Rakshit Shetty: ನಡೀತಿದೆಯಾ ರಕ್ಷಿತ್ ಶೆಟ್ಟಿ ಹೆಸರು ಕೆಡಿಸೋ ಸಂಚು..! ನಟನಿಗೆ ಧೈರ್ಯ ತುಂಬಿದ ಕೊರಗಜ್ಜ ದೈವ..!

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸ್ಯಾಂಡಲ್‌ವುಡ್‌ನ ವೇರಿ ಟ್ಯಾಲೆಂಟೆಡ್ ನಟ ಕಮ್ ನಿರ್ದೇಶಕ, ಹಾಗು ನಿರ್ಮಾಪಕ. ಆದ್ರೆ ರಕ್ಷಿತ್ ವಿವಾದಗಳಿಂದೇನು ಹೊರತಾಗಿಲ್ಲ. ರಕ್ಷಿತ್ ಬಗ್ಗೆ ಆಗಾಗ ಇಲ್ಲದ ಗಾಸಿಪ್ಗಳು ಹರಿದಾಡಿದ್ದು ಇದೆ. ಇದೀಗ ನಟ ರಕ್ಷಿತ್ ಶೆಟ್ಟಿಯ ಹೆಸರು ಕೆಡಿಸೋ ಸಂಚೊಂದು ನಡೆಯುತ್ತಿದೆಯಂತೆ. ಈ ವಿಷಯವನ್ನ ಮಂಗಳೂರಿನಲ್ಲಿ ಭೂತ ಕೋಲಕ್ಕೆ ಹೋಗಿದ್ದಾಗ ದೈವವೊಂದು ರಕ್ಷಿತ್ ಎದುರಲ್ಲೇ ನಿನ್ನ ಹೆಸರು ಕೆಡಿಸೋ ಸಂಚು ನಡೆಯುತ್ತಿದೆ ಎಂದಿದೆ. 

Share this Video
  • FB
  • Linkdin
  • Whatsapp

ರಕ್ಷಿತ್ ಶೆಟ್ಟಿ ಇತ್ತೀಚೆಗೆ ಕರಾವಳಿಯ ಕಾರ್ಣಿಕದ ಬಬ್ಬು ಸ್ವಾಮಿ ದೈವದ(Daiva) ನೇಮೋತ್ಸವದಲ್ಲಿ ಪಾಲ್ಗೊಂಡಿದ್ರು. ಆಗ ತಮ್ಮ ಮುಂದಿನ ಸಿನಿ ಯೋಜನೆಗಳಿಗೆ ಯಾವುದೇ ಸಮಸ್ಯೆ ಆಗದಂತೆ ನಿರ್ವಿಘ್ನವಾಗಿ ನಡೆಸಿಕೊಡಬೇಕೆಂದು ಕೊರಗಜ್ಜ ದೈವದ ಬಳಿ ರಕ್ಷಿತ್ ಶೆಟ್ಟಿ(Rakshit Shetty) ಕೋರಿದ್ದಾರೆ. ಆಗ ನಿನ್ನ ಕೆಲಸ ಕಾರ್ಯಗಳಲ್ಲಿ ನೀನು ಧೈರ್ಯವಾಗಿ ಮುಂದೆ ಸಾಗು. ಯಾವುದೇ ವಿಘ್ನ ಎದುರಾದಂತೆ ನೋಡಿಕೊಳ್ಳಲು ನಾನಿದ್ದೇನೆ. ಕೆಲವರು ನಿನ್ನ ಹೆಸರನ್ನು ಕೆಡಿಸಲು ಹೊಂಚು ಹಾಕುತ್ತಿದ್ದಾರೆ. ಅದು ನನಗೂ ಗೊತ್ತಾಗಿದೆ. ಅಂತಹ ದುಷ್ಟ ಶಕ್ತಿಗಳನ್ನು ನನ್ನ ಕಾಲ ಬುಡದಲ್ಲಿಟ್ಟು ನಿನ್ನ ಜೊತೆ ನಿಲ್ಲುತ್ತೇನೆ ಎಂದು ರಕ್ಷಿತ್ ಶೆಟ್ಟಿಗೆ ಕೊರಗಜ್ಜ(Koragajja) ಅಭಯ ನೀಡಿದೆ. ಈ ವೀಡಿಯೋ ಈಗ ವೈರಲ್ ಆಗುತ್ತಿದೆ. ನಟ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಸಿನಿಮಾ ಮಾಡುತ್ತಿದ್ದಾರೆ. ರಿಚರ್ಡ್ ಆಂಟನಿ ಸಿನಿಮಾ(Richard Anthony Movie) ಅನೌನ್ಸ್ ಆಗಿ ಎರಡು ವರ್ಷ ಆಗಿದೆ. ಆದ್ರೆ ಸಿನಿಮಾ ಇನ್ನೂ ಶೂಟಿಂಗ್ ಟೇಕಾಫ್ ಆಗಿಲ್ಲ. ಇದರ ಮಧ್ಯೆ ಆಗಾಗ ರಕ್ಷಿತ್ ಪರ್ಸನ್ ಲೈಫ್ ಬಗ್ಗೆಯೂ ಸುದ್ದಿಯಾಗುತ್ತಿರುತ್ತೆ. ರಕ್ಷಿತ್ ಶೆಟ್ಟಿ ಮದುವೆ, ಲವ್ ಬಗ್ಗೆ ಹಲವು ಗಾಸಿಪ್ಗಳು ಹರಿದಾಡಿವೆ. ಇದನ್ನೆಲ್ಲಾ ಮಾಡುತ್ತಿರೋದು ಯಾರು.? ರಕ್ಷಿತ್ ಹೆಸರು ಹಾಳು ಮಾಡೋ ಸಂಜು ರೂಪಿಸುತ್ತಿರೋದು ಯಾರು.? ಅನ್ನೋದು ಗೊತ್ತಿಲ್ಲ. ಭಟ್ ಅಂಥವರಿಗೆ ಶಿಕ್ಷೆ ನಾನು ಕೊಡುತ್ತೇನೆ ಅಂತ ಕೊರಗಜ್ಜ ದೈವ ರಕ್ಷಿತ್ ಶೆಟ್ಟಿಗೆ ಅಭಯ ಕೊಟ್ಟಿದೆ. ಹೀಗಾಗಿ ರಕ್ಷಿತ್ ಈಗ ನಿರಾಳವಾಗಿ ತನ್ನ ರಿಚರ್ಡ್ ಆಂಟನಿ ಶೂಟಿಂಗ್ ಮಾಡ್ಬಹುದು.

ಇದನ್ನೂ ವೀಕ್ಷಿಸಿ: Sandalwood: ಪಂಚವಾರ್ಷಿಕ ಯೋಜನೆಯಲ್ಲಿ ರಾಕಿಂಗ್ ಸ್ಟಾರ್ ಯಶ್..! ತ್ರೈಮಾಸಿಕ ಯೋಜನೆಯಲ್ಲಿ ಧ್ರುವ ಸರ್ಜಾ..!

Related Video