
Deepa Sannidhi: ತೆರೆಯಿಂದ ಮರೆಯಾಗಿದ್ದ ದೀಪಾ ಸನ್ನಿಧಿ ಮತ್ತೆ ಪ್ರತ್ಯಕ್ಷ! 8 ವರ್ಷಗಳ ನಂತರ ಮತ್ತೆ ನಟಿ ಆ್ಯಕ್ಟಿವ್
ದೀಪಾ ಸನ್ನಿಧಿ ಈ ಹೆಸರು ಹೇಳ್ತಾನೆ ಕನ್ನಡ ಸಿನಿ ಪ್ರಿಯರ ಕಣ್ಮುಂದೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳು ಬರುತ್ವೆ. ಚಿಕ್ಕಮಗಳೂರಿನ ಈ ಚಿಕ್ಕಮಲ್ಲಿಗೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದು ದರ್ಶನ್ ನಟನೆಯ ಸಾರಥಿ ಸಿನಿಮಾ ಮೂಲಕ.
ಮೊದಲ ಚಿತ್ರವೇ ಇಂಡಸ್ಟ್ರಿ ಹಿಟ್. ಇದು ತೆರೆಗೆ ಬರುವ ಮುನ್ನವೇ ಪವರ್ ಸ್ಟಾರ್ ಪುನೀತ್ ಜೊತೆಗೆ ಪರಮಾತ್ಮ ಚಿತ್ರದಲ್ಲಿ ನಟಿಸೋ ಚಾನ್ಸ್. ಸೋ ದೀಪಾ ಸನ್ನಿಧಿನ ಎಲ್ಲರೂ ಲಕ್ಕಿ ಕ್ವೀನ್ ಅಂತ ಕರೆದಿದ್ರು. ಈಕೆಯ ಅದೃಷ್ಟವನ್ನ ಭಲೇ ಅದೃಷ್ಟವೋ ಅದೃಷ್ಟ ಅಂತ ಕೊಂಡಾಡಿದ್ರು. ದರ್ಶನ್, ಪುನೀತ್, ಯಶ್ ರಂಥಾ ಬಿಗ್ ಸ್ಟಾರ್ಸ್ ಜೊತೆಗೆ ಮಿಂಚಿದ್ದ ಈ ಬ್ಯೂಟಿ ಅದ್ಯಾಕೋ ಸಡನ್ ಆಗಿ ಕಾಣೆಯಾಗೋದ್ರು. 2017ರಲ್ಲಿ ಬಂದ ಚಕ್ರವರ್ತಿ ಸಿನಿಮಾ ದೀಪಾ ನಟಿಸಿದ ಕೊನೆಯ ಸಿನಿಮಾ ಅಲ್ಲಿಂದ ಇಲ್ಲಿವರೆಗೂ ದೀಪಾ ಸನ್ನಿಧಿ ಒಂದೇ ಒಂದು ಚಿತ್ರದಲ್ಲಿ ನಟಿಸಿಲ್ಲ. ಅಚ್ಚರಿ ಅಂದ್ರೆ ದೀಪಾ ಸನ್ನಿಧಿ ಸೋಷಿಯಲ್ ಮಿಡಿಯಾದಿಂದ ಕೂಡ ದೂರವೇ ಉಳಿದಿದ್ರು. ಇದೀಗ ದಿಢೀರ್ ಅಂತ ಸೋಷಿಯಲ್ ಮಿಡಿಯಾದಲ್ಲಿ ದೀಪಾ ಌಕ್ಟಿವ್ ಆಗಿದ್ದಾರೆ.