ನಿಧಿ ಸುಬ್ಬಯ್ಯ: ಪಂಚರಂಗಿ ಬ್ಯೂಟಿಯಿಂದ ಫಿಟ್ನೆಸ್ ಫ್ರೀಕ್ ಆಗಿ!
ಒಮ್ಮೆ ಪಡ್ಡೆ ಹುಡುಗರ ನೆಚ್ಚಿನ ನಟಿಯಾಗಿದ್ದ ನಿಧಿ ಸುಬ್ಬಯ್ಯ, ಎರಡು ವರ್ಷಗಳ ಕಾಲ ಸೈಲೆಂಟ್ ಆಗಿದ್ದರು. ಈಗ ಫಿಟ್ನೆಸ್ ಫ್ರೀಕ್ ಆಗಿ ಹೊಸ ಲುಕ್ನಲ್ಲಿ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಉಪ್ಪಿಯ ಯುಐ ಸಿನಿಮಾದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ.
ನಿಧಿ ಸುಬ್ಬಯ್ಯ. ಪಟ ಪಟ ಅಂತ ಪ್ರೀತಿಯ ಮಾತುಗಳನ್ನಾಡುತ್ತಾ ಹುಡುಗರ ಹಾರ್ಟ್ನಲ್ಲಿ ಗುಡಿ ಕಟ್ಟಿದ್ದ ಸುರ ಸುಂದರಿ. ಯೋಗರಾಜ್ ಭಟ್ಟರ ಪಂಚರಂಗಿ ಸಿನಿಮಾದಲ್ಲಿ ಸದ್ದು ಮಾಡಿ ಪಡ್ಡೆ ಹುಡುಗರ ಫೇವರಿಟ್ ಆಗಿದ್ದ ನಿಧಿ, ಓ ಮೈ ಗಾಡ್ ಅನ್ನೋ ಹಾಗೆ ನಟಿಸುತ್ತಿದ್ರು.
ಚೆಲುವಾಂತ ಚೆಲುವೆ ನಿಧಿ ಕ್ಯೂಟ್ ಸ್ಮೈಲ್ ಗಂಡ್ ಹೈಕ್ಳ ಫೇವರಿಟ್. ಕನ್ನಡ, ತೆಲುಗು ಹಿಂದಿ ಸಿನಿ ರಂಗವನ್ನ ಸುತ್ತುತ್ತಿರೋ ನಿಧಿ ಸುಬ್ಬಯ್ಯ ಎರಡ್ಮೂರು ವರ್ಷದಿಂದ ಸ್ವಲ್ಪ ಸೈಲೆಂಟ್ ಆಗಿದ್ರು. ಸಿನಿ ರಂಗದಲ್ಲಿ 15 ವರ್ಷ ಪೂರೈಸಿರೋ ನಿಧಿ ಫಿಟ್ನೆಸ್ ಫ್ರೀಕ್. ಕಳೆದ ಎರಡು ವರ್ಷದಿಂದ ಕೂರ್ಗ್ ಸೇರಿದ್ದ ನಿಧಿಗೆ ಹುಡುಕಿದವರು ಹಲವು ಮಂದಿ. ಹಾಗಂತ ಈ ಪಂಚರಂಗಿ ಬ್ಯೂಟಿ ಸುಮ್ಮನೆ ಕೂತೀರಲಿಲ್ಲ. ಜಿಮ್ನಲ್ಲಿ ಬೆವರು ಹರಿಸ್ತಾ ಕಮ್ ಬ್ಯಾಕ್ ಆಗೋಕೆ ಸಖತ್ ಆಗಿರೋ ಫಿಟ್ನೆಟ್ ಮಾಡಿದ್ರು. ಈಗ ನಿಧಿಗೆ ಜಿಮ್ ಅನ್ನೋದು ಡೈಲಿ ರೊಟೀನ್ ಆಗಿದೆ.
ನಿಧಿ ಸುಬ್ಬಯ್ಯ ಈಗ ಹಾಟ್ ಹೀರೋಯಿನ್ ಆಗಿದ್ದಾರೆ. ಉಪ್ಪಿಯ ಯುಐನಲ್ಲಿ ಸಖತ್ ಆಗೇ ಎಂಟ್ರಿ ಕೊಡೋ ನಿಧಿ ಮತ್ತೊಂದು ಇನ್ಸಿಂಗ್ ಶುರು ಮಾಡಿದ್ದಾರೆ. ನಿಧಿಯ ನ್ಯೂ ಲುಕ್ ಹಿಂದೆ ಈಕೆಯ ವರ್ಕೌಟ್ ತಾಕತ್ತೇ ಕಾರಣ.