Asianet Suvarna News Asianet Suvarna News

Super Queen: ಗಾಯಕಿ ರೆಮೋ ಬದುಕಲ್ಲಿ ಬಿರುಗಾಳಿ, ಪುಟ್ಟ ಮಗಳೊಂದಿಗೆ ಮನೆ ಬಿಟ್ಟು ಬಂದಿದ್ದ ಮಜಾ ಟಾಕೀಸ್‌ ಸಿಂಗರ್‌!

ಗಾಯಕಿ ರೆಮೋ ಅಂದಾಕ್ಷಣ ಹೆಚ್ಚಿನವರ ಮುಖದಲ್ಲಿ ಕಿರು ನಗೆ ಮೂಡುತ್ತೆ. ಮಜಾ ಟಾಕೀಸ್‌ ನಲ್ಲಿ ಅವರ ಹಾಡು, ನಗೆ ಬಾಂಬ್ ನೋಡಿ ತಮ್ಮ ನೋವು ಮರೆತವರೆಷ್ಟೋ. ಆದರೆ ನಗುವ ರೆಮೋ ಹಿಂದೆ ದೊಡ್ಡ ನೋವಿನ ಕಥೆ ಇದೆ.

Singer Rekhs Mohan life story
Author
First Published Nov 28, 2022, 1:21 PM IST

ರೆಮೋ! ಈ ಹೆಸರಿಂದಲೇ ಫೇಮಸ್ ಗಾಯಕಿ ರೇಖಾ ಮೋಹನ್‌. ರೆಮೋ ಅಂದರೆ ತಕ್ಷಣ ನೆನಪಾಗೋದು ಮಜಾ ಟಾಕೀಸ್‌. ಸ್ಟೇಜ್‌ ಮೇಲೆ ಸೃಜನ್‌ ಲೋಕೇಶ್ ಒಂದಾದ ಮೇಲೊಂದರಂತೆ ನಗೆ ಬಾಂಬ್ ಸಿಡಿಸುತ್ತಿದ್ದರೆ ಈ ಹೆಣ್ಣುಮಗಳು ಹಿಂದಿನಿಂದಲೇ ಸೈಲೆಂಟಾಗಿ ಬಾಂಬ್ ಹಾಕಿ ನಗಿಸ್ತಾರೆ. ಸೃಜನ್ ಇವರ ಕಾಲೆಳೆಯೋದು, ಈಕೆ ಟಕ್ಕಂತ ಉತ್ತರ ಕೊಡೋದು, ಆ ಟೈಮಿಂಗ್ ಎಲ್ಲ ನೋಡೋದಕ್ಕೆ ಸಖತ್ ಮಜಾ. ಇದಕ್ಕೂ ಮೊದಲು ಸಾಕಷ್ಟು ಕಾರ್ಯಕ್ರಮಗಳಲ್ಲಿ ಆರ್ಕೆಸ್ಟ್ರಾಗಳಲ್ಲಿ ಹಾಡಿದ್ದರೂ ಅವರ ಪ್ರತಿಭೆ ಮುನ್ನೆಲೆಗೆ ಬಂದಿದ್ದು ಮಜಾ ಟಾಕೀಸ್ ಮೂಲಕ. ಈ ಗಾಯಕಿ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೂಪರ್ ಕ್ವೀನ್' ಅನ್ನೋ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಬಹಳ ಕಷ್ಟದಿಂದ ಮೇಲೆ ಬಂದು ಬದುಕು ಕಟ್ಟಿಕೊಂಡವರ ರಿಯಾಲಿಟಿ ಶೋ ಈ 'ಸೂಪರ್ ಕ್ವೀನ್'. ಇದರಲ್ಲಿ ವಿವಿಧ ಕ್ಷೇತ್ರಗಳ ಸಾಧಕಿಯರು ಇದ್ದಾರೆ. ಅವರ ಬದುಕಿನ ಸಮೀಪ ದರ್ಶನವೂ ಇದೆ. ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡದಲ್ಲಿ ಈ ರಿಯಾಲಿಟಿ ಶೋ ಪ್ರಸಾರವಾಗುತ್ತೆ.

