ದರ್ಶನ್ ಬೇಲ್ ರದ್ದು ಮಾಡಲು 7 ಕಾರಣ ಕೊಟ್ಟ ವಕೀಲರು; ಮತ್ತೆ ಜೈಲು?
ದರ್ಶನ್ಗೆ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಬೇಲ್ ಸಿಕ್ಕಿದರೂ ಪೂರ್ಣ ರಿಲೀಫ್ ಸಿಕ್ಕಿಲ್ಲ. ರಾಜ್ಯ ಸರ್ಕಾರ ದರ್ಶನ್ಗೆ ನೀಡಿರುವ ಬೇಲ್ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ದರ್ಶನ್ಗೆ ಬೇಲ್ ಸಿಕ್ಕಿದ್ರೂ ಪೂರ್ಣ ರಿಲೀಫ್ ಅಂತೂ ಸಿಕ್ಕಿಲ್ಲ. ಅದ್ರಲ್ಲೂ ರಾಜ್ಯಸರ್ಕಾರ ದರ್ಶನ್ ಗೆ ನೀಡಿರೋ ಬೇಲ್ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಒಂದು ಕಡೆ ಬೇಲ್ ಜೊತೆಗೆ ದರ್ಶನ್ಗೆ ಅನೇಕ ಷರತ್ತು ವಿಧಿಸಲಾಗಿದೆ. ಜೊತೆಗೆ ರಾಜ್ಯ ಸರ್ಕಾರ ದರ್ಶನ್ಗೆ ಕೊಟ್ಟಿರೋ ಬೇಲ್ ವಜಾ ಮಾಡಿ ಅಂತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ನ ಮೊದಲ ಹೀಯರಿಂಗ್ ನಡೆದಿದೆ.ಸೋ ಈ ಅರ್ಜಿ ಸ್ವೀಕರಿಸಿರೋ ಸುಪ್ರೀಂ ಕೋರ್ಟ್ ದರ್ಶನ್ ಸೇರಿ 7 ಆರೋಪಿಗಳಿಗೆ ನೋಟೀಸ್ ನೀಡಿದೆ. ಜೊತೆಗೆ ವಿಚಾರಣೆಯನ್ನ ಮುಂದಕ್ಕೆ ಹಾಕಿದ್ದು, ವಾದ ಪ್ರತಿವಾದ ಆಲಿಸಿ ಅಂತಿಮ ತೀರ್ಪು ನೀಡಲಿದೆ. ಒಂದು ವೇಳೆ ಸುಪ್ರೀಂನಲ್ಲಿ ಬೇಲ್ ರದ್ದಾದ್ರೆ, ದರ್ಶನ್ ಮತ್ತೆ ಬಳ್ಳಾರಿ ಜೈಲು ಸೇರಬೇಕಾಗುತ್ತೆ.
ಮಲಗಿ 10 ನಿಮಿಷಕ್ಕೆ ಕನಸಿನಲ್ಲಿ ಕಪ್ಪು ಕಾಣಿಸುತ್ತಿತ್ತು...ತಂದೆಗೆ ಮುಕ್ತಿ ಸಿಕ್ಕಿರಲಿಲ್ಲ: ನೀತು ಶೆಟ್ಟಿ