ದಾಂಪತ್ಯ ಜೀವನಕ್ಕೆ ಆಶಿಕಾ ರಂಗನಾಥ್ ಅಕ್ಕ ಅನುಷಾ: ಹುಡುಗ ಯಾರು ಗೊತ್ತಾ?

ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ಅವರ ಸಹೋದರಿ ಅನುಷಾ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ರವಣ್ ಜೊತೆ ಅನುಷಾ ರಂಗನಾಥ್ ಮದುವೆಯಾಗಿದ್ದಾರೆ. 'ಗೋಕುಲದಲ್ಲಿ ಸೀತೆ' ಸೀರಿಯಲ್ ಖ್ಯಾತಿಯ ನಟಿ ಅನುಷಾ ರಂಗನಾಥ್ ಖಾಸಗಿ ರೆಸಾರ್ಟ್‌ವೊಂದರಲ್ಲಿ ಶ್ರವಣ್ ಜೊತೆ ಮದುವೆ ಆಗಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ಅವರ ಸಹೋದರಿ ಅನುಷಾ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ರವಣ್ ಜೊತೆ ಅನುಷಾ ರಂಗನಾಥ್ ಮದುವೆಯಾಗಿದ್ದಾರೆ. 'ಗೋಕುಲದಲ್ಲಿ ಸೀತೆ' ಸೀರಿಯಲ್ ಖ್ಯಾತಿಯ ನಟಿ ಅನುಷಾ ರಂಗನಾಥ್ ಖಾಸಗಿ ರೆಸಾರ್ಟ್‌ವೊಂದರಲ್ಲಿ ಶ್ರವಣ್ ಜೊತೆ ಮದುವೆ ಆಗಿದ್ದಾರೆ. ಖಾಸಗಿ ರೆಸಾರ್ಟ್‌ವೊಂದರಲ್ಲಿ (ಜ.22) ಅನುಷಾ- ಶ್ರವಣ್ ಮದುವೆ ಅದ್ಧೂರಿಯಾಗಿ ನಡೆದಿದೆ. ವರ ಶ್ರವಣ್ ಹಿನ್ನೆಲೆ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. ಆಶಿಕಾ ಸಹೋದರಿ ಅನುಷಾ ಮದುವೆಯಲ್ಲಿ 'ದಿಯಾ' ಖ್ಯಾತಿಯ ಖುಷಿ ರವಿ, ಸಿರಿ, ತಪಸ್ವಿನಿ ಪೂಣಚ್ಚ, 'ಲವ್‌ ಮಾಕ್ಟೈಲ್‌ 2' ನಟಿ ಸುಶ್ಮಿತಾ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕಳೆದ ವಾರ ಅನುಷಾ ಅವರ ಬ್ರೈಡಲ್ ಪಾರ್ಟಿ ಗ್ರ್ಯಾಂಡ್ ಆಗಿ ನೆರವೇರಿತ್ತು. 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ', '10', 'ಕೌರವ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಷಾ ನಟಿಸಿದ್ದಾರೆ. ಆದರೆ ಚುಟು ಚುಟು ಬೆಡಗಿ ಆಶಿಕಾರಂತೆ ಅನುಷಾಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗಲಿಲ್ಲ. ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ಅನುಷಾಗೆ ಫ್ಯಾನ್ಸ್‌ ಶುಭಕೋರುತ್ತಿದ್ದಾರೆ.

Related Video