ಓಟಿಟಿ ವೇದಿಕೆಗೆ ಬಂದ ಹರಿಪ್ರಿಯಾ ನಟನೆಯ ʼಕಸ್ತೂರ್ ಗಾಂಧಿʼ ಸಿನಿಮಾ!
ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಅವರು ಸರ್ಜರಿಗೆ ಒಳಗಾಗಿದ್ದಾರೆ. ಎಂಪುರಾನ್ ಸಿನಿಮಾವು ದಾಖಲೆಯ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿದೆ. ಎಂಪುರಾನ್ ಅಬ್ಬರದ ಎದುರು ಉಳಿದ ಚಿತ್ರಗಳು ಡಲ್ ಆಗಿವೆ. ಓಟಿಟಿ ವೇದಿಕೆಯಲ್ಲಿ ಹರಿಪ್ರಿಯಾ ನಟನೆಯ ಕಸ್ತೂರ್ ಗಾಂಧಿ ಸಿನಿಮಾ ತೆರೆ ಕಾಣಲಿದೆ.
ಈಗ ತಾನೇ ಶಿವರಾಜ್‌ಕುಮಾರ್ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಹಿಂತಿರುಗಿದ್ದಾರೆ. ಆದ್ರೆ ಈಗ ಪತ್ನಿ ಗೀತಾ ಶಿವರಾಜ್‌ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಗೀತಾ ಶಿವರಾಜ್‌ಕುಮಾರ್ ಅವರಿಗೆ ಕಳೆದ ಕೆಲವು ದಿನಗಳಿಂದ ಕತ್ತಿನ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಂಬಂಧ ವೈದ್ಯರು ಅವರಿಗೆ ಕತ್ತಿನ ಭಾಗದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ಮೋಹನ್ ಲಾಲ್ ಪೃಥ್ವಿರಾಜ್ ಸುಕುಮಾರನ್ ನಟನೆಯ ಎಂಪುರಾನ್ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಅಡ್ವಾನ್ಸ್ ಬುಕ್ಕಿಂಗ್ನಿಂದಲೇ 60 ಕೋಟಿ ಗಳಿಸಿರೋ ಈ ಸಿನಿಮಾ ಈ ವಾರ ರಿಲೀಸ್ ಆಗ್ತಾ ಇರೋ ಎಲ್ಲಾ ಭಾಷೆಯ ಸಿನಿಮಾಗಳಿಗೆ ಟಕ್ಕರ್ ಕೊಟ್ಟಿದೆ. ಲೂಸಿಫರ್ ಸಿನಿಮಾದ ಸೀಕ್ವೆಲ್ ಆಗಿರೋ ಎಂಪುರಾನ್ ದೇಶಾದ್ಯಂತ ದಾಖಲೆ ಸ್ಕ್ರೀನ್ಗಳಲ್ಲಿ ತೆರೆಕಾಣ್ತಾ ಇದೆ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಜನಮಿತ್ರ ಮೂವೀಸ್ ನಿರ್ಮಾಣದ ತಾಯಿ ಕಸ್ತೂರ್ ಗಾಂಧಿ’ ಕನ್ನಡ ಚಿತ್ರವು ಇದೇ ಮಾರ್ಚ್ 28ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಬರಗೂರರ ಕಾದಂಬರಿಯನ್ನು ಆಧರಿಸಿ ಈ ಚಿತ್ರವು ನಿರ್ಮಾಣಗೊಂಡಿರೋ ಈ ಚಿತ್ರ ಹಲವು ದೇಶ-ವಿದೇಶದ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ. ನಟಿ ಹರಿಪ್ರಿಯಾ ಇದರಲ್ಲಿ ಕಸ್ತೂರ್ ಬಾ ಪಾತ್ರವನ್ನು ಮಾಡಿದ್ದಾರೆ.