ಪರಪ್ಪನ ಅಗ್ರಹಾರ ಜೈಲು ಸೇರಿ ಕಂಗಾಲಾದ ನಟ ದರ್ಶನ್: ಒಂದೆಡೆ ಊಟ ಸೇರ್ತಿಲ್ಲ, ಜೈಲು ವಾಸ ಸಹಿಸೋಕೆ ಆಗ್ತಿಲ್ಲ!

ಈಗ ದರ್ಶನ್ ಜೈಲು ವಾಸಕ್ಕೆ ಎಷ್ಟು ದಿನ ಆಯ್ತು ಅಂತ ಹೇಳಬೇಕಾದ ಸ್ಥಿತಿ ಬಂದಿದೆ. ಶೆಡ್ ಹೀರೋ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 28 ದಿನ ಆಗಿದೆ. ಸಧ್ಯ ನ್ಯಾಯಾಂಗ ಬಂಧನದಲ್ಲಿರೋ ದರ್ಶನ್​​​ ಜೈಲು ವಾಸದ ವಿಚಾರಣೆ ಕೋರ್ಟ್​​ನಲ್ಲಿ ಮತ್ತೆ ನಡೆಯಲಿದೆ.

First Published Jul 18, 2024, 1:37 PM IST | Last Updated Jul 18, 2024, 1:55 PM IST

ನೋವು.. ಹತಾಶೆ.. ಸಂಕಟ.. ಈ ಜೀವನ ಬೇಕಿತ್ತಾ ಅನ್ನೋ ಚಿಂತೆ. ಇಂತಹ ಕೆಲಸ ಮಾಡಬಾರದಿತ್ತು ಅಂತ ಪದೇ ಪದೇ ಕಾಡೋ ಪ್ರಶ್ನೆ. ಹೈ ಫೈ ಲೈಫ್ ಇಲ್ಲ. ಸುತ್ತ ಮುತ್ತ ಜನರ ಗ್ಯಾಂಗ್ ಇಲ್ಲ. ಬೇಕಾದ ಹಾಗೆ ಇರೋಕೆ ಆಗುತ್ತಿಲ್ಲ. ಇದು ಕಿಲ್ಲಿಂಗ್ ಸ್ಟಾರ್​ ಅನ್ನೋ ಪಟ್ಟ ಅಲಂಕರಿಸಿರೋ ನಟ ದರ್ಶನ್ ಸಧ್ಯದ ಸ್ಥಿತಿ. ನಟ ದರ್ಶನ್​ ಸಿನಿ ಜರ್ನಿಗೆ 25 ವರ್ಷ. ಈ 25 ವರ್ಷದಲ್ಲಿ ದರ್ಶನ್​​ ಹಲವು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಹಾಗೆ ಹಿಟ್ ಆದ ಸಿನಿಮಾಗಳ ಬಗ್ಗೆ ಹೇಳುವಾಗ ಆ ಸಿನಿಮಾ ಇಷ್ಟು ದಿನ ರನ್​ ಆಯ್ತು. ಈ ಸಿನಿಮಾ ಪ್ರದರ್ಶನ ಇಷ್ಟು ದಿನ ಆಯ್ತು ಅಂತ ಫ್ಯಾನ್ಸ್ ಹೇಳುತ್ತಿದ್ರು. ಈಗ ದರ್ಶನ್ ಜೈಲು ವಾಸಕ್ಕೆ ಎಷ್ಟು ದಿನ ಆಯ್ತು ಅಂತ ಹೇಳಬೇಕಾದ ಸ್ಥಿತಿ ಬಂದಿದೆ. ಶೆಡ್ ಹೀರೋ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 28 ದಿನ ಆಗಿದೆ. ಸಧ್ಯ ನ್ಯಾಯಾಂಗ ಬಂಧನದಲ್ಲಿರೋ ದರ್ಶನ್​​​ ಜೈಲು ವಾಸದ ವಿಚಾರಣೆ ಕೋರ್ಟ್​​ನಲ್ಲಿ ಮತ್ತೆ ನಡೆಯಲಿದೆ.

