ್ ಬಾಟೆಲ್ ಹಿಡಿದುಕೊಳ್ಳೋ ಸ್ಟೈಟೈಲ್.. ಆದ್ರೆ ಈಗ ಡಾಲಿ ಬೀಯರ್ ಬಾಟೆಲ್ ಬಿಟ್ಟು ಸ್ಯಾಂಡಲ್ವುಡ್ ಕಲರ್ಫುಲ್ ಪದ್ಮಾವತಿ ಜೊತೆ ಡ್ಯೂಯೆಟ್ ಹಾಡುತ್ತಿದ್ದಾರೆ. ಮಾನ್ಸೂನ್ ಮಳೆಯ ಮಧ್ಯೆ ಡಿಂಪಲ್ ಕ್ವೀನ್ ಜೊತೆ ಸೇರಿ ಧನಂಜಯ್ ಕುಣಿಯುತ್ತಾ ಕಳೆದುಹೋಗಿದ್ದಾರೆ. ಮಾನ್ಸೂನ್ ರಾಗ. ಈ ಹೆಸ್ರೇ ಹೇಳುತ್ತೆ ಇದು ಮಳೆಯ ಜೊತೆ ಸೇರಿ ಸಿದ್ಧವಾಗಿರೋ ಮ್ಯೂಸಿಕಲ್ ಸಿನಿಮಾ ಅಂತ. ರಾಜ್ಯಾದ್ಯಂತ ಮಳೆ ಸಿಕ್ಕಾಪಟ್ಟೆ ಜೋರಾಗಿದೆ. ಇದರ ಜೊತೆ ಸ್ಯಾಂಡಲ್ವುಡ್ ಸಿನಿ ಅಂಗಳದಲ್ಲಿ ಮಾನ್ಸೂನ್ ರಾಗದ ಸದ್ದು ಕೂಡ ಹೈ ಲೆವೆಲ್ನಲ್ಲೇ ಇದೆ. ಡಾಲಿ ಧನಂಜಯ್, ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ನಟಿಸಿರೋ "ಮಾನ್ಸೂನ್ ರಾಗ" ಸಿನಿಮಾ ಆಗಸ್ಟ್ 19ರಂದು ಬೆಳ್ಳಿತೆರೆ ಮೇಲೆ ಮೂಡಿ ಬರುತ್ತಿದೆ. ಇದೀಗ ಈ ಸಿನಿಮಾದ ಪ್ರಮೋಷನ್ ಹಾಡನ್ನ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡಿದ್ದಾರೆ. ಹೊಸ ತನದ ಕತೆ, ಮೇಕಿಂಗ್, ಮ್ಯೂಸಿಕ್ನಿಂದ ಮೋಡಿ ಮಾಡೋ ಮುನ್ಸೂಚನೆ ಕೊಟ್ಟಿರೋ ಮಾನ್ಸೂನ್ ರಾಗ ಟೀಸರ್, ಟ್ರೈಲರ್ ಈಗಾಗ್ಲೆ ಹಿಟ್ ಆಗಿವೆ. ಅದರಲ್ಲೂ ಯಶ ಶಿವಕುಮಾರ್ ನಟಿಸಿದ್ದ ರಾಘಸುಧಾ ಹಾಡು ಸೂಪರ್ ಹಿಟ್ ಆಗಿತ್ತು. ಇದೇ ಹಾಡನ್ನ ರೀ ಕ್ರಿಯೇಷನ್ ಮಾಡಿ ಮಾನ್ಸೂನ್ ರಾಗ ಚಿತ್ರದ ಕಟೌಟ್ಗಳ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದಾರೆ. ರಾಗ ಸುಧಾ ಹಾಡಿನಲ್ಲಿ ಡಾಲಿ ಮತ್ತು ರಚ್ಚು ಟ್ರೆಡಿಷನಲ್ ಲುಕ್ನಲ್ಲಿ ಮಿಂಚಿದ್ದು ವಿಶೇಷವಾಗಿ ಕಾಣುತ್ತಿತ್ತು.