ಮಜಾ ಟಾಕೀಸ್‌ನಲ್ಲಿ ಸದಾ ನಗಿಸುವ ರೆಮೋ ಅನ್ನೋ ಸ್ಟ್ರಾಂಗ್ ಲೇಡಿ ಲೈಫಿನ ಕಥೆ ಈ ಬಾರಿಯ ಎಪಿಸೋಡ್‌ಗಳಲ್ಲಿ ಪ್ರಸಾರವಾಗಿದೆ. ಅವರ ಬದುಕಿನ ಕಥೆ ಕೇಳಿದ ವೀಕ್ಷಕರು ಇಷ್ಟೊಂದು ನೋವನ್ನು ಮನಸ್ಸಲ್ಲಿ ಮುಚ್ಚಿಟ್ಟು ಈಕೆ ಅದ್ಹೇಗೆ ನಗಿಸ್ತಾರೆ ಅಂತ ಅಚ್ಚರಿ ಪಟ್ಟಿದ್ದಾರೆ. ಚಿಕ್ಕ ವಯಸ್ಸಿಂದಲೂ ರೆಮೋ ಸಖತ್ ಸ್ಟ್ರಾಂಗ್. ಅವರು ತೊಟ್ಕೊಳ್ಳೋ ಡ್ರೆಸ್, ಅವರ ಸ್ಟೈಲ್ ನೋಡಿದ್ರೆ ಈಕೆ ಸಖತ್ ಡ್ಯಾಶಿಂಗ್ ಲೇಡಿ ಅನ್ನೋದು ಗೊತ್ತಾಗುತ್ತೆ. ನಮ್ಮ ಬಟ್ಟೆ, ಅಪಿಯರೆನ್ಸ್ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತೆ ಅಂತಾರಲ್ವಾ, ಹಾಗೆ ರೆಮೊ ಅವರ ಉಡುಪು, ಅವರ ಗೆಟಪ್ ಅವರ ವ್ಯಕ್ತಿತ್ವ ಎಂಥದ್ದು ಅನ್ನೋದನ್ನು ತೋರಿಸುತ್ತೆ. ಅವರು ಈ ರೀತಿ ಇರುವುದು ಈಗ ಅಲ್ಲ. ಅವರು ಚಿಕ್ಕವರಿಂದಗಲೂ ಇದೇ ರೀತಿ ಇರೋದು. ಅಪ್ಪ, ಅಮ್ಮ, ಅಣ್ಣ, ಇವರು. ಇವರದ್ದು ಚಿಕ್ಕ ಕುಟುಂಬ. ಸಂತೋಷವಾಗಿದ್ರು. ಆದ್ರೆ ಇವರ ಪ್ರೀತಿ ಎಲ್ಲವನ್ನೂ ಬದಲಾಯಿಸಿತು.

ವಿವಾದದ ಬೆನ್ನಲೆ ಹೊಸ ಟ್ಯಾಟೂ ಹಾಕಿಸಿಕೊಂಡ ವೈಷ್ಣವಿ ಗೌಡ; ಅರ್ಥ ಏನು ಗೊತ್ತಾ?

ಹೌದು ರೆಮೋ ಮದುವೆ ಆದದ್ದು ತನಗಿಂತ 13 ವರ್ಷ ದೊಡ್ಡವರನ್ನು. ಆಗ ರೆಮೊ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದರು. ಅಲ್ಲಿ ಪರಿಚಯವಾಗಿ, ಸ್ನೇಹಿತರಾಗಿ ಮನಸ್ಸಿನೊಳಗೂ ಬಂದ ವ್ಯಕ್ತಿಯನ್ನೇ ಇವರು ಮದುವೆ ಆಗಲು ನಿರ್ಧರಿಸುತ್ತಾರೆ. ಮನೆಯವರಿಗೆ ಮಗಳ ಈ ನಿರ್ಧಾರ ಇಷ್ಟವಾಗೋದಿಲ್ಲ. ಆದರೆ ಪ್ರೀತಿ ಸಖತ್ ಸ್ಟ್ರಾಂಗ್. ಮನೆಯವರ ವಿರೋಧ ಕಟ್ಟಿಕೊಂಡು ಅವರನ್ನು ಮದುವೆ ಆಗ್ತಾರೆ.

