Abhishek Ambareesh Engagement; ಪ್ರೀತಿಸಿದ ಹುಡುಗಿ ಜೊತೆ ಅಭಿಷೇಕ್ ನಿಶ್ಚಿತಾರ್ಥ

ಪ್ರೀತಿಸಿದ ಹುಡುಗಿ ಜೊತೆ ನಟ ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥ ಮಾಡಿಕೊಂಡಿರು. ಅವಿವಾ ಮತ್ತು ಅಭಿಷೇಕ್ ಅವರದ್ದು 4 ವರ್ಷದ ಪ್ರೀತಿ.

Share this Video
  • FB
  • Linkdin
  • Whatsapp

ನಟ, ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಷ್ ಬಹುಕಾಲದ ಗೆಳತಿ ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಇಂದು (ಡಿಸೆಂಬರ್ 11) ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥ ಸಮಾರಂಭದಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದ ಉಂಗುರ ಬದಲಾಯಿಸಿಕೊಂಡರು. ಅಂದಹಾಗೆ ಇಬ್ಬರದ್ದು 4 ವರ್ಷದ ಪ್ರೀತಿ. ಇದೀಗ ಇಬ್ಬರೂ ಅಧಿಕೃತವಾಗಿ ಹಿರಿಯ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡರು. ಅಭಿಷೇಕ್ ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಸದ್ಯ ಅಭಿಷೇಕ್ ನಿಶ್ಚಿತಾರ್ಥದ ವಿಡಿಯೋ ಮತ್ತು ಫೋಟೋ ಲೀಕ್ ಆಗಿದ್ದು ವೈರಲ್ ಆಗಿದೆ. ಅಭಿಷೇಕ್ ಮತ್ತು ಅವಿವಾ ಜೋಡಿಗೆ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.

Related Video