Asianet Suvarna News Asianet Suvarna News

Rishab Shetty: ಕಾಂತಾರ ಹುಟ್ಟಿದ ಕೆರಾಡಿ ಫಿಲಂ ಸಿಟಿಯ ಒಂದು ರೌಂಡ್!

ಈಗಾಗಲೇ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅಭಿನಯದ ಕಾಂತಾರ ಸಿನಿಮಾ ಮನುಷ್ಯ ಹಾಗೂ ಪರಿಸರದ ನಡುವಿನ ಸಂಬಂಧದ ಕಥೆ ಅನ್ನೋದನ್ನು ಸ್ಪಷ್ಟ ಪಡಿಸಿದ್ದಾರೆ. ಈ ಸಂಘರ್ಷಕ್ಕಾಗಿಯೇ ಕಾಂತಾರ ತಂಡ ಒಂದು ಊರಿನ ಸೆಟ್ಟನೇ ಹಾಕಿತ್ತು. ಆ ಸೆಟ್ಟಿನ ಸುತ್ತನೇ ಹಲವು ಇಂಟ್ರೆಸ್ಟಿಂಗ್ಸ್‌ ಸ್ಟೋರಿಗಳಿವೆ.

ಈಗಾಗಲೇ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅಭಿನಯದ ಕಾಂತಾರ ಸಿನಿಮಾ ಮನುಷ್ಯ ಹಾಗೂ ಪರಿಸರದ ನಡುವಿನ ಸಂಬಂಧದ ಕಥೆ ಅನ್ನೋದನ್ನು ಸ್ಪಷ್ಟ ಪಡಿಸಿದ್ದಾರೆ. ಈ ಸಂಘರ್ಷಕ್ಕಾಗಿಯೇ ಕಾಂತಾರ ತಂಡ ಒಂದು ಊರಿನ ಸೆಟ್ಟನೇ ಹಾಕಿತ್ತು. ಆ ಸೆಟ್ಟಿನ ಸುತ್ತನೇ ಹಲವು ಇಂಟ್ರೆಸ್ಟಿಂಗ್ಸ್‌ ಸ್ಟೋರಿಗಳಿವೆ. ಹೌದು! ಕಾಂತಾರ 90ರ ದಶಕದ ಕಾಲಘಟ್ಟದಲ್ಲಿ ನಡೆಯೋ ಕಥೆಯಾಗಿದ್ದರಿಂದ ಸೆಟ್ಟು ಹಾಕಿ ಶೂಟ್ ಮಾಡಬೇಕಿತ್ತು. ಇದೊಂದು ಕಾಲ್ಪನಿಕ ಕಥೆಯಾಗಿದ್ದರೂ, ಈ ಕಥೆಯೊಳಗೆ ಬಂದಿರೋ ಸನ್ನಿವೇಶಗಳು ರಿಯಲ್. ಕರಾವಳಿ ಭಾಗದ ಬಹುತೇಕ ಎಲ್ಲಾ ಭಾಗಗಳನ್ನು ಟಚ್ ಮಾಡಿರೋ ಸಿನಿಮಾ. ಹೀಗಾಗಿ ಸೆಟ್ ಪ್ರಮುಖ ಪಾತ್ರವಹಿಸಿದೆ. ಆ ಸೆಟ್ ಹಾಕಿದ ಬಳಿಕ ಹುಟ್ಟಿಕೊಂಡಿದ್ದೇ ಕೆರಾಡಿ ಫಿಲಂ ಸಿಟಿ. ಇನ್ನು ಚಿತ್ರದಲ್ಲಿ ಬರುವ ಇಂಚಿಂಚು ದೃಶ್ಯದ ಬಗೆಗೂ ಜನರಲ್ಲಿ ಕುತೂಹಲವಿದೆ. ಈ ಚಿತ್ರದಲ್ಲಿ ಬರುವ ಗುತ್ತಿನ ಮನೆಯ ಗತ್ತು, ಕಾಂತಾರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರಿಗೂ ಗೊತ್ತು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories