ಸದ್ಯಕ್ಕೆ ನಟ ದರ್ಶನ್ 'ಡೆವಿಲ್' ಸಿನಿಮಾ ಶೂಟಿಂಗ್ ಮಾಡೋಕೆ ಸಾಧ್ಯವೇ ಇಲ್ವಾ?

ಗನ್ ಸರೆಂಡರ್​ಗೆ ಸೂಚನೆ ಬರ್ತಾ ಇದ್ದ ಹಾಗೇನೇ ದರ್ಶನ್ ತನ್ನ ಬಳಿ ಇರೋ ಎರಡು ಪಿಸ್ತೂಲ್ ಗಳು ಮತ್ತು ಗನ್ ಲೈಸೆನ್ಸ್​ನ ಪೊಲೀಸರಿಗೆ ಸರೆಂಡರ್ ಮಾಡಿದ್ದಾರೆ. ಸಾಮಾನ್ಯವಾಗಿ ಕೊಲೆ ಕೇಸ್​ನಲ್ಲಿ ಆರೋಪಿಯಾದವರ ಬಳಿ ಗನ್ ಇಟ್ಟುಕೊಳ್ಳಲಿಕ್ಕೆ ಪೊಲೀಸ್ ಇಲಾಖೆ ಅನುಮತಿ..

Share this Video
  • FB
  • Linkdin
  • Whatsapp

ನಟ ದರ್ಶನ್​ಗೆ (Darshan) ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಜಾಮೀನೇನೋ ಸಿಕ್ಕಿದೆ. ಆದ್ರೆ ಕೋರ್ಟ್ ಹಲವು ಷರತ್ತುಗಳನ್ನ ವಿಧಿಸಿದೆ. ಪೊಲೀಸರು ದರ್ಶನ್ ನಡೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇತ್ತೀಚಿಗೆ ದರ್ಶನ್ ಬಳಿ ಇರೋ ಲೈಸೆನ್ಸ್​ ರದ್ದು ಮಾಡೋ ಕುರಿತು ನೋಟೀಸ್ ನೀಡಲಾಗಿತ್ತು. ಇದಕ್ಕೆ ಉತ್ತರಿಸಿದ್ದ ದರ್ಶನ್‌ ವಕೀಲರು ನಟನ ಸೆಕ್ಯೂರಿಟಿಗೆ ಗನ್ ಬೇಕೆ ಬೇಕು ಅಂತ ವಾದಿಸಿದ್ದರು. ಆದ್ರೆ ಪೊಲೀಸ್ ಇಲಾಖೆ ಇದಕ್ಕೆ ಅವಕಾಶ ಕೊಡದೇ, ದರ್ಶನ್ ಗನ್ ಪರವಾನಿಗೆಯನ್ನ ತಾತ್ಕಾಲಿಕವಾಗಿ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.

ಗನ್ ಸರೆಂಡರ್​ಗೆ ಸೂಚನೆ ಬರ್ತಾ ಇದ್ದ ಹಾಗೇನೇ ದರ್ಶನ್ ತನ್ನ ಬಳಿ ಇರೋ ಎರಡು ಪಿಸ್ತೂಲ್ ಗಳು ಮತ್ತು ಗನ್ ಲೈಸೆನ್ಸ್​ನ ಪೊಲೀಸರಿಗೆ ಸರೆಂಡರ್ ಮಾಡಿದ್ದಾರೆ. ಸಾಮಾನ್ಯವಾಗಿ ಕೊಲೆ ಕೇಸ್​ನಲ್ಲಿ ಆರೋಪಿಯಾದವರ ಬಳಿ ಗನ್ ಇಟ್ಟುಕೊಳ್ಳಲಿಕ್ಕೆ ಪೊಲೀಸ್ ಇಲಾಖೆ ಅನುಮತಿ ಕೊಡೋದಿಲ್ಲ. ಸದ್ಯ ದರ್ಶನ್​ ಕೂಡ ರೇಣುಕಾಸ್ವಾಮಿ ಮರ್ಡರ್ ಕೇಸ್​ನಲ್ಲಿ ಎ2 ಆಗೊರೋದ್ರಿಂದ ಗನ್ ಲೈಸೆನ್ಸ್ ರದ್ದು ಮಾಡಲಾಗಿದೆ. ಈ ಕೇಸ್​​ ಮುಕ್ತಾಯ ಆಗೀವರೆಗೂ ಗನ್ ಮುಟ್ಟಂಗಿಲ್ಲ ಅಂತ ಎಚ್ಚರಿಕೆ ಕೊಡಲಾಗಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

Related Video