ದರ್ಶನ್ ಆ್ಯಂಡ್ ಗ್ಯಾಂಗ್ ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿ ದಿನ ದೂಡುತ್ತಿದ್ದಾರೆ. ಜುಲೈ 18 ಎಲ್ಲಾ 17 ಜನ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗುತ್ತಿದೆ. ಆದ್ರೆ ಈ ಕೇಸ್​ನಿಂದ ಹೊರ ಬರೋದು ಅಷ್ಟು ಸುಲಭ ಅಲ್ಲ ಅನ್ನೋದು ದರ್ಶನ್​​ ಗೆ ಗೊತ್ತಾಗಿದೆ. ಅಷ್ಟೆ ಅಲ್ಲ ಈ ಕೇಸ್​ ನಲ್ಲಿ ಪೊಲೀಸರು ಇನ್ನೂ ಚಾರ್ಜ್​ ಶೀಟ್ ಸಲ್ಲಿಸಿಲ್ಲ. ಕೇಸ್​ನಿಂದ ಹೊರ ಬರೋದು ದರ್ಶನ್​​ಗೆ ಕಬ್ಬಿಣದ ಕಡಲೆ ಆಗಿದೆ. ಹೀಗಾಗಿ ಇದುವರೆಗೂ ದರ್ಶನ್​ ಜಾಮೀನು ಅರ್ಜಿಯನ್ನೇ ಸಲ್ಲಿಸಿಲ್ಲ. ರೇಣುಕಾ ಸ್ವಾಮಿ ಮರ್ಡರ್​ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರೋ ದರ್ಶನ್​​​​​ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ ಆಗೋ ಸಾಧ್ಯತೆ ಇದೆ. ಇದನ್ನ ಅರಿತಿರೋ ದರ್ಶನ್ ಜಾಮೀನು ಅರ್ಜಿಯನ್ನೇ ಸಲ್ಲಿಸಿಲ್ಲ. ಯಾಕಂದ್ರೆ ದರ್ಶನ್ ಗೆ ಗೊತ್ತಿದೆ ಈಗಲೇ ಜಾಮೀನು ಅರ್ಜಿ ಸಲ್ಲಿಸಿದರೆ ಪ್ರಯೋಜ‌ ಇಲ್ಲ ಅಂತ. 

ಹೀಗಾಗಿ ಸದ್ಯ ಜೈಲಿನಲ್ಲೇ ಇದ್ದುಕೊಂಡು ಒಳ್ಳೆಯ ಊಟ, ಸೌಲಭ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಜುಲೈ 18ರಂದು ದರ್ಶನ್ ಗುಂಪಿನ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ಆದ್ರೆ ದರ್ಶನ್ ಗ್ಯಾಂಗ್​ಗೆ ಜಾಮೀನು ನೀಡಬಾರದು ಅಂತ ಪೊಲೀಸರು ಮತ್ತೆ ಕೋರ್ಟ್​​ಗೆ ಮನವಿ ಮಾಡಲಿದ್ದಾರೆ. ಯಾಕಂದ್ರೆ ಇದು ಕೊಲೆ ಕೇಸ್​. ಆರೋಪಿಗಳಿಗೆ ಜಾಮೀನು ಕೊಟ್ಟರೆ ಸಾಕ್ಷ್ಯ ನಾಶ ಆಗುತ್ತೆ. ಕೊಲೆ ಬಳಿಕ ಸಾಕ್ಷ್ಯ ನಾಶಕ್ಕೆ ದರ್ಶನ್ ಗ್ಯಾಂಗ್ ಮುಂದಾಗಿತ್ತು. ಜೊತೆಗೆ ದರ್ಶನ್​ಗೆ ಪ್ರಭಾವ ಬೀರೋ ಶಕ್ತಿ ಇದೆ. ವಿದೇಶಕ್ಕೂ ಹೊರಟು ಹೋಗೋ ಸಾಧ್ಯತೆ ಇದೆ. ಸೇರಿದಂತೆ ಒಟ್ಟು ಎಂಟು ಕಾರಣಗಳನ್ನ  ಪೊಲೀಸರು ಕೋರ್ಟ್​ ಮುಂದಿಡಲಿದ್ದಾರೆ.