Haripriya Marriage: ಹರಿಪ್ರಿಯಾ ಕೈ ಹಿಡಿಯಲಿರುವ ವಸಿಷ್ಠ ಸಿಂಹ?

ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆ ಆಗಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೆ ಆ ವಿಡಿಯೋ.

Share this Video
  • FB
  • Linkdin
  • Whatsapp

ಹರಿಪ್ರಿಯಾ ಇತ್ತೀಚೆಗಷ್ಟೆ ತಮ್ಮ ಮೂಗಿಗೆ ಮೂಗುತಿ ಚುಚ್ಚಿಸಿಕೊಂಡಿದ್ರು. ಈ ವಿಡಿಯೋದಲ್ಲಿ ಹರಿಪ್ರಿಯಾ ಮದುವೆ ಆಗೋ ಹುಡುಗನ ಸುಳಿವು ಇದೆ ಅಂತ ಗಾಂಧಿನಗರದಲ್ಲಿ ಟಾಕ್ ಶುರುವಾಗಿದೆ. ವಿಡಿಯೋವನ್ನು ಸೂಕ್ಷವಾಗಿ ಗಮನಿಸಿದ್ರೆ ಆ ಸುಳಿವು ಗೊತ್ತಾಗುತ್ತೆ. ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವಾಗ ಮೂಗುತಿ ಎಲ್ಲಿರಬೇಕು ಅಂತ ಪಕ್ಕದಲ್ಲಿರೋ ಹುಡುಗನೊಬ್ಬ ಮಾರ್ಕ್ ಮಾಡಿ ತೋರಿಸ್ತಾರೆ. ಅಷ್ಟೆ ಅಲ್ಲ ಹರಿಪ್ರಿಯಾ ಮೂಗು ಚುಚ್ಚಿದ ಬಳಿಕ ನೋವಿನಿಂದ ಅಳುತ್ತಾರೆ. ಆಗ ಪಕ್ಕದಲ್ಲೇ ಇದ್ದ ಹುಡುಗ ಹರಿಪ್ರಿಯಾರನ್ನು ಅಪ್ಪಿಕೊಂಡು ಹಣೆಗೆ ಮುತ್ತಿಡುತ್ತಾರೆ. ಸಮಾಧಾನ ಮಾಡುತ್ತಾರೆ. ಆ ಹುಡುಗ ಯಾರು ಅಂತ ಸೂಕ್ಷ್ಮವಾಗಿ ಗಮನಿಸಿದ್ರೆ ಅಲ್ಲಿ ಕಾಣಿಸೋದು ಕಂಚಿನ ಕಂಠದ ನಟ ಸ್ಯಾಂಡಲ್ ವುಡ್ ಚಿಟ್ಟೆ ವಸಿಷ್ಠ ಸಿಂಹ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ನಿಶ್ಚಿತಾರ್ಥ ಶೀಘ್ರದಲ್ಲೇ ನಡೆಯಲಿದೆ ಹಾಗೂ ಅದರ ಸಲುವಾಗಿ ಈಗಾಗಲೇ ಇಬ್ಬರೂ ಶಾಪಿಂಗ್ ಕೂಡ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಈ ಗಾಸಿಪ್ ಬಗ್ಗೆ ಇಬ್ಬರು ಅಧಿಕೃತವಾಗಿ ಮಾಹಿತಿ ನೀಡಿಲ್ಲ.

Super Queen: ಗಾಯಕಿ ರೆಮೋ ಬದುಕಲ್ಲಿ ಬಿರುಗಾಳಿ, ಪುಟ್ಟ ಮಗಳೊಂದಿಗೆ ...

Related Video