
Puneeth Rajkumar ಅಗಲಿ ಇಂದಿಗೆ ಮೂರು ತಿಂಗಳು: ಕುಟುಂಬದಿಂದ ಸಮಾಧಿಗೆ ಪೂಜೆ
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನರಾಗಿ ಇಂದಿಗೆ ಮೂರು ತಿಂಗಳುಗಳೇ ಕಳೆದು ಹೋಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನರಾಗಿ ಇಂದಿಗೆ ಮೂರು ತಿಂಗಳುಗಳೇ ಕಳೆದು ಹೋಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಂಠೀರವ ಸ್ಟುಡಿಯೋ (Kanteerava Studio) ಆವರಣದಲ್ಲಿ ಇರುವ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಸಮಾಧಿ ಬಳಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪುತ್ರಿ ಧೃತಿ, ರಾಘವೇಂದ್ರ ರಾಜ್ ಕುಮಾರ್ ಮತ್ತು ಅವರ ಪತ್ನಿ ಹಾಗೂ ವಿಜಯ್ ರಾಘವೇಂದ್ರ, ಧೀರೇನ್ ರಾಮ್ ಕುಮಾರ್, ಪುನೀತ್ ಸಹೋದರಿ ಲಕ್ಷ್ಮೀ ಹಾಗೂ ಎಸ್.ಎ.ಗೋವಿಂದ್ ರಾಜು ಸಮಾಧಿಗೆ ಪೂಜೆ ಪೂಜೆ ಮಾಡಿ ಅಪ್ಪುಗೆ ಎಡೆ ಇಟ್ಟಿದ್ದಾರೆ.
James ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ಯಾರೂ ಧ್ವನಿ ನೀಡುತ್ತಿಲ್ಲ!
ಬಳಿಕ ಅಪ್ಪು ನೆನಪಿಗಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಾದಾಮಿ, ಸೀಬೆ, ಮಾವು, ತೇಗ, ಹಲಸಿನ ಗಿಡ ಸೇರಿದಂತೆ 500 ಗಿಡಗಳನ್ನು ಅಭಿಮಾನಿಗಳಿಗೆ ದಾನವಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ಅಪ್ಪು ಅಭಿಮಾನಿಗಳು ಭಕ್ತರಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಪುಣ್ಯಭೂಮಿಗೆ ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಅಭಿಮಾನಿಗಳಿಗೆ ಗಿಡ ಕೊಟ್ಟು ಅವರಿಂದಲೇ ಆ ಸಸಿಗಳನ್ನು ನೆಡಲು ಯೋಚಿಸಿದ್ದೇವೆ. ಅಪ್ಪು ನಿಧನರಾಗುವ ಮುನ್ನ ಕಾಡಿನಲ್ಲಿ ಕೆಲಸ ಮಾಡಿದ್ದರು. ಕಾಡು, ಹಸಿರು ಅಂದರೆ ಅಪ್ಪುಗೆ ಬಹಳ ಇಷ್ಟ. ಹಾಗಾಗಿ ಗಿಡ ನೀಡುವ ಕೆಲಸ ಶುರು ಮಾಡಿದ್ದಿವಿ ಎಂದು ಹೇಳಿದರು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment