ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಪೆಟ್ಟು: 'ಬಘೀರ'ನಿಗೆ ಬೇಕು ಮೂರು ತಿಂಗಳು ರೆಸ್ಟ್

ರೋರಿಂಗ್ ಸ್ಟಾರ್ ನಟ  ಶ್ರೀಮುರಳಿ ಅವರ ಕಾಲಿಗೆ ಪೆಟ್ಟಾಗಿದ್ದು, ಬಘೀರ ಸಿನಿಮಾದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ.

Share this Video
  • FB
  • Linkdin
  • Whatsapp

'ಬಘೀರ' ಸಿನಿಮಾದ ಶೂಟಿಂಗ್ ನಡೆಯುವ ವೇಳೆ ಶ್ರೀ ಮುರಳಿ ಬಿದ್ದು ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊಣಕಾಲಿಗೆ ತೀವ್ರ ಗಾಯವಾಗಿದ್ದು, ಸರ್ಜರಿ ಮಾಡಲಾಗಿದೆ. ಬಘೀರ' ಸಿನಿಮಾದ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿತ್ತು. ಇನ್ನು ಎರಡು ದಿನ ಶೂಟಿಂಗ್ ನಡೆದಿದ್ದರೆ, ಇಡೀ ಸಿನಿಮಾದ ಶೂಟಿಂಗ್ ಮುಗಿದೇ ಹೋಗುತ್ತಿತ್ತು. ಅಷ್ಟರಲ್ಲೇ ಈ ಅನಾಹುತ ನಡೆದಿದೆ ಎನ್ನಲಾಗಿದೆ. ಮೂರು ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಯಾವುದೇ ಆಕ್ಷನ್ ದೃಶ್ಯಗಳಲ್ಲಿ ಭಾಗವಹಿಸುವಂತಿಲ್ಲ ಹಾಗೂ ಓಡುವಂತಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video