ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ಮುಂದೆ ಕಣ್ಣೀರಿಟ್ಟ ಪವಿತ್ರಾ ಗೌಡ! ಪಶ್ಚತ್ತಾಪ ಪಟ್ರಾ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ನಟಿ ಪವಿತ್ರಾ ಗೌಡ, ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು ಕಣ್ಣೀರು ಹಾಕಿದ್ದಾರೆ. ಉದ್ಯಮದ ಜೊತೆಗೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಅವರಿಗೆ ಪಶ್ಚಾತ್ತಾಪ ಕಾಡುತ್ತಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕೊಲೆ ಕೇಸಿನ ಎ-1 ಆರೋಪಿ ಆಗಿರುವ ನಟಿ ಪವಿತ್ರಾ ಗೌಡ ಜಾಮೀನು ಪಡೆದು ಹೊರಬಂದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ತನ್ನ ಬೋಟಿಕ್ ಸೌಂದರ್ಯವರ್ಧಕ ಸಂಬಂಧಪಟ್ಟ ಉದ್ಯಮ ಸಂಸ್ಥೆಯನ್ನು ನೋಡಿಕೊಂಡು ತಾಯಿ-ಮಗಳ ಜೊತೆಗೆ ವಾಸ ಮಾಡುತ್ತಿದ್ದಾರೆ. ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಪವಿತ್ರಾ ಗೌಡ ಇತ್ತೀಚೆಗೆ ಮಂತ್ರಾಲಯದ ಗುಡು ರಾಘವೇಂದ್ರ ದೇವಸ್ಥಾನಕ್ಕೆ ತೆರಳಿದ್ದ ವೇಳೆ ರಾಯರ ಎದುರು ಕಣ್ಣೀರು ಹಾಕಿದ್ದಾರೆ. ಹಾಗಾದರೆ ನಟಿ ಪವಿತ್ರಾ ಗೌಡಗೆ ಪಶ್ಚಾತ್ತಾಪ ಕಾಡುತ್ತಿದೆಯಾ ಎಂಬ ಪ್ರಶ್ನೆಗಳು ಕಾಡುತ್ತಿವೆ. 

ದಾಸ ದರ್ಶನ್ ತೂಗುದೀಪನ ಸ್ನೇಹಿತೆ ಪವಿತ್ರಾ ಗೌಡ ಅವರು ಇತ್ತೀಚೆಗೆ ಕೊಲೆ ಪ್ರಕರಣವೊಂದರಲ್ಲಿ ನಟ ದರ್ಶನ್ ಜೊತೆಗೆ ಜೈಲು ಸೇರಿದ್ದಳು. ಇದೀಗ ಎಲ್ಲ ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ನಟ ದರ್ಶನ್ ಹೆಂಡತಿ ಮನೆ ಸೇರಿದರೆ, ಪವಿತ್ರಾಗೌಡ ಮನೆ ಸೇರಿಕೊಂಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲಿಯೇ ನೇರವಾಗಿ ಮನೆ ದೇವರು ವಜ್ರಮುನೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನವನ್ನು ಮಾಡಿದ್ದರು. ದೇವಸ್ಥಾನಕ್ಕೆ ಹೋಗಿಬಂದ ನಂತರ ತನ್ನ ಪ್ಪುಗಳೆಲ್ಲವೂ ತೊಳೆದು ಹೋಯ್ತು ಎಂದು ಮನೆ ಸೇರಿಕೊಂಡಿದ್ದರು.

ಎಂದಿನಂತೆ ತನ್ನ ಉದ್ಯಮ ಸಂಸ್ಥೆ ಬೋಟಿಕ್‌ನ್ನು ಕಳೆದ ಫೆಬ್ರವರಿಯಲ್ಲಿ ಆರಂಭಿಸಿದ ಪವಿತ್ರಾ ಗೌಡ ಉದ್ಯಮದ ನಿಮಿತ್ತ ಹಲವು ನಗರಗಳಿಗೆ ಭೇಟಿಕೊಟ್ಟು ಅಗತ್ಯವಿರುವ ಸಾಮಗ್ರಿ ಖರೀದಿಸಿ ತರುತ್ತಿದ್ದಾರೆ. ಜೊತೆಗೆ, ಉದ್ಯಮದ ನಡುವೆ ಬಿಡುವು ಸಿಕ್ಕಾಗೆಲ್ಲ ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಮುಂದುವರೆಸಿದ್ದಾರೆ. ಈ ಹಿಂದೆ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದೀಗ ಮಂತ್ರಾಲಯದ ಗುರು ರಾಘವೇಂದ್ರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಭಾವನಾತ್ಮಕವಾಗಿರುವುದು ಕೂಡ ಕಾಣಬಹುದು. ಇನ್ನು ದೇವಸ್ಥಾನದಲ್ಲಿ ದೇವರ ಮುಂದೆ ಕುಳಿಇರುವ ಫೋಟೋ ಹಂಚಿಕೊಂಡಿರುವ ಜೊತೆಗೆ ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು.. ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ... ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ರಾಘವೇಂದ್ರ... ಎಂದು ಪೋಸ್ಟ್‌ನಲ್ಲಿ ಹಾಕಿಕೊಂಡಿದ್ದಾರೆ. ಹಾಗಾದರೆ, ಚಿತ್ರದುರ್ಗದ ರೇಣುಕಾಸ್ವಾಮಿ ತನಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಕೊಲೆ ನಡೆದಿದ್ದು, 17 ಜನ ಜೈಲು ಪಾಲಾಗಿದ್ದಾರೆ. ಕೇವಲ ಆತನ ಅಕೌಂಟ್ ಬ್ಲಾಕ್ ಮಾಡಿದ್ದರೆ ಇಷ್ಟೆಲ್ಲಾ ಸಂಕಷ್ಟ ಎದುರಿಸುವುದೇ ಬೇಕಿರಲಿಲ್ಲ ಎಂಬ ಪಶ್ಚಾತ್ತಾಪ ಕಾಡುತ್ತಿದೆಯಾ ಎಂಬುದು ಎಲ್ಲರ ಅನುಮಾನವಾಗಿದೆ... 

Related Video