ಅಮ್ಮನಿಗಾಗಿ ದೇಗುಲ ನಿರ್ಮಿಸಿ ಲೋಕಾರ್ಪಣೆ ಮಾಡಿಸಿದ ನಟ ವಿನೋದ್ ರಾಜ್

ಕಳೆದ ವರ್ಷ ಡಿಸೆಂಬರ್​ನಲ್ಲಿ ಹಿರಿಯ ನಟಿ ಲೀಲಾವತಿ ನಮ್ಮನ್ನಗಲಿದ್ರು. ಇದೀಗ ಸೋಲದೇವನಹಳ್ಳಿ ತೋಟದಲ್ಲಿ ಲೀಲಾವತಿಯ ಸ್ಮಾರಕ ನಿರ್ಮಾಣಗೊಂಡಿದ್ದು, ಅದರ ಉದ್ಘಾಟನೆ ನೆರವೇರಿದೆ.

Share this Video
  • FB
  • Linkdin
  • Whatsapp

ಕಳೆದ ವರ್ಷ ಡಿಸೆಂಬರ್​ನಲ್ಲಿ ಹಿರಿಯ ನಟಿ ಲೀಲಾವತಿ ನಮ್ಮನ್ನಗಲಿದ್ರು. ಇದೀಗ ಸೋಲದೇವನಹಳ್ಳಿ ತೋಟದಲ್ಲಿ ಲೀಲಾವತಿಯ ಸ್ಮಾರಕ ನಿರ್ಮಾಣಗೊಂಡಿದ್ದು, ಅದರ ಉದ್ಘಾಟನೆ ನೆರವೇರಿದೆ. ಪ್ರೀತಿಯ ಅಮ್ಮನಿಗಾಗಿ ವಿನೋದ್ ರಾಜ್ ಸ್ಮಾರಕವನ್ನ ಕಟ್ಟಿದ್ದು ಅದಕ್ಕೆ 'ವರನಟಿ ಲೀಲಾವತಿ ದೇಗುಲ' ಅಂತ ಹೆಸರಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ ಹೋಮ, ಹವನ ಮೂಲಕ ಪೂಜೆ ನೆರವೇರಿದೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹಾಗೂ ನೆಲಮಂಗಲ ಶಾಸಕ ಎಸ್. ಶ್ರೀನಿವಾಸ್ ಸ್ಮಾರಕವನ್ನ ಉದ್ಘಾಟನೆ ಮಾಡಿದ್ದು, ಅಭಿಮಾನಿಗಳ ಭೇಟಿಗೆ ಮುಕ್ತಗೊಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

Related Video