Asianet Suvarna News Asianet Suvarna News

ಒಂದೇ ದಿನ ಸಲಗ ಮತ್ತು ಕೋಟಿಗೊಬ್ಬ.. ದುನಿಯಾ ವಿಜಯ್  ನಂಬಿಕೆ!

* ರಾಜ್ಯದಲ್ಲಿ ಕೊರಾನಾ ಕೇಸ್ ತಗ್ಗಿದ ಹಿನ್ನೆಲೆ ಚಿತ್ರರಂಗದ ಮಂದಿಗೆ  ಸಿಹಿ ಸುದ್ದಿ.

* ಚಿತ್ರಮಂದಿರಗಳಲ್ಲಿ  100% ಸೀಟು  ಬರ್ತಿಗೆ ಸಿಕ್ಕಿದೆ ಅವಕಾಶ

* ಬಿಗ್ ಬಜೆಟ್ ಚಿತ್ರಗಳು ತೆರೆಗೆ ತರಲು ತಯಾರಿ..

* ಎರಡು‌ ವಾರಕ್ಕೆ ಒಂದು ಬಿಗ್ ಬಜೆಟ್ ಚಿತ್ರವನ್ನ ಬಿಡುಗಡೆ ಮಾಡಲು ನಿರ್ಮಾಪಕರ ಒಡಂಬಡಿಕೆ.

Sep 26, 2021, 7:50 PM IST

ಬೆಂಗಳೂರು(ಸೆ. 26) ಅಕ್ಟೋಬರ್ 14 ರಂದು ಎರಡು ಬಿಗ್  ಬಜೆಟ್ ಸಿನಿಮಾಗಳು(Sandalwood) ರಿಲೀಸ್  ಆಗುತ್ತಿವೆ.  ಹಲವು ದಿನಗಳ ಸಿನಿಪ್ರಿಯರ ಮತ್ತು ಸ್ಯಾಂಡಲ್‌ವುಡ್ ನ ಬೇಡಿಕೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದ್ದು   ಅಕ್ಟೋಬರ್ 1 ರಿಂದ ಚಿತ್ರಮಂದಿರಗಳಲ್ಲಿ ಶೇ. 100  ಹಾಜರಾತಿಗೆ ಅವಕಾಶ ನೀಡಲಾಗುತ್ತಿದೆ.

ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚುತ್ತಿರುವ ದಕ್ಷಿಣ ಕನ್ನಡದ ಹುಡುಗ

ಸಲಗ(Salaga) ರಿಲೀಸ್ ಆಗುತ್ತಿದ್ದು ನಟ-ನಿರ್ದೇಶಕ ದುನಿಯಾ ವಿಜಯ್(Duniya Vijay) ಮಾತನಾಡಿದ್ದಾರೆ. ಅದೇ ದಿನ ಕಿಚ್ಚ ಸುದೀಪ್ (Sudeep) ಕೋಟಿಗೊಬ್ಬ 3  ಸಿನಿಮಾ ರಿಲೀಸ್ ಆಗುತ್ತಿದ್ದು ಸಿನಿಪ್ರಿಯರಿಗೆ ಹಬ್ಬ ಇದೆ. ದಸರಾ ರಜೆ ಕಾರಣಕ್ಕೆ ತೆರೆಗೆ ಚಿತ್ರಗಳು ಅಪ್ಪಳಿಸುತ್ತಿವೆ.