ಹಲವು ಕನಸುಗಳೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ ರೆಮೋಗೆ ಪತಿಯ ಮನೆ ಹೂವಿನ ಹಾಸಿಗೆ ಆಗಿರಲಿಲ್ಲ. ಅಂದುಕೊಂಡಂತೆ ಪ್ರೀತಿ(Love) ಸಿಗಲಿಲ್ಲ. ಅವರನ್ನು ಮನೆಯಲ್ಲಿ ಮೂಲೆ ಗುಂಪು ಮಾಡಿಬಿಟ್ಟಾಗ ಆದ ನೋವು(Pain) ದೊಡ್ಡದು. ಬಹಳ ಕಾಲ ವಿಧಿಯಿಲ್ಲದೇ ಅದೇ ಬದುಕನ್ನು ಬದುಕುತ್ತಿದ್ದವರಿಗೆ ಒಂದಿನ ಇದೆಲ್ಲ ಸಾಕು ಅನಿಸತೊಡಗಿತು. ಮೈ ಕೊಡವಿ ಎದ್ದರು. 5 ವರ್ಷದ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಬಂದರು.

Niveditha Gowda: ಗಂಡನ ದುಡ್ಡು ಖರ್ಚು ಮಾಡೋಳು ನೀನು: ನೆಟ್ಟಿಗರಿಗೆ ಟಾಂಗ್‌ ಕೊಟ್ಟ ನಿವಿ

ಆಗ ಕೈಯಲ್ಲಿ ಒಂದು ರೂಪಾಯಿಯೂ ಇಲ್ಲ. ಮಗಳ ಜೊತೆಗೆ ತನ್ನ ಬದುಕೂ ನಡೆಯಬೇಕು. ಛಲಗಾರ್ತಿ ಹೆಣ್ಣುಮಗಳು ಹಗಲು ರಾತ್ರಿ ಎನ್ನದೇ ಹಾಡು ಹೇಳಿ ಜೀವನ(Life) ಕಟ್ಟಿಕೊಳ್ತಾರೆ. ರಾತ್ರಿ ಮಗಳನ್ನು ಮಲಗಿಸಿ ತಾನು ಮಲಗುವಾಗ ತನ್ನ ಬದುಕನ್ನು ನೆನೆದು ಕಣ್ಣೀರು(Tears) ಬರುತ್ತಿತ್ತು. ಸದ್ದಿಲ್ಲದೇ ಅಳುತ್ತಾ ಮರುದಿನ ಎಂದಿನಂತೆ ಎದ್ದು ಹಾಡಲು ಹೋಗುತ್ತಿದ್ದರು. ತಾನೀಗ ಬದುಕಿರುವುದೇ ಮಗಳಿಗಾಗಿ. ಮಗಳ ಜೀವನ ಚೆನ್ನಾಗಿರಬೇಕು ಎಂದು ಭಾವುಕರಾಗ್ತಾರೆ ಈ ಗಾಯಕಿ.

ಜೀ ಕನ್ನಡದ ಸೂಪರ್ ಕ್ವೀನ್ ಕಾರ್ಯಕ್ರಮ ವಿಭಿನ್ನವಾಗಿದೆ. ನಟ ವಿಜಯ ರಾಘವೇಂದ್ರ, ನಟಿ ರಚಿತ್ ರಾಮ್ ಜಡ್ಜ್ ಗಳಾಗಿ ಇದ್ದಾರೆ. ಕುರಿ ಪ್ರತಾಪ್, ಶ್ವೇತಾ ಚೆಂಗಪ್ಪ ನಿರೂಪಕರು. ಗಟ್ಟಿಗಿತ್ತಿ ಹೆಣ್ಣುಮಕ್ಕಳನ್ನು ಜಗತ್ತಿಗೆ ಪರಿಚಯಿಸಿ ಸ್ಫೂರ್ತಿ ನೀಡೋದು ಈ ಕಾರ್ಯಕ್ರಮದ ಉದ್ದೇಶ.

Follow Us:
Download App:
  • android
  • ios