ನೋರಾ ಫತೇಹಿ ಜೊತೆ ಆರ್ಯನ್ ಖಾನ್ ಡಿಂಗ್ ಡಾಂಗ್: 30ರ ಚೆಲುವೆ ಜೊತೆ 25ರ ಶಾರುಖ್​ ಪುತ್ರನ ಡೇಟಿಂಗ್?

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರ ಆರ್ಯನ್ ಮತ್ತು ನೋರಾ ಫತೇಹಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

First Published Jan 6, 2023, 3:28 PM IST | Last Updated Jan 6, 2023, 3:28 PM IST

ಬಾಲಿವುಡ್'ನಲ್ಲಿ ಇದೀಗ ಆರ್ಯನ್ ಖಾನ್ ಡೇಟಿಂಗ್ ವಿಚಾರದ್ದೇ ಸದ್ದು. ಶಾರುಖ್ ಪುತ್ರ ಆರ್ಯನ್ ಖಾನ್, ಬಾಲಿವುಡ್ ಖ್ಯಾತ ನಟಿ ಹೋಂ ಡಾನ್ಸರ್ ನೋರಾ ಫತೇಹಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಬ್ಬರ ಡೇಟಿಂಗ್ ವಿಚಾರ ಈ ಪರಿ ಸದ್ದು ಮಾಡಲು ಕಾರಣ, ಇತ್ತೀಚಿಗಷ್ಟೆ ವೈರಲ್ ಆಗಿದ್ದ ಇಬ್ಬರ ಫೋಟೋ. ಆರ್ಯನ್ ಖಾನ್ ದುಬೈನಲ್ಲಿ ಹೊಸ ವರ್ಷ ಆಚರಿಸಿದ್ದು, ಸಹೋದರಿ ಸುಹಾನಾ ಖಾನ್, ಕರಣ್ ಜೋಹರ್ ಕೂಡ ಜೊತೆಯಲ್ಲಿದ್ದರು. ಆದರೆ ನೋರಾ ಕೂಡ ದುಬೈನಲ್ಲಿ ಇದ್ದಾರೆ. ನೋರಾ ಮತ್ತು ಆರ್ಯನ್ ಇಬ್ಬರ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಲ್ಲದೆ ಇಬ್ಬರ ನಡುವೆ ಡೇಟಿಂಗ್ ವದಂತಿ ಸೃಷ್ಟಿಸಿದೆ.

ಬೆಂಗಳೂರಿನಲ್ಲಿ ನೀಚ ಕೃತ್ಯ: ಸ್ನಾನ ಮಾಡದೇ ದೇವಸ್ಥಾನಕ್ಕೆ ಬಂದಳೆಂದು ಮ ...